ಪ್ರಬುದ್ಧ ಕೊಲೆ ದೃಢಪಟ್ಟ ಹಿನ್ನೆಲೆ ಪೊಲೀಸ್ ಅಧಿಕಾರಿಯೊಬ್ಬ ವಶಕ್ಕೆ

Ravi Talawar
ಪ್ರಬುದ್ಧ ಕೊಲೆ ದೃಢಪಟ್ಟ ಹಿನ್ನೆಲೆ ಪೊಲೀಸ್ ಅಧಿಕಾರಿಯೊಬ್ಬ ವಶಕ್ಕೆ
WhatsApp Group Join Now
Telegram Group Join Now

ಬೆಂಗಳೂರು, ಮೇ.23: ಮೇ.15ರಂದು ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಪ್ರಭುಧ್ಯಾ ಶವ ಸುಬ್ರಮಣ್ಯಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಈ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರ ತನಿಖೆ ವೇಳೆ ಪ್ರಬುದ್ಧಳನ್ನ ಕೊಲೆ ಮಾಡಿರುವುದು ಧೃಡವಾಗಿದೆ. ಈ ಹಿನ್ನಲೆ ಓರ್ವ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

ಇದೇ ಮೇ.15ರಂದು ಪ್ರಭುಧ್ಯಾ ಶವ ಪತ್ತೆಯಾಗಿತ್ತು. ಇದನ್ನು ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಿದ್ದರು. ಆದ್ರೆ, ಮೃತದೇಹ ಪತ್ತೆಯಾದ ಮೂರು ದಿನಗಳ ನಂತರ ಮೃತ ಯುವತಿ ತಾಯಿ ಸೌಮ್ಯ ಅವರು ನೀಡಿದ ದೂರಿನ ಮೇಲೆ ಸೆಕ್ಷನ್ 302ರಡಿ ಕೊಲೆ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಭುಧ್ಯಾ ತಲೆಗೆ ಹೊಡೆದು, ಕತ್ತು ಕೊಯ್ದು, ಮುಖಕ್ಕೂ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಾಯಿ ಸೌಮ್ಯ ಆರೋಪಿಸಿದ್ದರು.

ಈ ಹಿನ್ನೆಲೆ ಕೊಲೆ ಪ್ರಕರಣ ದಾಖಲಿಸಿ ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಒಂದು ಕಡೆ ಅನುಮಾನಸ್ಪದ ವ್ಯಕ್ತಿಗಳನ್ನ ವಿಚಾರಣೆ, ಮತ್ತೊಂದು ಕಡೆ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಯುತ್ತಿದ್ದು, ಸಿಸಿಟಿವಿಯಲ್ಲಿ ಅನುಮಾನಸ್ಪದವಾಗಿ ಕಂಡು ಬಂದವರನ್ನೂ ಕೂಡಲೇ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಇದೀಗ ಓರ್ವನನ್ನ ವಶಕ್ಕೆ ಪಡೆದಿದ್ದಾರೆ. ಆದರೆ, ಘಟನೆಯಾದ ದಿನದಿಂದ ಪ್ರಭುಧ್ಯಾ ಮೊಬೈಲ್ ಫೋನ್ ಕಾಣೆಯಾಗಿದೆ.

‘ಸದ್ಯ ಪೊಲೀಸರು ಮೊಬೈಲ್ ಫೋನ್ ಎಲ್ಲಿದೆ ಎಂದು ಟ್ರೇಸ್ ಮಾಡುತ್ತಿದ್ದು, ಯಾರಾದರೂ ತೆಗೆದುಕೊಂಡಿದ್ದಾರಾ? ಎಲ್ಲಾದ್ರೂ ಮಿಸ್ ಆಗಿದ್ಯಾ ಎಂದು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಆಕೆಯ ಕಾಲ್ ಡಿಟೇಲ್ಸ್ ಕೂಡ ಕಲೆ ಹಾಕಲಾಗುತ್ತಿದೆ. ಇನ್ನೊಂದು ಕಡೆ ಪ್ರಭುಧ್ಯಾ ಮರಣೋತ್ತರ ಪರೀಕ್ಷೆ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಯುವತಿ ಸಾವಿನ ಬಗ್ಗೆ ನಿಖರ ಮಾಹಿತಿಗಳು ಸಿಗಲಿವೆ. ಸದ್ಯ ಎಲ್ಲಾ ಆಯಾಮಗಳಲ್ಲೂ ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article