ಇಸ್ರೇಲ್: ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಹಮಾಸ್ ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಈ ಕಾರಣದಿಂದಾಗಿ ಇಸ್ರೇಲ್ ಕೇಂದ್ರ ಗಾಜಾದಲ್ಲಿ ನೆಲ ಮತ್ತು ವಾಯುದಾಳಿಗಳನ್ನು ನಡೆಸುತ್ತಿದೆ.
ಈ ಇಸ್ರೇಲ್ ಒತ್ತೆಯಾಳು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ನಾಲ್ಕು ಜನರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಇಸ್ರೇಲಿ ದಾಳಿಯಲ್ಲಿ ಮಕ್ಕಳು ಸೇರಿದಂತೆ 274 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ.
26 ವರ್ಷದ ನೋಹ್ ಅರ್ಗಾಮಣಿ, 22 ವರ್ಷದ ಅಲ್ಮೊಗ್ ಮೀರ್ ಜಾನ್, 27 ವರ್ಷದ ಆಂಡ್ರೆ ಕೊಜ್ಲೋವ್ ಮತ್ತು 41 ವರ್ಷದ ಶ್ಲೋಮಿ ಝಿವ್ ಅವರನ್ನು ರಕ್ಷಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇವರೆಲ್ಲಾ ಕಳೆದ 246 ದಿನಗಳಿಂದ ಹಮಾಸ್ ವಶದಲ್ಲಿದ್ದು ಇದೀಗ ರಕ್ಷಿಸಲಾಗಿದೆ. ಅವರನ್ನು ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಇನ್ನು ತಮ್ಮ ಮಕ್ಕಳ ಮನೆ ಸೇರಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.