ವಾತಾವರಣ ಏರಿಳಿತದಿಂದ ಹೆಚ್ಚಿದ ಡೆಂಗ್ಯೂ ಪ್ರಕರಣಗಳು‌

Ravi Talawar
ವಾತಾವರಣ ಏರಿಳಿತದಿಂದ ಹೆಚ್ಚಿದ ಡೆಂಗ್ಯೂ ಪ್ರಕರಣಗಳು‌
WhatsApp Group Join Now
Telegram Group Join Now

ಬೆಂಗಳೂರು, ಜೂನ್.02; ದಿಢೀರನೇ ವಾತಾವರಣ ಏರಿಳಿತದಿಂದಾಗಿ ಹಾಗೂ ಮಳೆಗಾಲ ಆರಂಭ ಕಾಲ ಹಿನ್ನಲೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತಿವೆ. ಗಂಟಲು ಹಾಗೂ ಕಿವಿ ಸೋಂಕು ಜೊತೆಗೆ ಡೆಂಗ್ಯೂ ಸಂಖ್ಯೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಮಳೆಗಾಲಕ್ಕೆ ರೋಗಗಳು ಹರಡದಂತೆ ತಡೆಗಟ್ಟಲು ಸಲಹೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗಂಟಲು ನೋವು ಜೊತೆಗೆ ಸೋಂಕು ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇದಕ್ಕೆ ಕಾರಣ ಪ್ರಮುಖವಾಗಿ ವಾತಾವರಣದಲ್ಲಿ ಏರುಪೇರು. ಇನ್ನೂ ಮಳೆಯಿಂದಾಗಿ ರೋಗಗಳು ಹರಡುವ ಭೀತಿ ಜೊತೆಗೆ ಮುಂದಿನ ವಾರದಲ್ಲಿ ಮಳೆಗಾಲ ಆರಂಭ ಹಿನ್ನಲೆ ಆದಷ್ಟು ಮಳೆಯಲ್ಲಿ ನೆನೆಯುವುದರಿಂದ ದೂರವಿರುವಂತೆ ಹಾಗೂ ಡೆಂಗ್ಯೂ ಪ್ರಕರಣಗಳು‌ ಹೆಚ್ಚಿಗ ಆಗುತ್ತಿವೆ. ಹೀಗಾಗಿ‌ ಡೆಂಗ್ಯೂ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನ ಸಂಪರ್ಕಿಸುವಂತೆ ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರು ಸಲಹೆ ನೀಡುತ್ತಿದ್ದಾರೆ.

ಇನ್ನೂ ಮಳೆಗಾಲ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮಳೆ ನೀರು ಕಲುಷಿತವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಯಿಸಿ ಆರಿಸಿದ ನೀರನ್ನು ಸೇವಿಸಬೇಕು. ಟೈರ್, ತೆಂಗಿನಕಾಯಿ ಚಿಪ್ಪು ಸೇರಿದಂತೆ ನಿಂತ ಮಳೆ‌ನೀರಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಲಾರ್ವಾ ಉತ್ಪತ್ತಿ ಆಗುತ್ತದೆ. ಹೀಗಾಗಿ ಡೆಂಗ್ಯೂ ಪ್ರಕರಣಗಳು ಕೂಡ ಹೆಚ್ಚಳ ಆಗುತ್ತಿರುವುದರಿಂದ ಸ್ವಚ್ಚತೆ ಕಡೆಗೆ ಗಮನ ಕೊಡಲು ಒತ್ತು ನೀಡಬೇಕೆನ್ನುತ್ತಿದ್ದು, ಮಳೆಯಿಂದ ಸಣ್ಣಪುಟ್ಟ ರೋಗ ಸಮಸ್ಯೆಯಾದರೆ ಮನೆಯಲ್ಲೆ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ವೈದ್ಯರನ್ನ ಸಂಪರ್ಕಿಸುವಂತೆ ವೈದ್ಯರು ಹೃಳುತ್ತಿದ್ದಾರೆ. ಅತ್ತ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳನ್ನ ನೋಡೊದಾದರೆ 2797 ಕೇಸ್ ಗಳಿದ್ದರೆ, ಈ ಪೈಕಿ ಬೆಂಗಳೂರಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 1002 ಪ್ರಕರಣಗಳು ದಾಖಲಾಗಿವೆ.

ಒಟ್ಟಿನಲ್ಲಿ ಮಾನ್ಸೂನ್ ಆರಂಭಕ್ಕೂ ಮುನ್ನ ಇವತ್ತಿನಿಂದ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಎಂಟ್ರಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣದಲ್ಲಿ ಹೆಚ್ಚಳವಾಗಲಿದೆ. ಹೀಗಾಗಿ ಮಳೆಗಾಲ ಸಂದರ್ಭದಲ್ಲಿ ಆದಷ್ಟು ಆರೋಗ್ಯ ಬಗ್ಗೆ ಜಾಗೃತರಾಗಿರುವುದು ಉತ್ತಮ.

 

WhatsApp Group Join Now
Telegram Group Join Now
Share This Article