ಬೈಲಹೊಂಗಲ,28: ಬಸವಾದಿ ಶರಣರ ತತ್ವಗಳು ವಿಶ್ವವ್ಯಾಪಿಯಾಗಬೇಕು, ಪ್ರತಿ ಊರಿನಲ್ಲೂ ಬಸವ ಪರ ಸಂಘಟಣೆಗಳನ್ನು ಹುಟ್ಟು ಹಾಕಿ ಆ ಮೂಲಕ ಸಮಾಜದಲ್ಲಿ ಶಾಂತಿ ನೆಲೆಯೂರುವಂತೆ ಯುವಕರು ಸಂಘಟಿತರಾಗಿ ಬಸವ ಧರ್ಮ ಪರಿಪಾಲನೆಯೊಂದಿಗೆ ಸಾಗಬೇಕೆಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ರವಿವಾರ ನಡೆದ ಶ್ರೀ ಜಗದ್ಗುರು ಮಡಿವಾಳೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರ ಜ್ಞಾನಮಂಟಪ ಲೋಕಾರ್ಪಣೆ ಹಾಗೂ ಶ್ರೀ ಚನ್ನಬಸವಣ್ಣನವರ ಅಮೃತ ಶಿಲಾಪುತ್ಥಳಿ ಅನಾವರಣ, ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೧೨ ನೇ ಶತಮಾನದಲ್ಲಿ ಆಗಿ ಹೋದ ವಿಶ್ವಗುರು ಬಸವಣ್ಣನವರು ಸೇರಿದಂತೆ ಅವರ ಅನುಯಾಯಿಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದು ಅವುಗಳನ್ನು ತಪ್ಪದೇ
ಪರಿಪಾಲನೆ ಮಾಡಿದರೆ ಎಲ್ಲರ ಬದುಕು ಸುಗಮವಾಗುತ್ತದೆ.
ಈಗಾಗಿ ಮೂರ್ತಿ ಪೂಜೆಯೊಂದಿಗೆ ಸಂದೇಶಗಳು ಸಹ ಸಮಾಜದಲ್ಲಿ ಪ್ರಸ್ತುತ ಆಳವಾಗಿ ಬೇರೂರಬೇಕಾಗಿದೆ ಎಂದರು. ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಅಂಧಕಾರ, ಅನಾಚಾರ ಹೊಡೆದೋಡಿಸಲು ಪವಿತ್ರವಾದ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಷಟಸ್ಥಳ ಜ್ಞಾನಿ ಚನ್ನಬಸವಣ್ಣನವರು
ಬೀದರ ಜಿಲ್ಲೆಯ ಬಸವ ಕಲ್ಯಾಣದಿಂದ ಕಾರವಾರ ಜಿಲ್ಲೆಯ ಸುಕ್ಷೇತ್ರದ ಉಳವಿಯವರೆಗೆ ಹಲವಾರು ಕಷ್ಟಗಳನ್ನು ಎದುರಿಸಿ ಗ್ರಂಥಗಳನ್ನು ಕಾಪಾಡುವಲ್ಲಿ ಶಸ್ವಿಯಾಗಿದ್ದಾರೆ.
ಜನರ ಉದ್ದಾರಕ್ಕಾಗಿ ಶ್ರಮಿಸಿದ ಶರಣರು ಸ್ಫರ್ಶಿಸಿದ ಕ್ಷೇತ್ರಗಳು ಬೆಳಕಿಗೆ ಬಂದು ವಿಶ್ವ ಪ್ರಚಾರವಾಗಲು ಸರಕಾರ ಅಗತ್ಯ ಕ್ರಮ
ಕೈಗೊಳ್ಳಬೇಕೆಂದರು.ಕೂಡಲಸಂಗಮದ ಪ್ರಥಮ ಜಗದ್ಗುರು ಲಿಂಗಾಯತ ಪಂಚಾಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಬೈಲಹೊಂಗಲ ತಾಲೂಕು ಶರಣರು ಸ್ಫರ್ಶಿಸಿದ ಪುಣ್ಯಭೂಮಿಯಾಗಿದೆ. ನೇಗಿನಹಾಳ ಗ್ರಾಮದಲ್ಲಿ ಚನ್ನಬಸವಣ್ಣನವರ ದೇವಸ್ಥಾನ ಸ್ಥಾಪನೆ ಮಾಡುವದರೊಂದಿಗೆ ಧರ್ಮ ಜಾಗೃತಿಗೆ ಮತ್ತಷ್ಟು ಬಲ ಬಂದಿದ್ದು ನಿತ್ಯ ಪೂಜೆ, ಪ್ರಾರ್ಥನೆ ಜರುಗಿಸಿ ಗ್ರಾಮದ ಜನರ ನೆಮ್ಮದಿಗೆ ಇದು ಕಾರಣವಾಗಲು ಸಂಘಟಕರು ಕಾರ್ಯನಿರ್ವಹಿಸಬೇಕೆಂದರು.
ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೇಗಿನಹಾಳದ ಸಿದ್ದಾರೂಢ ಮಠದ ಅದ್ಯ್ವತಾನಂದ ಭಾರತಿ ಸ್ವಾಮೀಜಿ, ಬಸವ ಕಲ್ಯಾಣದ ಬಸವರಾಜ ದೇವರು, ಹೊಳಿಹೊಸೂರಿನ ಪ್ರಭುರಾಜೇಂದ್ರ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷ್ಯೆ ರೋಹಿಣಿ ಪಾಟೀಲ, ನಿಂಗಪ್ಪ ಅರಕೇರಿ, ಶಂಕರ ಗುಡಸ,
ಪ್ರೇಮಾ ಅಂಗಡಿ, ಗ್ರಾ.ಪಂ.ಅದ್ಯಕ್ಷ್ಯೆ ಮಹಾದೇವಿ ಕೋಟಗಿ, ಸದಸ್ಯರಾದ ಸುಭಾಷ ರುಮೋಜಿ, ಶಿವಾಜಿ ಮುತ್ತಗಿ, ಧರ್ಮರಾಜ ತಪರಿ, ಮಕ್ತುಮಸಾಬ ಮನಿಯಾರ, ಎಂ.ಆರ್.ಮೆಳವಂಕಿ, ಶಿವಾನಂದ ದಿವಾನದ, ಶಿವಾನಂದ ಬೈಲವಾಡ, ಶಿವಾನಂದ ಕೋಟಗಿ, ಪ್ರಕಾಶ ಮರಿತಮ್ಮನವರ ಮುಂತಾದವರು ವೇದಿಕೆ ಮೇಲಿದ್ದರು.
ಶ್ರೀ ಜಗದ್ಗುರು ಮಡಿವಾಳೇಶ್ವರ ನಗರದ ನಿವಾಸಿಗಳು, ಗ್ರಾಮದ ವಿವಿಧ ಸಂಘ-ಸಂಸ್ಥೆಗಳು, ಮಹಿಳಾ ಸಂಘಗಳು, ಸ್ವ-ಸಹಾಯ
ಸಂಘಗಳು, ಭಜನಾ ಸಂಘಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶಿವಾನಂದ ಮೇಟ್ಯಾಲ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಹುಬ್ಬಳ್ಳಿ ನಿರೂಪಿಸಿದರು. ಸಂತೋಷ ಚೀಟಿನ ವಂದಿಸಿದರು. ಮದ್ಯಾಹ್ನ ಗ್ರಾಮದ ಮಡಿವಾಳೇಶ್ವರ ಮಠದಿಂದ ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರ ನೂತನ ಶಿಲಾ ಮೂರ್ತಿಯ
ಮೆರವಣಿಗೆಗೆ ನಾನಾಸಾಹೇಬ ಪಾಟೀಲ ಚಾಲನೆ ನೀಡಿದರು.
ಷಟಸ್ಥಲಜ್ಞಾನಿ ಚನ್ನಬಸವಣ್ಣನವರ ಜ್ಞಾನಮಂಟಪದ ಲೋಕಾರ್ಪಣೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೆರವೇರಿಸಿದರು. ಸಸಿ ನೆಡುವ ಕಾರ್ಯಕ್ರಮಕ್ಕೆ ಇದೇ ವೇಳೆ ಗಣ್ಯರು ಚಾಲನೆ ನೀಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಪೋಟೋ ಶೀರ್ಷಿಕೆ- ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದ ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರ ಜ್ಞಾನಮಂಟಪ ಲೋಕಾರ್ಪಣೆ ಹಾಗೂ ಶ್ರೀ ಚನ್ನಬಸವಣ್ಣನವರ ಅಮೃತ ಶಿಲಾಪುತ್ಥಳಿ
ಅನಾವರಣ, ಧರ್ಮಸಭೆ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.