ಬಿಲ್ಲವರ ಅಸೋಸಿಯೇಶನ್, ಶಿವಗಿರಿ ಸೊಸೈಟಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Ravi Talawar
ಬಿಲ್ಲವರ ಅಸೋಸಿಯೇಶನ್, ಶಿವಗಿರಿ ಸೊಸೈಟಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ
WhatsApp Group Join Now
Telegram Group Join Now

ಬೆಳಗಾವಿ,27: &quoಣ;ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು. ಉನ್ನತ ಸ್ಥಾನದಲ್ಲಿ ಬೆಳೆದು
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು&quoಣ; ಎಂದು ಸೊಸೈಟಿಯ ನಿರ್ದೇಶಕ ಹಾಗೂ ಉದ್ಯಮಿ
ಸುಧೀರ್ ಕುಮಾರ್ ಸಾಲಿಯಾನ್ ಹೇಳಿದರು.

ನಗರದ ಮಾದವಾರ ರೋಡ ಶಿವಗಿರಿ ಸಭಾಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಹಾಗೂ ಶಿವಗಿರಿ
ಸೊಸೈಟಿಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಬಡವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ
ಅವರು ಮಾತನಾಡಿದರು.

ಮಕ್ಕಳು ಉನ್ನತ ಸ್ಥಾನದಲ್ಲಿರಬೇಕು ಎಂಬುವುದು ತಂದೆ-ತಾಯಿಯ ಕನಸು, ಮಕ್ಕಳು ಆಕನಸನ್ನು ನನಸು ಮಾಡಬೇಕು. ಪೋಷಕರು ಸಹ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆ-ತಡೆಯಾಗದಂತೆ ಸಹಕಾರ ನೀಡಬೇಕು. ನಗರದ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ
ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು, ಸಂಸ್ಥೆಯ ವತಿಯಿಂದ ಪ್ರತಿ ವರ್ಷವೂ ಶಾಲಾ ವಿದ್ಯಾರ್ಥಿಗಳಿಗೆ ಕಿರು ಸಹಾಯ-ಸಹಕಾರ ನೀಡಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಶಾಲೆಗಳಲ್ಲಿ ಉತ್ತಮ ಫಲಿತಾಂಶ
ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಪ್ರಭಾಕರ್ ಶೆಟ್ಟಿ ಅವರು ಮಾತನಾಡಿ, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ, ಮಕ್ಕಳು ಆದಷ್ಟೂ ವ್ಯಾಂಸಗಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳ ಪೋಷಕರನ್ನು ಸತ್ಕರಿ, ನೂರಾರು ಬಡವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿ ಪ್ರಭಾಕರ್ ಶೆಟ್ಟಿ , ಸಂಘದ ಉಪಾಧ್ಯಕ್ಷ ಸುಂದರ ಕೋಟಿಯಾನ್ ,ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪಾ ಕೋಟ್ಯಾನ್ , ಮುಖ್ಯ ಕಾರ್ಯ ನಿರ್ವಾಹಕ ಸೋಮನಾಥ್ ಕಡಕೋಳ ಸ್ವಾಗತಿಸಿದರು. ಸಂಘದ ಆಡಳಿತ ಮಂಡಳಿಯವರು ಸೊಸೈಟಿಯ ನಿರ್ದೇಶಕ ವೃಂದದವರು ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು. ಶಾಖಾ ವ್ಯವಸ್ಥಾಪಕ ಚಂದ್ರ ಪೂಜಾರಿ ನಿರೂಪಿಸಿದರು.

WhatsApp Group Join Now
Telegram Group Join Now
Share This Article