ಗದಗ- ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಹಾಗು ಎಸ್.ಟಿ. ಮೋರ್ಚಾ ವತಿಯಿಂದ ಕರ್ನಾಟಕ ಕಾಂಗ್ರೇಸ್ ನೇತೃತ್ವದ
ಸರ್ಕಾರದಲ್ಲಿ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಬಹು ಕೋಟಿ ಭ್ರಮಾಂಡ್ ಭ್ರಷ್ಟಾಚಾರ ನಡೆದಿರುತ್ತದೆ. ಇವತ್ತಿನ ವರೆಗೂ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಕಾನೂನು ಸಚಿವರು ತಮ್ಮ ಸರ್ಕಾರದ ಸಚಿವರಾದ ನಾಗೇಂದ್ರ ರವರನ್ನು ರಾಜೀನಾಮೆ ಪಡೆಯುವದನ್ನು ಬಿಟ್ಟು ತನಿಖೆ ಆಧಾರಿಸಿ ರಾಜೀನಾಮೆಯನ್ನು ಪಡೆಯುತ್ತೇವೆ ಎಂದು ಕಾಲಹರಣ
ಮಾಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಭ್ರಷ್ಟಾಚಾರದಲ್ಲಿ ಭಾಗಿಯಾದ ನಾಗೇಂದ್ರ ರರನ್ನು ಕೂಡಲೇ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ಒಪ್ಪಿಗೆ ಸೂಚಿಸಬೇಕು ಮತ್ತು ಈ ಹಗರಣವನ್ನು ಬಯಲಿಗೆಳೆದು ಪ್ರಾಣವನ್ನು ಬಿಟ್ಟಿರುವ ಚಂದ್ರಶೇಖರ್ ರವರ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವನ್ನು ಕೂಡಲೇ ಮಾಡಬೇಕು.
ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಹಳೆಯ ಡಿ.ಸಿ.ಕಚೇರಿ ಸರ್ಕಲ್ನಲ್ಲಿ ಬೃಹತ್ ಪ್ರತಿಭಟನೆ ಸರ್ಕಾರದ
ವಿರುದ್ಧ ಸಚಿವರ ರಾಜೀನಾಮೆಯನ್ನು ಒತ್ತಾಯಿಸಿ ರಸ್ತೆ ತಡೆಯನ್ನು ಮಾಡಿದರು. ಹಾಗು ಇದು ಸಾಂಕೇತಿಕ ಬಂದ್ ಮುಂದೆ ರಾಜೀನಾಮೆ ಪಡೆಯದಿದ್ದರೆ ಪ್ರತಿ ತಾಲೂಕ ಕೇಂದ್ರ ಗಳಲ್ಲಿ ಕೂಡಾ ರಾಜೀನಾಮೆ ಕೊಡುವವರೆಗೂ ಉಗ್ರ ಪ್ರತೀಭಟಿಸುತ್ತೇವೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ರವರು ಮಾತನಾಡಿ ಕರ್ನಾಟಕದ ಕಾಂಗ್ರೇಸ್ ಸರ್ಕಾರ ಭ್ರಷ್ಟರಿಗೆ
ಮಣೆಯನ್ನು ಹಾಕುತ್ತಿದೆ, ಭ್ರಷ್ಟರನ್ನ ರಕ್ಷಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಮಾತ್ ಮಾತಿಗೂ ನುಡಿದಂತೆ ನಡೆಯುವ ಸರ್ಕಾರ ಎಂದು ಘೋಷಣೆ ಹಾಕುತ್ತಾರೆ. ಆದರೆ ಭ್ರಷ್ಟ ಕಾಂಗ್ರೇಸ್ ಸರ್ಕಾರವು ಅಧಿಕಾರ ವಹಿಸಿಕೊಂಡು ಒಂದು ವರ್ಷದಿಂದಲು ಕೊಲೆ, ಸುಲಿಗೆ, ಭ್ರಷ್ಟಾಚಾರ ಇವೆಲ್ಲವುಗಳನ್ನು ಹತೋಟೆಗೆ ತರಲು ಸಾಧ್ಯವಾಗಿಲ್ಲಾ ಎಂದರು.
ಬಿಜೆಪಿ ಜಿಲ್ಲಾ ಎಸ್.ಟಿ.ಮೋರ್ಚಾ ವತಿಯಿಂದ ಗದಗ ಜಿಲ್ಲಾಧಿಕಾರಗಳ ಮುಖಾಂತರ ರಾಜ್ಯಪಾಲರಿಗೆ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಮುಖ್ಯ ಪಾತ್ರವನ್ನು ವಹಿಸಿರುವ ಸಚಿವರು ಹಾಗು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಶಿಕ್ಷೆ ಆಗಬೇಕು ಮತ್ತು ದುರಪಯೋಗವಾದ ಹಣವನ್ನು ಪುನಃ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಜಮೆ ಮಾ ಡಬೇಕು. ಮಾಡದೇ ಇದ್ದಲ್ಲಿ ಕರ್ನಾಟಕ
ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿ ಹಾಗು ಎಲ್ಲ ಸಚಿವರ ವಿರುದ್ಧ ಬರುವ ದಿನಮಾನದಲ್ಲಿ ಉಗ್ರವಾದ ಪ್ರತೀಭಟನೆಯನ್ನು ಬಿಜೆಪಿ ಎಸ್.ಟಿ ಮೋರ್ಚಾ ವತಿಯಿಂದ ರಾಜ್ಯವ್ಯಾಪಿ ಪ್ರತೀಭಟಿಸಲಾಗುವದು ಎಂದು ಎಸ್.ಟಿ.ಮೋರ್ಚಾ ಗದಗ ಜಿಲ್ಲಾಧ್ಯಕ್ಷರಾದ ಈಶ್ವರಪ್ಪ ರಂಗಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಎಂ.ಎಸ್.ಕರೀಗೌಡ್ರ, ನಗರ ಅಧ್ಯಕ್ಷರಾದ ಅನೀಲ ಅಬ್ಬಿಗೆರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಪಾಟೀಲ, ಜಗನ್ನಾಥಸಾ ಭಾಂಡಗೆ, ಅಶೋಕ ಸಂಕಣ್ಣವರ, ಅಶೋಕ ನವಲಗುಂದ, ಅಶೋಕ ಕುಡತಿನಿ, ಸುಧೀರ ಕಾಟಿಗರ, ಗಂಗಾಧರ ಹಬೀಬ, ಶಕ್ತಿ ಕತ್ತಿ, ರಾಗು ಪರಾಪೂರ, ಶಶಿಧರ ದಿಂಡೂರ, ನಾಗರಾಜ ಕುಲಕರ್ಣಿ,
ಸುರೇಶ ಚಿತ್ತರಗಿ, ಸುರೇಶ ಮರಳಪ್ಪನವರ, ವಾಯ್.ಪಿ.ಅಡ್ನೂರ, ಯಲ್ಲಪ್ಪ ಶಿರಿ, ಪ್ರಶಾಂತ ನಾಯ್ಕರ, ನಾಗರಾಜ ತ ಳವಾರ, ವಿಜಯಲಕ್ಷ್ಮೀ ಮಾನ್ವಿ, ಕಮಲಾಕ್ಷೀ ಅಂಗಡಿ, ಯೋಗೇಶ್ವರಿ ಭಾವಿಕಟ್ಟಿ, ಮಾಸರಡ್ಡಿ, ಅಪ್ಪಣ್ಣ ಟೆಂಗಿನಕಾಯಿ, ಮಂಜುನಾಥ ತಳವಾರ, ಲಕ್ಷ್ಮಣ ವಾಲ್ಮೀಕಿ ವಿಶ್ವನಾಥ ಶಿರಿಗಣ್ಣವರ, ಅರವಿಂದ ಅಣ್ಣಿಗೇರಿ, ಅಶೋಕ ಕರೂರ, ಮುತ್ತಣ್ಣ ಮೂಲಿಮನಿ, ರಮೇಶ ಸಜ್ಜಗಾರ, ಪ್ರಕಾಶ
ಕೊತಂಬರಿ, ನವೀನ ಕೊಟೆಕಲ್, ವೆಂಟಕೇಶ ಹಬೀಬ, ರಾಹುಲ ಸಂಕಣ್ಣವರ, ಮಂಜುನಾಥ ಶಾಂತಗೇರಿ, ವಿನೋದ ಹಂಸನೂರ
ಹಾಗು ಬಿಜೆಪಿ ಜಿಲ್ಲೆಯ ಯುವ ಮೋರ್ಚಾ ಹಾಗು ಎಸ್.ಟಿ.ಮೋರ್ಚಾದ ಸರ್ವ ಪದಾಧಿಕಾರಿಗಳು, ಪ್ರಮುಖರುಗಳು ಭಾಗವಹಿಸಿದ್ದರು.