ಭಾಷಣದ ಘನತೆ ಮತ್ತು ಪ್ರಧಾನಿ ಹುದ್ದೆಯ ಗೌರವ ಕಡಿಮೆ ಮಾಡಿದ ಮೋದಿ: ಡಾ. ಮನಮೋಹನ್ ಸಿಂಗ್

Ravi Talawar
ಭಾಷಣದ ಘನತೆ ಮತ್ತು ಪ್ರಧಾನಿ ಹುದ್ದೆಯ ಗೌರವ ಕಡಿಮೆ ಮಾಡಿದ ಮೋದಿ: ಡಾ. ಮನಮೋಹನ್ ಸಿಂಗ್
WhatsApp Group Join Now
Telegram Group Join Now

ನವದೆಹಲಿ: 2024 ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಡಕು ಮೂಡಿಸುವ ಭಾಷಣಗಳನ್ನು ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಹುದ್ದೆಯ ಗೌರವ ಕಡಿಮೆ ಮಾಡಿದ ಮೊದಲ ಪ್ರಧಾನಿ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಗುರುವಾರ ಟೀಕಿಸಿದ್ದಾರೆ.

ಜೂನ್ 1 ರಂದು ನಡೆಯಲಿರುವ ಏಳನೇ ಮತ್ತು ಅಂತಿಮ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಪಂಜಾಬ್ನಲ್ಲಿ ಮತದಾರರಿಗೆ ಪತ್ರದ ಮೂಲಕ ಮನವಿ ಮಾಡಿದ ಮನಮೋಹನ್ ಸಿಂಗ್, ಮತದಾರರಿಗೆ ಪ್ರೀತಿ, ಶಾಂತಿ, ಭ್ರಾತೃತ್ವ ಮತ್ತು ಸೌಹಾರ್ದತೆಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ಧಿ ಆಧಾರಿತ ಬೆಳವಣಿಗೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆ ಸಾಧ್ಯ ಎಂದು ಮಾಜಿ ಪ್ರಧಾನಿ ಪ್ರತಿಪಾದಿಸಿದ್ದಾರೆ.

ಮೋದಿಯವರ ಇತ್ತೀಚಿನ ಚುನಾವಣಾ ಪ್ರಚಾರದ ವಾಕ್ಚಾತುರ್ಯದ ವಿರುದ್ಧ ವಾಗ್ದಾಳಿ ನಡೆಸಿದ ಮನಮೋಹನ್ ಸಿಂಗ್, “ ಹಿಂದೆ ಯಾವ ಪ್ರಧಾನಿಯೂ ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿಕೊಂಡು ಇಂತಹ ದ್ವೇಷಪೂರಿತ, ಅಸಂಸದೀಯ ಪದಗಳನ್ನು ಬಳಸಿಲ್ಲಎಂದು ಬರೆದಿದ್ದಾರೆ.

ಮೋದಿ ಜಿ ಅವರು ಅತ್ಯಂತ ಕೆಟ್ಟದಾಗಿ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಒಡಕು ಮೂಡಿಸುವ ಭಾಷಣಗಳಾಗಿದ್ದು, ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಸ್ಥಾನದ ಗೌರವವನ್ನು ಕಡಿಮೆ ಮಾಡಿದ ಮೊದಲ ಪ್ರಧಾನಿ ಮೋದಿ ಜಿಎಂದು ಮಾಜಿ ಪ್ರಧಾನಿ ಕಿಡಿ ಕಾರಿದ್ದಾರೆ.

WhatsApp Group Join Now
Telegram Group Join Now
Share This Article