ಎಲ್ವಿಎಂ – 3 ಬೆಂಬಲಿಸಲು ನಿರ್ಮಾಣವಾಗಿರುವ ಹೆಚ್ಎಎಲ್ನಲ್ಲಿ ಹೊಸ ಸೌಲಭ್ಯ ಉದ್ಘಾಟಿಸಿದ ಇಸ್ರೋ ಅಧ್ಯಕ್ಷ

Ravi Talawar
ಎಲ್ವಿಎಂ – 3 ಬೆಂಬಲಿಸಲು ನಿರ್ಮಾಣವಾಗಿರುವ ಹೆಚ್ಎಎಲ್ನಲ್ಲಿ ಹೊಸ ಸೌಲಭ್ಯ ಉದ್ಘಾಟಿಸಿದ ಇಸ್ರೋ ಅಧ್ಯಕ್ಷ
WhatsApp Group Join Now
Telegram Group Join Now

ಬೆಂಗಳೂರು: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಬುಧವಾರ ಹೆಚ್‌ಎಎಲ್‌ ಏರೋಸ್ಪೇಸ್ ವಿಭಾಗದಲ್ಲಿನ ಅತ್ಯಾಧುನಿಕ ಪ್ರೊಪೆಲೆಂಟ್ ಟ್ಯಾಂಕ್ ಉತ್ಪಾದನೆ ಮತ್ತು ಸಿಎನ್‌ಸಿ ಯಂತ್ರೋಪಕರಣ ಸೌಲಭ್ಯಗಳನ್ನು ಹೆಚ್‌ಎಎಲ್ ಸಿಎಮ್‌ಡಿ ಸಿ.ಬಿ. ಅನಂತಕೃಷ್ಣನ್ ಮತ್ತು ಇಸ್ರೋದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಉದ್ಘಾಟಿಸಿದರು.

ಇದರಿಂದ ಹೊಸದಾಗಿ ಬೆಳೆಯುತ್ತಿರುವ ಉತ್ಪಾದನಾ ಅಗತ್ಯಗಳನ್ನು ಪೂರೈಸುವ ಇಸ್ರೋದ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನವನ್ನು ನೀಡಂತಾಗಿದೆ. ವಿಶೇಷ ಲಾಂಚ್ ವೆಹಿಕಲ್ ಮಾರ್ಕ್- 3 ಭಾರತದ ಅತ್ಯಂತ ಭಾರವಾದ ಮತ್ತು ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ. ಅಸ್ತಿತ್ವದಲ್ಲಿರುವ ಸಾಮರ್ಥ್ಯ ವರ್ಷಕ್ಕೆ ಕೇವಲ ಎರಡು ಎಲ್ವಿಎಂ – 3 ಗಳನ್ನು ಉತ್ಪಾದಿಸುತ್ತಿದೆ. ಈಗ ವಾರ್ಷಿಕವಾಗಿ ಆರು ರಾಕೆಟ್ ಗಳನ್ನು ಇದರಿಂದ ಉತ್ಪಾದಿಸಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸೋಮನಾಥ್, ಹೆಚ್‌ಎಎಲ್ ಅಗಾಧ ಸಾಮರ್ಥ್ಯಗಳನ್ನು ಹೊಂದಿದೆ. ಈಗಿನ ಸಾಮರ್ಥ್ಯದ ಹೆಚ್ಚಳದಿಂದ ಎರಡೂ ಸಂಸ್ಥೆಗಳ ದೊಡ್ಡ ಹಿತಾಸಕ್ತಿಯಲ್ಲಿ ಅನ್ವೇಷಿಸಲಿದೆ. ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಹೆಚ್‌ಎಎಲ್ ದೊಡ್ಡ ಪಾತ್ರವನ್ನು ವಹಿಸಲಿದೆ. ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಗಮನ ಹರಿಸಿ ಹೊಸ ಸವಾಲುಗಳಿಗೆ ವಿನ್ಯಾಸಗಳನ್ನು ಸಜ್ಜುಗೊಳಿಸಬೇಕಿದೆ. ಇಸ್ರೋ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಎಂಡ್-ಟು-ಎಂಡ್ ಟೆಕ್ನಾಲಜಿಗಳನ್ನು ಹೆಚ್ಎಎಲ್ ಇನ್ನಷ್ಟು ಅನ್ವೇಷಿಸಬೇಕಿದೆ ಎಂದು ಹೇಳಿದರು.

 

WhatsApp Group Join Now
Telegram Group Join Now
Share This Article