ಬಳ್ಳಾರಿ, ಮೇ 20. ಬಳ್ಳಾರಿ ನಗರದಲ್ಲಿ ಕೆಲವರ ಷಡ್ಯಂತ್ರದಿಂದ ಪದೇ ಪದೇ ಪತ್ರಕರ್ತರ ಮೇಲೆ ಪೊಲೀಸರು ಸುಳ್ಳು ಕೇಸುಗಳನ್ನು ದಾಖಲಿಸುತ್ತಿದ್ದಾರೆ, ಇದರಿಂದ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾಗುತ್ತಿದೆ, ವರದಿಗಾರ ನಿರ್ಭಯವಾಗಿ ಸಮಾಜದ ಪರವಾಗಿ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ಸುದ್ದಿ ಬರೆಯದಂತೆ ಹತ್ತಿಕ್ಕಲಾಗುತ್ತಿದೆ, ಇಂತ ಘಟನೆಗಳಿಂದ ಪತ್ರಕರ್ತರು ತುಂಬಾ ಸಂಕಷ್ಟಕ್ಕೆ ತುತ್ತಾಗಿ ಸುಖಾ ಸುಮ್ಮನೆ ಕೋರ್ಟ್ಗೆ ಅಲೆಯಬೇಕಾದ ಪರಸ್ಥಿತಿ ಎದುರಾಗಿದೆ. ಕಾರಣ ಪತ್ರಕರ್ತರ ಮೇಲೆ ಮೊಕದ್ದಮೆ ದಾಖಲಿಸುವಾಗ ಪೂರ್ವಪರ ನೋಡಿ ದಾಖಲಿಸುವಂತೆ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಪೊಲೀಸ್ ಮಹಾನಿರ್ದೇಶಕರು, ಬಳ್ಳಾರಿ Sand ಇವರಿಗೆ ಮನವಿ ಪತ್ರವನ್ನು ನೀಡಿ ವಿನಂತಿಸಿದರು.
ಇತ್ತಿಚೆಗೆ ಕನ್ನಡ ದಿನಪತ್ರಿಕೆಯ ವರದಿಗಾರ ಬಳ್ಳಾರಿ ಒನ್ ಕಛೇರಿಯ 75 ಲಕ್ಷ ರೂಪಾಯಿ ಕಾಣೆಯಾದ ಬಗ್ಗೆ ಸುದ್ದಿ ಸಂಪಾದನೆಗಾಗಿ ಪೊಲೀಸ್ ಠಾಣೆಗಾಗಿ ತೆರಳಿದಾಗ ಅಲ್ಲಿನ ಇನ್ಸ್ಪೆಕ್ಟರ್, ಅವರನ್ನು ಕುರಿತು ನಾವು ಏನ್ ಹೇಳುತ್ತೇವೆ ಅದನ್ನಷ್ಟೆ ಬರೆದುಕೊಂಡ ಹೋಗಿ ಇಲ್ಲದ್ದೆಲ್ಲಾ ಕೇಳಿದರೆ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆಂದು ನಿನ್ನ ಮೇಲೆ ಎಫ್.ಐ.ಆರ್ ದಾಖಲಿಸುತ್ತೇನೆಂದು ಎಫ್.ಐ.ಆರ್ ದಾಖಲಿಸಿ ಅವರಿಗೆ ಮಾನಸಿಕ ಕಿರುಕುಳವನ್ನು ನೀಡಿದ್ದನ್ನು ಉಲ್ಲೇಖಿಸಿ ಐ.ಜಿ.ಪಿರವರಿಗೆ ಮನವಿ ಮಾಡಿದರು.
ಪತ್ರಕರ್ತರು ಮತ್ತು ಪೊಲೀಸರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಹೋಗಬೇಕೆ ಹೊರತು ಈ ರೀತಿಯಾಗಿ ಹಗೆ ಸಾಧಿಸಬಾರದು ದಯವಿಟ್ಟು ತಾವುಗಳು ಕ್ರಮಕೈಗೊಳ್ಳಬೇಕೆಂದು ಐ.ಜಿ.ಪಿ ಲೋಕೇಶ್ ಕುಮಾರ್ ರವರಿಗೆ ವಿನಂತಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯಾಳ್ಪಿ ವಲಿಭಾಷ, ಸಂಘದ ಉಪಾಧ್ಯಕ್ಷ ಬಜಾರಪ್ಪ, ಕಾರ್ಯದರ್ಶಿ ರವಿಕುಮಾರ್, ಸದಸ್ಯರಾದ ಪಂಪನಗೌಡ, ಮಲ್ಲಿಕಾರ್ಜುನ, ಅಬುಬಕರ್ ಸಿದ್ದೀಕ್, ಅಸ್ಲಾಂಬಾಷಾ ಮತ್ತು ನಿತ್ಯ ಕರ್ನಾಟಕ ವರದಿಗಾರ ದಾದಾ ಖಲಂದರ್, ವಾರ್ತಾಲೋಕ ಪತ್ರಿಕೆಯ ವರದಿಗಾರ ಈ ಗೋವರ್ಧನ್ ರೆಡ್ಡಿ ಸೇರಿದಂತೆ ಇತರರಿದ್ದರು.