ಬಾಗಲಕೋಟೆ : ಜನರ ಆರೋಗ್ಯ ರಕ್ಷಣೆಗಾಗಿಯೇ ಉದಯಿಸಿದ ಆಸ್ಪತ್ರೆಗಳು ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವುದು ಅಗತ್ಯ ಎಂದು ಡಾ. ಶಿವಕುಮಾರ್ ಗಂಗಾಲ ತಿಳಿಸಿದರು.
ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಆಸ್ಪತ್ರೆ ನವನಗರ ಬಾಗಲಕೋಟೆಯಲ್ಲಿ ಮೃಗಶಿರ ನಕ್ಷತ್ರದ ಪ್ರಯುಕ್ತ ನಡೆದ ಉಚಿತ ಅಸ್ತಮಾ, ಮೂಲವ್ಯಾಧಿ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಂದು ಆಸ್ಪತ್ರೆಗಳು ರೋಗಿಗಳನ್ನು ಸರಿಯಾಗಿ ಉಪಚರಿಸಿದ್ದೇ ಆದರೆ ಆಸ್ಪತ್ರೆಗಳ ಮೌಲ್ಯ ಹೆಚ್ಚಾಗುತ್ತದೆ ಎಂದರು. ಅಲ್ಲದೆ ಇಂತಹ ಉಚಿತ ಶಿಬಿರಗಳ ಪ್ರಯೋಜನವನ್ನು ಗ್ರಾಮೀಣ ಪ್ರದೇಶದವರು ಪಡೆದುಕೊಳ್ಳಬೇಕೆಂದರು.
ನಂತರ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಹ್ಲಾದ್ ಗಂಗಾವತಿ ಅವರು ಇಂದಿನ ಹಲವು ಕಾಯಿಲೆಗಳಿಗೆ ಆಯುರ್ವೇದವು ಅತಿ ಅವಶ್ಯಕವಾಗಿದೆ ಎಂದರು.
ಈ ಉಚಿತ ಶಿಬಿರದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು ನೂರಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಮುಂಜಾನೆ 7:30ಕ್ಕೆ ಸರಿಯಾಗಿ ಅಸ್ತಮಾಕ್ಕೆ ಸಂಬಂಧಿಸಿದ ಔಷಧಿಗಳನ್ನು ಪಡೆದುಕೊಂಡರು. ಅಲ್ಲದೆ ಹಲವು ಜನ ಮೂಲವ್ಯಾಧಿಯ ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಪಡೆದುಕೊಂಡರು.
ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ. ದೀಪಾ ಗಂಗಾಲ, ಡಾ. ವಿಜಯಕುಮಾರ್ ಚವಡಿ, ಡಾ.ಈಶ್ವರ್ ಪಾಟೀಲ್, ಡಾ. ಪಾರ್ವತಿ ಬಿರಾದರ್, ಡಾ. ಅಂಜನಾ ಕೃಷ್ಣನ್, ಡಾ. ಪ್ರಮೋದ್ ಬೆಂಚಿಕೇರಿ, ಡಾ.ಮುತ್ತಣ್ಣ ಕಾಮಣ್ಣವರ್, ಡಾ. ವೀಣಾ ಕೆ, ಡಾ. ನೇಹಾ, ಡಾ. ರಜನಿ ದಡೆದ, ಡಾ. ಅಶ್ವಿನಿ, ಡಾ. ಅತಿರಾ, ಡಾ. ನೆಹರು ನಾಯಕ್, ಡಾ. ಜ್ಯೋತಿ ಸಜ್ಜನ,
ಡಾ.ಶ್ರೀಕಾಂತ್ ಒಡವಡಗಿ ಪಾಲ್ಗೊಂಡಿದ್ದರು.