ಬಾಗಲಕೋಟೆ,29: ಶ್ರೀ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಆರೋಗ್ಯ ಕ್ಷೇತ್ರಕ್ಕೆ ಶುಶ್ರೂಷಕರ ಕೊಡುಗೆಯನ್ನು ಸ್ಮರಿಸುತ್ತಾ ಮತ್ತು ಮುಂದೆಬರುವ ಆರೋಗ್ಯ ಸಮಸ್ಯೆಗಳಿಗೆ ಶುಶ್ರೂಷಕರ ಪ್ರಮುಖ ಪಾತ್ರವನ್ನು ಸವಿಸ್ತಾರವಾಗಿ ವಿವರಿಸಲು ಮಹಾವಿದ್ಯಾಲಯದಲ್ಲಿ ವಿಶ್ವ ಶುಶ್ರೂಷಕರ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೋ.. ಜಯಶ್ರೀ ಇಟ್ಟಿ ವಹಿಸಿ ಮಾತನಾಡಿದ ಅವರು ಶುಶ್ರೂಷಕರು ವಿಶ್ವಕ್ಕೆ ಬೆಳಕು ತೋರುವ ದೀಪಗಳು ಶುಶ್ರೂಷಕರು ತಮ್ಮ ವೃತ್ತಿ ಕ್ಷೇತ್ರವನ್ನು ಬರಿ ಒಂದು ಕೆಲಸವಾಗಿ ನೋಡದೆ ಅದನ್ನು ಒಂದು ಧರ್ಮವೆಂದು ತಿಳಿದುಕೊಂಡು ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದಾಗಿ ಹಾಗೂ ರೋಗಿಗಳ ಆರೋಗ್ಯದಲ್ಲಿ
ಆಶಾಕಿರಣವಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ಸೇವೆ ತಲುಪುವಂತ ಮಹತ್ತರ ಕೆಲಸವನ್ನು ಮಾಡಲು ನರ್ಸಿಂಗ್
ವಿದ್ಯಾರ್ಥಿಗಳು ಮುಂದಾಗಬೇಕು. ನವೆಂಬರ್೨೦೧೯-೨೧ ರಲ್ಲಿ ಇಡೀ ವಿಶ್ವವನ್ನೇ ಕಂಗೆಡಿಸಿದ್ದ, ಅಪಾಯಕಾರಿ ಮಹಾಮಾರಿ ಕರೋನಾ ವೈರಸ್ ಅನೇಕ ಜನರ ಜೀವವನ್ನು ಕಸಿಯುವ ಕ್ರೂರಿ ವೈರಸ್ ಇದಾಗಿತ್ತು.
ಇದರಿಂದ ಬಳಲುತ್ತಿದ್ದ ರೋಗಿಗಳ ಸೇವೆಗೆ ಮುಂದಾಗಿ ಬಂದವರು ಶುಶ್ರೂಷಕರು ತಮ್ಮ ಜೀವದ ಹಂಗನ್ನು ತೋರೆದು ಹಗಲು-
ರಾತ್ರಿಯನ್ನದೇ ತಮ್ಮ ಸೇವೆ ತೊಡಗಿಸಿ ತಮ್ಮ ಜೀವವನ್ನು ಮುಡಿಪಾಗಿಟ್ಟರು. ಕರೋನಾ ವೈರಸ್ ದಿನಗಳಲ್ಲಿ ಸೇವೆಯನ್ನ
ಸಲ್ಲಿಸುತ್ತಿದ್ದ ದಾದಿಯರ ಮರಣ ಸಂಖ್ಯೆ-೫೭೩ ಆಗಿದ್ದು, ನರ್ಸಿಂಗ್ ವಿದ್ಯಾರ್ಥಿಗಳು ತ್ಯಾಗ ಮತ್ತು ಸೇವಾಮನೋಭಾವವನ್ನು
ಬೆಳೆಸಿಕೊಂಡು ವೃತ್ತಿಯಲ್ಲಿ ತೊಡಗಬೇಕೆಂದು ತಿಳಿಹೇಳಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಮತಿ ಪೂರ್ಣಿಮಾ ಮೇಟಿ ಮಾತನಾಡಿ ಸಮಾಜದ ಆರೋಗ್ಯದ ಸಲುವಾಗಿ
ಶುಶ್ರೂಷಕರು ತಮ್ಮ ಜೀವನವನ್ನೆ ಮುಡಿಪಾಗಿಡುತ್ತಾರೆ. ಈಗಿನ ಉಕ್ರೇನ್ ಮತ್ತು ರಷ್ಯಾದ ದಾಳಿಯಾಗಲಿ, ಇಸ್ರೆಲ್ ಮೇಲಾದ
ದಾಳಿಯಾಗಲಿ, ಹಾಗೂ ನಡೆಯುವ ಪ್ರಾಕೃತಿಕ ವಿಕೋಪಗಳಲ್ಲಿ ಶುಶ್ರೂಷಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಜೀವನವನ್ನು ರಕ್ಷಣೆ ಮಾಡುತ್ತಾರೆ. ನಮ್ಮ ಇಂಡಿಯನ್ ಕೌನ್ಸಿಲ್ ಆಫ್ ನರ್ಸಸ್ ಹೇಳುವ ಪ್ರಕಾರ ಮುಂದಿನ ೬-೭ ವರ್ಷಗಳಲ್ಲಿ ಜಗತ್ತಿನ
೬ನರ್ಸ್‌ಗಳಲ್ಲಿ ಒಬ್ಬ ನರ್ಸ್ ನಿವೃತ್ತಿ ಹೊಂದುವ ಅಂದಾಜು ಇದೆ. ಮುಂದಿನ ದಿನಗಳಲ್ಲಿ ೪.೭ ಮಿಲಿಯನ್ ಹೊಸ ನರ್ಸ್ ಶಿಕ್ಷಣ ಪಡೆದು ಸೇವೆಗೆ ಸನ್ನದ್ಧರಾಗಿ ನಿಲ್ಲಬೇಕಾಗುತ್ತದೆ. ಕರೋನಾ ಉಲ್ಬಣಗೊಳಿಸಿದ ಜಾಗತೀಕವಾಗಿ ನರ್ಸ್‌ಗಳ ಕೊರತೆ ನಿಲ್ಲಿಸಲು ಮುಂದಿನ
ವರ್ಷಗಳಲ್ಲಿ ೧೩ ದಶಲಕ್ಷ ದಾದಿಯರು ಬೇಕಾಗುತ್ತಾರೆ. ಎಂಬುದಾಗಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಯಾವುದೇ ಸ್ಥಿತಿಯಲ್ಲಿದ್ದರೂ ನಮ್ಮ ಸೇವೆಯನ್ನು ನಿಸ್ವಾರ್ಥವಾಗಿ ಸಲ್ಲಿಸಬೇಕೇಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕಿಯರು ಪಾಲ್ಗೊಂಡಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಬಿ.ಎಸ್ಸಿ ಮತ್ತು ಜಿ.ಎನ್.ಎಮ್ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ರಿಯೆಗಳಲ್ಲಿ ತೊಡಗಿ ನರ್ಸಿಂಗ್ ಮಹತ್ವವನ್ನು ವ್ಯಕ್ತಪಡಿಸಿದ್ದರು. ಹಾಗೂ ಭಾಷಣ ಮತ್ತು ನೃತ್ಯದ ಮೂಲಕ ನರ್ಸಿಂಗ್ ಒಂದು ಜಾಗತೀಕ ವೃತ್ತಿ ಎಂಬುದನ್ನು ವ್ಯಕ್ತಪಡಿಸಿದರು.