ಬೆಂಗಳೂರು, ಜೂನ್.03: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಿಳಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಈ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡಿದ್ದ ಪೆಡ್ಲರ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡಿಜೆ ಹಳ್ಳಿ ನಿವಾಸಿ, ಇಮಾರ್ ಶರೀಫ್ ಬಂಧಿತ ಆರೋಪಿ. ಈತ ಹೈಟೆಕ್ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಡ್ರಗ್ಸ್ ಸಹಿತ ಬರುವಂತೆ ಶರೀಫ್ಗೆ ತಿಳಿಸಲಾಗಿತ್ತು. ಅದ್ರಂತೆ ವಿವಿಧ ಮಾದರಿಯ ಡ್ರಗ್ಸ್ ತೆಗೆದುಕೊಂಡು ಈತ ಪಾರ್ಟಿಗೆ ಬಂದಿದ್ದ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಆಯೋಜಕರ ಮೂಲಕ ಡ್ರಗ್ಸ್ ನೀಡಲಾಗಿತ್ತು. ಆರೋಪಿ ಶರೀಫ್ ಬಳಿ ನಲವತ್ತು ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ಸದ್ಯ ಶರೀಫ್ ಅರೆಸ್ಟ್ ಮಾಡಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ನೋಟಿಸ್ಗೆ ಹಾಜರಾಗದವರಿಗೆ ಸಂಕಷ್ಟ ಎದುರಾಗಲಿದೆ. ಪಾರ್ಟಿಯಲ್ಲಿ ಹಾಜರಾಗಿ ಡ್ರಗ್ಸ್ ಸೇವನೆ ಹಿನ್ನಲೆ ತೆಲುಗು ನಟಿ ಹೇಮಾ, ಆಶಿ ರಾಯ್ ಸೇರಿ ಇದುವರೆಗೆ ಇಪತ್ತಕ್ಕೂ ಹೆಚ್ಚು ಜನರಿಗೆ ಸಿಸಿಬಿ ನೋಟಿಸ್ ನೀಡಿದೆ. ಆದರೆ ಯಾರು ಕೂಡ ಇದುವರೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಸಿಸಿಬಿ ನ್ಯಾಯಾಲಯದ ಮೋರೆ ಹೋಗಲಿದೆ. ವಿಚಾರಣೆಗೆ ಹಾಜರಾಗದ ವ್ಯಕ್ತಿಗಳ ವಿರುದ್ದ ಅರೆಸ್ಟ್ ವಾರಂಟ್ ಪಡೆದು ಬಂಧಿಸಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.