ನೇಗಿನಹಾಳದ ಕುಂಕೂರ ಕುಟುಂಬದಿಂದ ಬಸವಣ್ಣನವರ ಅಮೃತಶಿಲಾ ಮೂರ್ತಿ, ಬೆಳ್ಳಿಯ ಮೂರ್ತಿ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ದೇಣಿಗೆ

Ravi Talawar
ನೇಗಿನಹಾಳದ ಕುಂಕೂರ ಕುಟುಂಬದಿಂದ ಬಸವಣ್ಣನವರ ಅಮೃತಶಿಲಾ ಮೂರ್ತಿ, ಬೆಳ್ಳಿಯ ಮೂರ್ತಿ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ದೇಣಿಗೆ
WhatsApp Group Join Now
Telegram Group Join Now

ನೇಗಿನಹಾಳ: ವಿಶ್ವಗುರು ಬಸವಣ್ಣನವರು 12ನೆಯ ಶತಮಾನದಲ್ಲಿ ಲಕ್ಷದಮೇಲೆ ತೋಂಬತ್ತಾರು ಸಾವಿರ ಶರಣರನ್ನು ಒಗ್ಗೂಡಿಸಿಕೊಂಡು ಲಿಂಗಾಯತ ಧರ್ಮ ಸ್ಥಾಪಿಸಿದರು ಅವರ ಸೋದರ ಅಳಿಯ ಉಳವಿಯಲ್ಲಿ ಚನ್ನಬಸವಣ್ಣನವರು ಅವರ ಸನ್ನಿಧಾನದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿದೆ.

ನಮ್ಮೂರಿನ ಹೆಸರು ಉಳವಿಯ ಚನ್ನಬಸವೇಶ್ವರರ ಸನ್ನಿಧಿಯಲ್ಲಿ ಐತಿಹಾಸಿಕವಾಗಿ ಉಳಿಯಿತು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮುಖಂಡರಾದ ರೋಹಿಣಿ ಪಾಟೀಲ ಹೇಳಿದರು.

ಗ್ರಾಮದಲ್ಲಿ ನಡೆದ ವಿಶ್ವಗುರು ಬಸವಣ್ಣನವರ ಮೂರ್ತಿಗಳ ಮೆರೆವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಉಳವಿಯ ಚನ್ನಬಸವೇಶ್ವರ ಸನಿಧಿಯಲ್ಲಿ ನೂತನವಾಗಿ ಪ್ರತಿಷ್ಠಾಪನೆ ಗೊಳ್ಳಲಿರುವ ವಿಶ್ವಗುರು ಬಸವಣ್ಣನವರು ಮೂರ್ತಿ ಹಾಗೂ ಬಸವ ಜಯಂತಿ ಅಂದು ತೊಟ್ಟಿಲಿನಲ್ಲಿ ಹಾಕಲು ಬಾಲ ಬಸವಣ್ಣನವರ ಬೆಳ್ಳಿಯ ಮೂರ್ತಿಯನ್ನು ನೇಗಿನಹಾಳ ಗ್ರಾಮದ ಶರಣಶ್ರೀ
ರುದ್ರಪ್ಪ ಮಲ್ಲಪ್ಪ ಕುಂಕೂರ ನಿವೃತ್ತ ಶಿಕ್ಷಕರು. ಹಾಗೂ ಕುಟುಂಬದವರು ನೀಡಿದ್ದಾರೆ ಆ ಮೂರ್ತಿಯನ್ನು ಗ್ರಾಮದ ಶ್ರೀ ಜಗದ್ಗುರು
ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ, ಲಿಂಗಾಯತ ಮಹಿಳಾ ಮುಖಂಡರಾದ ಶರಣೆಶ್ರೀ ರೋಹಿಣಿ ಬಾಬಾಸಾಹೇಬ ಪಾಟೀಲ ಅವರು ಮೂರ್ತಿ ದಾಸೋಹಿಗಳಾದ ರುದ್ರಪ್ಪ ಕುಂಕೂರ ಅವರಿಗೆ ಗೌರವ ಸತ್ಕಾರ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ ಕೋಟಗಿ, ದೀಪಾ ಮರಕುಂಬಿ, ಶಿವಾನಂದ ಕುಂಕೂರ, ಸಿದ್ಧಾರೂಡ ಕುಂಕೂರ, ಪ್ರಸಾದ ಕುಂಕೂರ, ಬಸವರಾಜ ಕುಂಕೂರ, ಈರಣ್ಣಾ ಉಳವಿ, ಮಂಜುನಾಥ ಹಾರುಗೊಪ್ಪ, ಮಹಾಂತೇಶ ಮರಿತಮ್ಮನವರ, ಶಿವಾನಂದ ಮೆಟ್ಯಾಲ, ಅಜೀತ ಜೈನರ, ಸಂತೋಷ ಕಾಜಗಾರ, ಶ್ರೀಶೈಲ ತೋರಣಗಟ್ಟಿ, ನಾಗಪ್ಪ ತುರಮರಿ, ನಾಗರಾಜ ಕುಂಕೂರ, ಮಹಾದೇವ ಮುದ್ದೇಣ್ಣವರ, ಬಸವರಾಜ ಹಡಗಿನಹಾಳ ಹಾಗೂ ಭಜನಾ ಮೇಳದವರು, ಬ್ಯಾಂಡ್ ಬಾಜಿಯವರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article