ಹುಕ್ಕೇರಿ : ಮಕ್ಕಳಿಗೆ ಆರತಿ ಮಾಡಿ ಹೂ ನೀಡಿ ಸ್ವಾಗತಿಸಿದ ಬಿ ಇ ಓ ಪ್ರಭಾವತಿ ಪಾಟೀಲ.ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮೇ 29 ರಿಂದ ಆರಂಭಗೊಂಡಿವೆ ಆರಂಭದ ಎರಡು ದಿನಗಳ ವರಗೆ ಶಾಲೆಯ ಸ್ವಚ್ಚತಾ ಕೆಲಸ ಹಾಗೂ ಇತರ ಸಿದ್ದತಾ ಕಾರ್ಯಗಳು ನಡೆದಿವೆ.
ಮೇ 31 ರಂದು ಶುಕ್ರವಾರ ಮಕ್ಕಳಿಗೆ ಸಿಹಿ ಬಿಸಿಯೂಟ ದೊಂದಿಗೆ ರಾಜ್ಯಾದ್ಯಾಂತ ಏಕಕಾಲದಲ್ಲಿ ಪ್ರಾರಂಭೊತ್ಸವ ಜರುಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಶೈಕ್ಷಣಿಕ ಬಲವರ್ಧನೆ ಎಂಬ ಘೋಷವಾಕ್ಯ ದೊಂದಿಗೆ ಆದೇಶ ನೀಡಿದ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸಿದ್ದತಾ ಕಾರ್ಯ ಮಾಡಿಕೊಂಡಿವೆ.
ಇಂದು ಬೆಳಗಿನ ಜಾವ ಹುಕ್ಕೇರಿ ನಗರದ ಕೋಟೆ ಭಾಗದ ಸರಕಾರಿ ಗಂಡು ಮಕ್ಕಳ ಶಾಲೆ ಅವರಣದಲ್ಲಿ ಬಿ ಇ ಓ ಪ್ರಭಾವತಿ ಪಾಟೀಲ ಮಕ್ಕಳಿಗೆ ಆರತಿ ಮಾಡಿ ಹೂ ನೀಡುವ ಮೂಲಕ ಸ್ವಾಗತಿಸಿದರು.
ನಂತರ ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ ಮೇ 29 ರಂದು ಪಾಲಕರ ಸಭೆ ಜರುಗಿಸಿ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶೈಕ್ಷಣಿಕ ಬಲವರ್ಧನೆ ಮತ್ತು ತಂತ್ರಜ್ಞಾನ ಆಧಾರಿತ ಭೋಧನೆ ಮಾಡಲಾಗಿದೆ ಕಾರಣ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ ಪ್ರತಿ ದಿನ ಶಾಲೆಗೆ ಬರುವಂತೆ ನೊಡಿಕೋಳ್ಳಲು ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ ಎಂದರು.
ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.ಅಕ್ಷರ ದಾಸೋಹ ನಿರ್ದೆಶಕಿ ಶ್ರೀಮತಿ ಸವಿತಾ ಹಲಕಿ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯ ಹಾಲು ನೀಡಿ ಮಾತನಾಡುತ್ತಾ ಈಗಾಗಲೇ ಶಾಲೆ ಆರಂಭಕ್ಕಿಂತ ಮೊದಲು ಎನ ಜಿ ಓ ಮತ್ತು ಶಾಲೆಗಳಲ್ಲಿ ಕುಡಿಯುವ ನೀರಿನ ಟ್ಯಾಂಕ, ಅಡುಗೆ ಕೋಣೆ, ಆಹಾರ ಧಾನ್ಯಗಳ ಸ್ವಚ್ಚತೆ ಮತ್ತು ಅಡುಗೆ ಪರಿಕರಗಳನ್ನು ಸ್ವಚ್ಚಗೋಳಿಸಿ ಇಂದು ಮಕ್ಕಳಿಗೆ ಸಿಹಿ ಭೋಜನೆ ನೀಡುವ ಮೂಲಕ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಶಾಲಾ ಆರಂಭ ದಿನವೆ ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಬೇಕು ಮತ್ತು ಜೂನ 1 ರಿಂದ ಸೇತುಬಂಧ ಕಾರ್ಯಕ್ರಮ ಜರುಗಿಸ ಬೇಕು ಎಂದು ಆದೇಶಿಸಲಾಗಿದೆ ಆದರೆ ಈಗ ಹುಕ್ಕೇರಿ ತಾಲೂಕಿಗೆ ಶೇಕಡಾ 60 ರಷ್ಟು ಪಠ್ಯ ಪುಸ್ತಕಗಳು ಮಾತ್ರ ಬಂದಿವೆ ಅವುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಪಠ್ಯ ಪುಸ್ತಕ ನೋಡಲ್ ಅಧಿಕಾರಿ ಆರ್ ಎಂ ನಡುಮನಿ ಮಾದ್ಯಮಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಬಿ ಆರ್ ಸಿ ಎ ಎಸ್ ಪದ್ಮನ್ನವರ, ಆರ್ ಎಂ ಶೇಟ್ಟಿಮನಿ, ಸಿ ಆರ್ ಪಿ ಪಿ ವಿನಯ ರಜಪೂತ, ಬಿ ಆರ್ ಪಿ ಎಂ ವಿ ಮಾಸ್ತಮರ್ಡಿ, ಮಂಜುಳಾ ಅಡಿಕೆ , ಮಹಾಂತೇಶ ಹಿರೇಮಠ ಪಾಲಕರು ಮಕ್ಕಳು ಉಪಸ್ಥಿತರಿದ್ದರು.