ಬಳ್ಳಾರಿ ಮೇ 28. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರವರಿಗೂ ಮತ್ತು ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೂ ಮತ್ತು ಉಪಮುಖ್ಯಮಂತ್ರಿ ಗಳು ಹಾಗೂ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರಿಗೂ ವೆಂಕಟೇಶ್ ಹೆಗಡೆ, ವಕೀಲರು, ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಹಾಗೂ ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ ಬಳ್ಳಾರಿ ಮನವಿ ಮಾಡಿಕೊಳ್ಳುತ್ತಿರುವುದೇನಂದರೇ ಜೂನ್13ರಂದು ನಡೆಯುವ ಶಾಸಕರ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಡಾ.ಎಲ್.ಹನುಮಂತಯ್ಯ, ಎಚ್.ಆಂಜನೇಯ ಇಬ್ಬರಿಗೂ ವಿಧಾನ ಪರಿಷತ್ ಟಿಕೆಟ್ ನೀಡಬೇಕು.
ಹನುಮಂತಯ್ಯ ಅವರು ಒಬ್ಬ ಸಾಹಿತಿ, ಚಿಂತಕ. ಎಸ್ಸಿ ಸಮುದಾಯದ ಏಳಿಗೆ ಮತ್ತು ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಸತತವಾಗಿ ಶ್ರಮ ವಹಿಸಿದ್ದಾರೆ. ಮೇಲಾಗಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ ಅಪಾರ ಅನುಭವ ಇದೆ. ರಾಜ್ಯದ ಇಂತಹ ಧೀಮಂತ ನಾಯಕರು ಪರಿಷತ್ ನಲ್ಲಿ ಇದ್ದರೆ ಪರಿಷತ್ ಗೆ ಶೋಭೆ ಸಲ್ಲುತ್ತದೆ.
ಹನುಮಂತಯ್ಯ ಕನ್ನಡ ಪರ ಹೋರಾಟ ಮಾಡಿದ ಮಹನೀಯರು. ಹಾಲಿ ಇರುವ ನಾಯಕರ ಪೈಕಿ ಅತ್ಯಂತ ಹಿರಿಯ ನಾಯಕರು. ಅವರನ್ನು ಪಕ್ಷ ಗುರುತಿಸಬೇಕಿದೆ. ಸಮಯ ಬಂದಾಗಲೆಲ್ಲಾ ಅವರು ಪಕ್ಷದ ಪರ ನಿಂತಿದ್ದಾರೆ. ಸ್ಥಾನಮಾನ ಸಿಗದ ಸಂದರ್ಭದಲ್ಲೂ ಸಹ ಹನುಮಂತಯ್ಯ ಅವರು ಇತರರಂತೆ ಅವಕಾಶಕ್ಕೆ ತತ್ವ ಸಿದ್ಧಾಂತ ಬಿಟ್ಟಿಲ್ಲ. ಪಕ್ಷ ಇದನ್ನು ಗಮನಿಸಬೇಕು.
ಇನ್ನು ಎಚ್.ಆಂಜನೇಯ ಯುವ ಕಾಂಗ್ರೆಸ್ ಘಟ್ಟದಿಂದ ಪಕ್ಷ ಕಟ್ಟಿದ್ದಾರೆ. ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಕೆಲವೇ ಕೆಲವು ನಾಯಕರಲ್ಲಿ ಇಬ್ಬರು.ಮಾಜಿ ಸಚಿವರು ಸಹ. ಅವರನ್ನು ಪರಿಷತ್ ಗೆ ನೇಮಕ ಮಾಡಿದಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಅನುಕೂಲ ಆಗಲಿದೆ.
11 ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಎಡಗೈ ಸಮುದಾಯಕ್ಕೆ ಆದ್ಯತೆ ನೀಡಬೇಕು. ಎಡಗೈ ಸಮುದಾಯದ ನಾಯಕರು ಸದ್ಯ ಸರ್ಕಾರದ ಹಂತದಲ್ಲಿ ಕಡಮೆ ಇದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಇಬ್ಬರ ನಾಯಕರನ್ನು ಪರಿಷತ್ ಗೆ ಆಯ್ಕೆ ಮಾಡಬೇಕು.
ಇನ್ನು ಕಲ್ಯಾಣ ಕರ್ನಾಟಕ ಕ್ಷೇತ್ರದಲ್ಲಿ ಒಟ್ಟು 7 ವಿಧಾನ ಸಭಾ ಕ್ಷೇತ್ರಗಳಿವೆ. ಇವುಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಎಡಗೈ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ನೀಡಿರಲಿಲ್ಲ. ಮುಂದಿನ ಪರಿಷತ್ ನೇಮಕಾತಿ ಇಲ್ಲವೇ ಚುನಾವಣೆ ವೇಳೆ ಟಿಕೆಟ್ ನೀಡುವ ಭರವಸೆಯನ್ನು ಪಕ್ಷದ ನಾಯಕರು ನೀಡಿದ್ದರು. ಇದೀಗ ಅದನ್ನು ಈಡೇರಿಸುವ ಕಡೆ ಗಮನ ಹರಿಸಬೇಕು.ಎಡಗೈ ಸಮುದಾಯದ ನಾಯಕರು ಪಕ್ಷ ಕೊಟ್ಟಂತಹ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪಕ್ಷದ ಯಶಸ್ಸಿಗೆ ತಮ್ಮದೇ ಅದ ಕೊಡುಗೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಿಂದ ರಾಯಚೂರಿನ ಕೆಪಿಸಿಸಿ ರಾಜ್ಯ ಕಾರ್ಯಧ್ಯಕ್ಷರಾದ ಎ. ವಸಂತಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ, ಕೆಪಿಸಿಸಿ ಮಾಧ್ಯಮ ವಕ್ತಾರರು ವೆಂಕಟೇಶ್ ಹೆಗಡೆ, ಕಾಂಗ್ರೆಸ್ ಮುಖಂಡರಾದ ಅಂಬಣ್ಣ ಅರೊಲಿಕರ್ ರವರನ್ನು ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು.
ಕಾಂಗ್ರೆಸ್ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟಿದೆ. ಈ ಬಾರಿ ವಿಧಾನಸಭಾ ಚುನಾವಣೆ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಎಡಗೈ ಸಮುದಾಯಕ್ಕೆ ಅನ್ಯಾಯ ಆಗುವ ಹಾಗೆ ಟಿಕೆಟ್ ಹಂಚಿಕೆ ಮಾಡಲಾಗಿತ್ತು. ಇದೀಗ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪಕ್ಷದ ನಾಯಕರು ಕ್ರಮ ವಹಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ವೆಂಕಟೇಶ್ ಹೆಗಡೆ, ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಹಾಗೂ ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ. ಎಂ.ವಿ.ಎರುಕುಲ ಸ್ವಾಮಿ, ಅಧ್ಯಕ್ಷರು ಪರಿಶಿಷ್ಟ ಜಾತಿ ವಿಭಾಗ. ಗಂಗಾಧರ್ ಸಂಗನಕಲ್ ಕಾಂಗ್ರೆಸ್ ಹಿರಿಯ ಮುಖಂಡರು.ಮಲ್ಲಮ್ಮ ರಾಜ್ಯ ಕಾರ್ಯದರ್ಶಿಗಳು ಮಹಿಳಾ ಕಾಂಗ್ರೆಸ್. ವಿರೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡರು.ವೀರಾಂಜನೇಯ ಅಧ್ಯಕ್ಷರು ಬಳ್ಳಾರಿ ಗ್ರಾಮೀಣ ಪರಿಶಿಷ್ಟ ಜಾತಿ ವಿಭಾಗ. ಶಿವರಾಜ್ ಕಾಂಗ್ರೆಸ್ ಮುಖಂಡರು.ಶೇಕಣ್ಣ, ರಾಯುಡು, ಶಿವಕುಮಾರ್,ಲಕ್ಷ್ಮೀದೇವಿ ಕಾಂಗ್ರೆಸ್ ಹಿರಿಯ ಮುಖಂಡರು.ಜ್ಯೋತಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಹಿಳಾ ಕಾಂಗ್ರೆಸ್. ಆನಂದ್ ಕಾಂಗ್ರೆಸ್ ಮುಖಂಡರು.ರಾಜು ಕಾಂಗ್ರೆಸ್ ಮುಖಂಡರು. ಬಾಲರಾಜ್, ಪೃಥ್ವಿ, ಅನಿಲ್,ಎರ್ರಿಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.