ಮಲಾವಿ ಉಪಾಧ್ಯಕ್ಷರಿದ್ದ ವಿಮಾನ ನಾಪತ್ತೆ

Ravi Talawar
ಮಲಾವಿ ಉಪಾಧ್ಯಕ್ಷರಿದ್ದ ವಿಮಾನ ನಾಪತ್ತೆ
WhatsApp Group Join Now
Telegram Group Join Now

ನವದೆಹಲಿ: ಪೂರ್ವ ಆಫ್ರಿಕಾದ ಮಲಾವಿ ದೇಶದ ಉಪಾಧ್ಯಕ್ಷರಿದ್ದ ವಿಮಾನ ನಾಪತ್ತೆಯಾಗಿದ್ದು, ಪತನಗೊಂಡಿರುವ ಆತಂಕ ವ್ಯಕ್ತವಾಗುತ್ತಿದೆ.

ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಮತ್ತು ಇತರ ಒಂಬತ್ತು ಜನರಿದ್ದ ವಿಮಾನ ಸೋಮವಾರ ನಿಗದಿತ ಸಮಯಕ್ಕೆ ವಿಮಾನ ಇಳಿಯಲು ವಿಫಲವಾಗಿದೆ. ಈ ವೇಳೆ ವಿಮಾನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

ಸ್ಥಳೀಯ ಕಾಲಮಾನ 9:17 a.m. (3.17 a.m. ET) ಕ್ಕೆ ಲಿಲಾಂಗ್ವೆಯಿಂದ ಹೊರಟ ಮಲಾವಿ ರಕ್ಷಣಾ ಪಡೆ ವಿಮಾನದಲ್ಲಿ ಚಿಲಿಮಾ ಮತ್ತು ಇತರ ಪ್ರಯಾಣಿಕರು ಇದ್ದರು ಎಂದು ಮಲಾವಿ ಅಧ್ಯಕ್ಷೀಯ ಕಚೇರಿ ಮತ್ತು ಕ್ಯಾಬಿನೆಟ್ ಹೇಳಿಕೆಯಲ್ಲಿ ತಿಳಿಸಿದೆ.

ಅಧಿಕಾರಿಗಳ ಪ್ರಕಾರ, ವಿಮಾನವು Mzuzu ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ವಿಮಾನದ ಕೊನೆಯ ಸಿಗ್ನಲ್ ಲಿಲೋಂಗ್ವೆಯ ಉತ್ತರಕ್ಕೆ ಸರಿಸುಮಾರು 380 km (240 ಮೈಲುಗಳು) ಪತ್ತೆಯಾಗಿದೆ ಎಂದು CNN ವರದಿ ಮಾಡಿದೆ.

“ರಾಡಾರ್‌ನಿಂದ ಹೊರಗುಳಿದ ನಂತರ ವಿಮಾನದೊಂದಿಗೆ ಸಂಪರ್ಕ ಸಾಧಿಸಲು ವಾಯುಯಾನ ಅಧಿಕಾರಿಗಳು ನಡೆಸಿದ ಎಲ್ಲಾ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ” ಎಂದು ಅಧ್ಯಕ್ಷೀಯ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Share This Article