ದೆಹಲಿ, ಜೂ.8: ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ನೀಡಿದ್ದ 1 ಲಕ್ಷ ರೂ. ಗ್ಯಾರಂಟಿ ಇದೀಗ ಉಲ್ಟಾ ಹೊಡೆದಿದೆ. ಇಂಡಿಯಾ ನಾಯಕರು ಕಂಡಲ್ಲಿ ಜನರ ಅವರುನ್ನು ತಡೆದು 1 ಲಕ್ಷವನ್ನು ನೀಡುವಂತೆ ಮುತ್ತಿಗೆ ಹಾಕುತ್ತಿದ್ದಾರೆ.
ಇದರ ಪರಿಣಾಮ ದೆಹಲಿಯಲ್ಲಿ ಕಂಡು ಬಂದಿದೆ. ಹೌದು ಮೈತ್ರಿಕೂಟದ ನಾಯಕರಾದ ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್ ಅವರನ್ನು ದೆಹಲಿಯಲ್ಲಿ ಮಹಿಳೆಯರು ಮುತ್ತಿಗೆ ಹಾಕಿದ್ದಾರೆ.
ಶಿವಸೇನೆಯ ಯುಬಿಟಿಯ ಸಂಜಯ್ ರಾವುತ್ ಅವರನ್ನು ಭೇಟಿಯಾಗಲು ಹೊರಟಿದ್ದ ಎಎಪಿ ನಾಯಕರಾದ ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್ ಅವರ ಕಾರನ್ನು ದೆಹಲಿಯಲ್ಲಿ ಹಲವಾರು ಮಹಿಳೆಯರು ಸುತ್ತುವರೆದಿದ್ದರು. ರಾಹುಲ್ ಗಾಂಧಿ ಅವರು ನೀಡಿದ್ದ 1 ಲಕ್ಷ ರೂ. ಭರವಸೆಯನ್ನು ಈಡೇರಿಸುವಂತೆ ಒತ್ತಾಯ ಮಾಡಿದ್ದಾರೆ.
ಇತ್ತೀಚೆಗೆ ಪ್ರಚಾರದ ಸಮಯದಲ್ಲಿ ಭರವಸೆ ನೀಡಿದ ‘ಗ್ಯಾರಂಟಿ ಕಾರ್ಡ್’ಗಳ ಹಿಡಿದುಕೊಂಡು ಲಕ್ನೋದಲ್ಲಿ ಮಹಿಳೆಯರು ಕಾಂಗ್ರೆಸ್ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಘಟನೆ ನಂತರ ಇದು ನಡೆದಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಹಲವು ಮನೆಗಳಿಗೆ ‘ಗ್ಯಾರಂಟಿ ಕಾರ್ಡ್’ಗಳನ್ನು ವಿತರಿಸಿ, ಪ್ರತಿ ಬಡ ಕುಟುಂಬದ ಯಜಮನಿಗೆ ವಾರ್ಷಿಕ 1 ಲಕ್ಷ ರೂ. ನೀಡುವುದಾಗಿ ಹೇಳಿತ್ತು. ಈ ಕಾರಣಕ್ಕೆ ಲಕ್ನೋದಲ್ಲಿ ಮಹಿಳೆಯರು ಕಾಂಗ್ರೆಸ್ ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಈ ಬಗ್ಗೆ ವಿಡಿಯೋ ಕೂಡ ವೈರಲ್ ಆಗಿತ್ತು.