ಮುಗಳಖೋಡ,29: ಪಟ್ಟಣದ ಆದಿ ದೈವಿ ಪುರುಷ ಹನುಮಾನ ಓಕಳಿ ನಿಮಿತ್ಯ ಶನಿವಾರ 1 ರಿಂದ ಮಂಗಳವಾರ 4 ರ ವರೆಗೆ ಬೆಳಿಗ್ಗೆ ಶ್ರೀ ಹನುಮಾನ ಮೂರ್ತಿಗೆ ಪಂಚಾಮೃತ ಅಭಿಷೇಕ ಎಲಿ ಪೂಜೆ ಕಾರ್ಯಕ್ರಮ ನೇರವೇರುವುದು.
ದಿನಾಂಕ 1 ರಂದು ಸಾಯಂಕಾಲ 4 ಗಂಟೆಗೆ ಕೊಂಡ ಪೂಜೆ ರವಿವಾರ 2 ರಂದು 4 ಗಂಟೆಗೆ ನಡು ಓಕಳಿ ಸೋಮವಾರ 3 ರಂದು ಮದ್ಯಾಹ್ನ 1 ಕುಂಟೆಯಿಂದ ಅನ್ನ ದಾಸೋಹ ನಂತರ ವಿಠ್ಠಲ ಮಂದಿರದಿಂದ ಶ್ರೀ ಸಿದ್ದರಾಮೇಶ್ವರ ವಾಹನ ಮಾಲೀಕರು, ಚಾಲಕರ, ಹಾಗೂ ಅಪ್ಪಾಜಿ ಹಮಾಲರ ಸಂಘದ ಸಹಯೋಗದಲ್ಲಿ ವಿಠ್ಠಲ ಮಂದಿರದಿಂದ ಹನುಮಾನ ಮಂದಿರ ವರೆಗೆ ಸಕಲ ವಾದ್ಯ ವೃಂದದೊಂದಿಗೆ ಆಂಜನೇಯ ಭಾವಚಿತ್ರದ ಭವ್ಯ ಮೆರವಣಿಗೆ.
ಸಾಯಂಕಾಲ 5 ಗಂಟೆಗೆ ಪಲ್ಲಕ್ಕಿ ಉತ್ಸವ ಕಡೆ ಓಕಳಿ, ಮಂಗಳವಾರ 4 ಸಾಯಂಕಾಲ 4 ಗಂಟೆಗೆ ಪೈಲ್ವಾನರುಗಳಾದ ಮುತ್ತಪ್ಪ ಬಾಳೋಜಿ, ಭೀಮಪ್ಪ ತಳವಾರ, ಪರಪ್ಪ ಖೆತಗೌಡರ, ಹಾಲಪ್ಪ ಶೇಗುಣಸಿ ವಸ್ತಾದರ ನಿರ್ಣಾಯಕತ್ವದಲ್ಲಿ ಜಂಗಿ ನಿಕಾಲಿ ಕುಸ್ತಿಗಳು ಜರಗುವವು,ಇದೆ ದಿನ ಮದ್ಯಾಹ್ನ 2.30 ಗಂಟೆಯ ಪೂರ್ವದಲ್ಲಿ ಪೈಲ್ವಾನರು ವ್ಯವಸ್ಥಾಪಕರಲ್ಲಿ ಹೆಸರು ನೊಂದಾಯಿಸಿ ಎಂದು ಭಕ್ತ ಸಮಿತಿ ತಿಳಿಸಿದೆ.