ದೆಹಲಿ ಮೇ 25: ಮುಸ್ಲಿಂ ವೋಟ್ ಬ್ಯಾಂಕ್ಗಾಗಿ ಪ್ರತಿಪಕ್ಷಗಳು “ಗುಲಾಮಗಿರಿ” ಮಾಡುತ್ತಿದ್ದು, ಅವರು ಮತಬ್ಯಾಂಕ್ ಮೆಚ್ಚಿಸಲು “ಮುಜ್ರಾ” ಬೇಕಾದರೂ ಮಾಡುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ಇಂಡಿಯಾ ಬಣದ ನಾಯಕರು ಗರಂ ಆಗಿದ್ದಾರೆ.
ಬಿಹಾರದ ಕರಕಟ್ ಮತ್ತು ಪಾಟ್ಲಿಪುತ್ರ ಲೋಕಸಭಾ ಕ್ಷೇತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದ ಭೂಮಿಯಾಗಿದೆ.
ಎಸ್ಸಿ, ಎಸ್ಟಿ ಮತ್ತು ಒಬಿಸಿ ಗಳ ಹಕ್ಕುಗಳನ್ನು ಕಸಿದುಕೊಳ್ಳುವ ಮತ್ತು ಅವುಗಳನ್ನು ಮುಸ್ಲಿಮರಿಗೆ ನೀಡುವ ಇಂಡಿಯಾ ಬಣದ ಯೋಜನೆಗಳನ್ನು ನಾನು ವಿಫಲಗೊಳಿಸುತ್ತೇನೆ ಎಂದು ನಾನು ಈ ನೆಲದಲ್ಲಿ ಘೋಷಿಸಲು ಬಯಸುತ್ತೇನೆ.
ಅವರು ತಮ್ಮ ಮತ ಬ್ಯಾಂಕ್ ಅನ್ನು ಮೆಚ್ಚಿಸಲು ಗುಲಾಮರಾಗಿದ್ದುಕೊಂಡು ‘ಮುಜ್ರಾ’ ಬೇಕಾದರೂ ಮಾಡುತ್ತಾರೆ ಎಂದು ಮೋದಿ ಹೇಳಿದ್ದಾರೆ. ಮುಜ್ರಾ ಎಂಬುದು ಭಾರತೀಯ ಉಪಖಂಡದಲ್ಲಿ ಮೊಘಲ್ ಯುಗದಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯವಾಗಿದೆ