ಬೆಂಗಳೂರು: ನಾಳೆ ಪ್ರಕಟವಾಗಲಿರುವ ಸಂಸದ ಸ್ಥಾನದ ಮತ ಎಣಿಕೆ ಹಾಗೂ ಫಲಿತಾಂಶದ ಟೆನ್ಷನ್ ಒಂದು ಕಡೆ. ಅದರ ನಡುವೆಯೇ ಇಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯ ಅಂಗವಾಗಿ ಪುರುಷತ್ವ ಪರೀಕ್ಷೆ ಎದುರಿಸಿದರು. ಇದು ರಹಸ್ಯವಾಗಿ ನಡೆದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಆಂಬ್ಯುಲೆನ್ಸ್ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿತು. ಹೆಚ್ಚಿನ ಪೊಲೀಸ್ ರಕ್ಷಣೆ ಇಲ್ಲದೆ, ಮೀಡಿಯಾದವರ ಗಮನ ಸೆಳೆಯದಂತೆ ಆಂಬ್ಯುಲೆನ್ಸ್ನಲ್ಲಿ ರಹಸ್ಯವಾಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಯಲ್ಲಿ ಪ್ರಜ್ವಲ್ ಅವರ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಇದಾದ ಬಳಿಕ ಸ್ಥಳ ಮಹಜರು ಪ್ರಕ್ರಿಯೆಗೆ ಎಸ್ಐಟಿ ಟೀಂ ಪ್ರಜ್ವಲ್ ಅವರನ್ನು ಕರೆದೊಯ್ದಿತು.
ಇಂದು ಪುರುಷತ್ವಕ್ಕೆ ಸಂಬಂಧಿಸಿದ ಮೆಡಿಕಲ್ ಟೆಸ್ಟ್ಗಳನ್ನು ಪ್ರಜ್ವಲ್ ಮೇಲೆ ನಡೆಸಲಾಗುತ್ತಿದೆ. ನಾಳೆ ಚುನಾವಣೆ ಫಲಿತಾಂಶವೂ ಇದೆ. ಪ್ರಜ್ವಲ್ಗೆ ಎರಡೂ ಮಹತ್ವದ್ದಾಗಿದ್ದು, ಆತಂಕ ತಂದಿಟ್ಟಿವೆ.