ಇಂಡಿ: ಯಾವುದೆ ಪರವಾನಗಿ ಇಲ್ಲದೆ ಆಕ್ರಮವಾಗಿ ಸಂಗ್ರಹಸಿಟ್ಟಿದ್ದ 1,89,290 ರೂಪಾಯಿ ಕಿಮ್ಮತ್ತಿನ ಸುಮಾರು 8230 ಕೆಜಿ ಪಡಿತರ ಅಕ್ಕಿ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರoದು ತಾಲೂಕಿನ ಶಿರಶ್ಯಾಡ ಗ್ರಾಮದ ಖಾಸಗಿಯವರಿಗೆ ಸೇರಿದ ಜಮಿನೊಂದರಲ್ಲಿ ಜರುಗಿದೆ.
ಆಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ ಮಾಹಿತಿ ಆದರಿಸಿ ಇಂಡಿ ಗ್ರಾಮಿಣ ಪಿಎಸ್ಐ ಮಂಜುನಾಥ ಹುಲಕುಂದ ಹಾಗೂ ಆಹಾರ ನೀರಿಕ್ಷಕ ಪರಮಾನಂದ ಹೂಗಾರ ಇವರು ಜಂಟಿಯಾಗಿ ಕಾರ್ಯಚರಣೆ ಮಾಡಿ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ವಿಚಾರಣೆ ಮಾಡಲಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುವ ಉದ್ದೆಶವಾಗಿರುವುದು ಕಂಡು ಬಂದಿದ್ದರಿoದ ಆರೊಪಿ ಅಸುದುಲ್ಲಾ ಶೇಖಲಾಲ ಮುಜಾವರ ಸಾಕಿನ ತೆಗ್ಗಿಹಳ್ಳಿ ಇತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೊಪಿಯ ಹೇಳಿಕೆ ಮೇರೆಗೆ ಆಕ್ರಮ ಅಕ್ಕಿಯನ್ನು ಪತ್ರಾಸ ಶಡ್ಡನಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ಉದ್ದೆಶದಿಂದ ಸಂಗ್ರಹಿಸಲಾಗಿತದೆ.
ಈ ಕುರಿತು ಇಂಡಿ ಗ್ರಾಮಿಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.