ಎಸ್​ಎಸ್​ಎಲ್​ಸಿ ಮರು ಮೌಲ್ಯಮಾಪನ ವೇಳೆ ತಾಲೂಕಿಗೆ ಟಾಪರ್: ಟಾಪ್ ಕಾಲೇಜುಗಳಲ್ಲಿ ಸೀಟು ಸಿಗುತ್ತಿಲ್ಲ

Ravi Talawar
ಎಸ್​ಎಸ್​ಎಲ್​ಸಿ ಮರು ಮೌಲ್ಯಮಾಪನ ವೇಳೆ ತಾಲೂಕಿಗೆ ಟಾಪರ್: ಟಾಪ್ ಕಾಲೇಜುಗಳಲ್ಲಿ ಸೀಟು ಸಿಗುತ್ತಿಲ್ಲ
WhatsApp Group Join Now
Telegram Group Join Now

ಮೈಸೂರು, ಜೂನ್.08: ಪ್ರಸಕ್ತ ಸಾಲಿನಲ್ಲಿ ನಡೆದ ಎಸ್​ಎಸ್​ಎಲ್​ಸಿ  ಪರೀಕ್ಷೆಯ ಮೌಲ್ಯಮಾಪನದಲ್ಲಿ ಮೌಲ್ಯಮಾಪಕರ ಬೇಜಬ್ದಾರಿತನ ಎದ್ದು ಕಾಣಿಸುತ್ತಿದೆ. ಮೇ.09ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು ಇದರಿಂದ ತೃಪ್ತರಾಗದ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಅವರಿಗೆ ಹೆಚ್ಚಿನ ಅಂಕಗಳು ಸಿಕ್ಕಿರುವ ಅನೇಕ ಘಟನೆಗಳು ನಡೆಯುತ್ತಿವೆ.

ಈ ಮೂಲಕ ಮೌಲ್ಯಮಾಪಕರ ಬೇಜಬ್ದಾರಿತನ ಕಂಡು ಬಂದಿದೆ. ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಕೊಡಗಳ್ಳಿ ಗ್ರಾಮದ ಶ್ರಾವ್ಯ ಕಡಿಮೆ ಅಂಕ ಬಂದಿದಕ್ಕೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗದೆ ನೊಂದಿದ್ದಳು. ಆದರೆ ಮರು ಮೌಲ್ಯ ಮಾಪನಕ್ಕೆ ಹಾಕಿದಾಗ ಉತ್ತಮ ಅಂಕ ಬಂದಿದೆ. ತಾಲೂಕಿನ 3ನೇ ಟಾಪರ್ ಆಗಿದ್ದಾಳೆ. ಆದರೆ ತಾನು ಬಯಸಿದ ಕಾಲೇಜಿನಲ್ಲಿ ಸೀಟು ಸಿಕ್ಕಿಲ್ಲ.

ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಕೊಡಗಳ್ಳಿ ಗ್ರಾಮದ ಶ್ರೀನಿವಾಸ್, ಸುಮ ದಂಪತಿ ಪುತ್ರಿ ಶ್ರಾವ್ಯ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಜೀವೋದಯ ಫ್ರೌಡಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೊದಲು ಪ್ರಕಟಗೊಂಡ ಫಲಿತಾಂಶದಲ್ಲಿ 545 ಅಂಕಗಳೊಂದಿಗೆ ಶೇ 87 ಅಂಕ ಪಡೆದಿದ್ದಳು.

ನಿರೀಕ್ಷೆಗೆ ತಕ್ಕಂತೆ ಅಂಕ ಬರದ ಕಾರಣ ತೀವ್ರ ಮನನೊಂದಿದ್ದ ವಿದ್ಯಾರ್ಥಿನಿ ಶ್ರಾವ್ಯ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಮರು ಮೌಲ್ಯಮಾಪನದಲ್ಲಿ ಬರೋಬ್ಬರಿ 606 ಅಂಕದೊಂದಿಗೆ ಶೇ 97 ಅಂಕ ಪಡೆದಿದ್ದಾಳೆ. ಮರು ಮೌಲ್ಯಮಾಪನದಲ್ಲಿ ಶೇ 10 ರಷ್ಟು ಅಂಕ ಹೆಚ್ಚಾಗಿದೆ. ಮರು ಮೌಲ್ಯ ಮಾಪನದಲ್ಲಿ 61 ಅಂಕ ಪಡೆದು ತಾಲೂಕಿನ 3 ನೇ ಟಾಪರ್ ಆಗಿದ್ದಾಳೆ.

ಈ ಹಿಂದೆ ಗಣಿತದಲ್ಲಿ 53 ಅಂಕ ಬಂದಿತ್ತು. ಮರು ಮೌಲ್ಯ ಮಾಪನದ ನಂತರ 94 ಅಂಕ ಬಂದಿದೆ. ವಿಜ್ಞಾನ ವಿಷಯದಲ್ಲಿ ಹಿಂದೆ 75 ಅಂಕ ಈಗ 95 ಅಂಕ ಬಂದಿದೆ. ಈ‌ ಮೊದಲು ಕಡಿಮೆ ಅಂಕ ಬಂದಿದ್ದರಿಂದ ಬಯಸಿದ ಕಾಲೇಜಿನಲ್ಲಿ ಸೀಟು ಸಿಕ್ಕಿಲ್ಲ. ಇದೀಗ ಹೆಚ್ಚು ಅಂಕ ಬಂದಿದ್ದರೂ ಕಾಲೇಜು ಪ್ರವೇಶಾತಿಗೆ ಸಮಯ ಮುಗಿದಿರುವುದರಿಂದ ವಿದ್ಯಾರ್ಥಿನಿ ಕಂಗಾಲಾಗಿದ್ದಾಳೆ.

ಯಾರದೋ ತಪ್ಪಿನಿಂದಾಗಿ ಅತಿ ಕಡಿಮೆ ಅಂಕ ಬಂದಿತೆಂದು ತಮ್ಮ ಪುತ್ರಿ ಅನುಭವಿಸಿದ ಮಾನಸಿಕ ನೋವಿಗೆ ಬೆಲೆ ಕಟ್ಟಲು ಸಾಧ್ಯವೇ ಎಂದು ಶ್ರಾವ್ಯ ತಾಯಿ ಸುಮಾ ಶ್ರೀನಿವಾಸ್ ಅವರು ಮನನೊಂದುಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article