55 ಕಿಲೋ ಗಾಂಜ ಸಮೇತ ಐದು ಜನರನ್ನು ಬಂಧಿಸಿದ ಬಳ್ಳಾರಿ ಪೊಲೀಸರು

Ravi Talawar
55 ಕಿಲೋ ಗಾಂಜ ಸಮೇತ ಐದು ಜನರನ್ನು ಬಂಧಿಸಿದ ಬಳ್ಳಾರಿ ಪೊಲೀಸರು
WhatsApp Group Join Now
Telegram Group Join Now
ಬಳ್ಳಾರಿ, ಮೇ.22: ನಗರದ ಕೌಲ್‌ ಬಜಾರ್ ಪೊಲೀಸರು  ಆಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಐದು ಜನರನ್ನು ಬಂಧಿಸಿ ಅವರಿಂದ 27.50 ಲಕ್ಷ ರೂ ರೂ ಬೆಲೆ ಬಾಳುವ 55.8 ಕಿಲೋ‌ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮೇ 18 ರಂದು ಕೌಲ್‌ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಜಾಗೃತಿನಗರ ಬ್ರಿಡ್ಡ ಹತ್ತಿರ  ಗಾಂಜಾ  ಮಾರಾಟ ಮಾಡುತ್ತಿದ್ದ ಜಾಗೃತಿ‌ನಗರದ  ಮೊಹಮದ್ ಮುಜಾಕೀರ್(22), ಎಸ್.ರಿಜ್ವಾನ್ (22)  ಇವರನ್ನು ಬಂಧಿಸಿ  ಇವರಿಂದ 40 ಸಾವಿರ ಬೆಲೆಬಾಳುವ 525 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಿದ ನಗದು ಹಣ 750 ರೂ,  ಟಿ.ವಿ.ಎಸ್. ಎಕ್ಸ್‌ ಎಲ್ ಮೋಫೆಡ್ ಬೈಕ್  ಹೊಸಪಡಿಸಿಕೊಂಡಿದ್ದರು
.
ಇವರಿಗೆ ಗಾಂಜಾ ಎಲ್ಲಿಂದ ಬರುತ್ತಿತ್ತು ಎಂಬ ಮಾಹಿತಿಯ  ತನಿಖೆ ಮುಂದುವರಿಸಿದಾಗ ಆರೋಪಿ‌ ಮೊಹಮದ್ ಮುಜಾಕೀರ್ ನೀಡಿದ ಮಾಹಿತಿಯಂತೆ  ನಿನ್ನೆ ಆಂದ್ರ ಪ್ರದೇಶದ ಕರ್ನೂಲಿನ   ಆರ್.ಅಮೀರ್(23), ಆಲೂರಿನ  ಬಿ.ಅರವಿಂದ್ ಸೂರ್ಯ ನಾರಾಯಣ (21) ಅವರನ್ನು ವಶಕ್ಕೆ ಪಡೆದುಕೊಂಡು, ಅವರ ಮಾಹಿತಿಯ ಮೇರೆಗೆ ಬಳ್ಳಾರಿ ಜಿಲ್ಲೆಯ ಗಡಿಭಾಗವಾದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸಂತೆ ಕೂಡ್ಲೂರು  ಗ್ರಾಮದ ಎಸ್.ರವಿ (29) ಎಂಬಾತನನ್ನು ಬಂಧಿಸಿ ವಿಚಾರಿಸಿದಾಗ ಆತನ ಮನೆಯಲ್ಲಿ  27.50 ರೂ  ಬೆಲೆಬಾಳುವ ಅಂದಾಜು 55 ಕೆ.ಜಿ ಗಾಂಜಾ ದೊರೆತಿದೆ.
ಈ ಬಗ್ಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮಾಹಿತಿ ನೀಡಿದ್ದಾರೆ.ಇವರಿಗೆ ಗಾಂಜಾ ಎಲ್ಲಿಂದ ಬರುತ್ತಿತ್ತು ಎಂಬ ಮಾಹಿತಿಯ  ತನಿಖೆ ಮುಂದುವರಿಸಿದಾಗ ಆರೋಪಿ‌ ಮೊಹಮದ್ ಮುಜಾಕೀರ್ ನೀಡಿದ ಮಾಹಿತಿಯಂತೆ  ನಿನ್ನೆ ಆಂದ್ರ ಪ್ರದೇಶದ ಕರ್ನೂಲಿನ   ಆರ್.ಅಮೀರ್(23), ಆಲೂರಿನ  ಬಿ.ಅರವಿಂದ್ ಸೂರ್ಯ ನಾರಾಯಣ (21) ಅವರನ್ನು ವಶಕ್ಕೆ ಪಡೆದುಕೊಂಡು, ಅವರ ಮಾಹಿತಿಯ ಮೇರೆಗೆ ಬಳ್ಳಾರಿ ಜಿಲ್ಲೆಯ ಗಡಿಭಾಗವಾದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸಂತೆ ಕೂಡ್ಲೂರು  ಗ್ರಾಮದ ಎಸ್.ರವಿ (29) ಎಂಬಾತನನ್ನು ಬಂಧಿಸಿ ವಿಚಾರಿಸಿದಾಗ ಆತನ ಮನೆಯಲ್ಲಿ  27.50 ರೂ  ಬೆಲೆಬಾಳುವ ಅಂದಾಜು 55 ಕೆ.ಜಿ ಗಾಂಜಾ ದೊರೆತಿದೆ. ಈ ಬಗ್ಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article