ಘಟಪ್ರಭಾ,18: ಘಟಪ್ರಭಾದ ಶ್ರೀ ಜೆ.ಜಿ. ಸಹಕಾರಿ ಆಸ್ಪತ್ರೆ ಸೋಸಾಯಿಟಿಯ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ತೆರೆದ ಸಭಾಂಗಣದಲ್ಲಿ 7 ದಿನಗಳವರೆಗೆ ಬಾಲರೋಗ ಮತ್ತು ಸ್ವಸ್ಥವೃತ್ತ ವಿಭಾಗದ ವತಿಯಿಂದ ಮಕ್ಕಳಿಗಾಗಿ ಕಲಿ ನಲಿ ಬೇಸಿಗೆ ಯೋಗ ಶಿಬಿರ ಆಯೋಜಿಸಲ್ಪಟ್ಟಿತ್ತು.
ಮೇ 12ರಿಂದ 18ರ ವರೆಗೆ ನಡೆದ ಈ ಕಾರ್ಯಕ್ರಮಕ್ಕೆ 8 ರಿಂದ 14 ವರ್ಷದ ವಯೋಮಿತಿಯೋಳಗೆ ಸರಿಸುಮಾರು 37 ಮಕ್ಕಳು ನೋಂದಾಯಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಕ್ರಾಪ್ಟ್, ಡ್ರಾಯಿಂಗ್, ಡಾನ್ಸ್, ಸಲಾಡ್ ಕಾಂಪಿಟೇಶನ್, ವಚನ ಮತ್ತು ಮಂತ್ರಪಠಣ, ಆರೋಗ್ಯದ ಬಗ್ಗೆ ನುರಿತ ವೈದ್ಯರಿಂದ ಮಕ್ಕಳಿಗೆ ಸಲಹೆ ಸೂಚನೆ ಮತ್ತು ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಸ್ವರ್ಣಬಿಂದುವನ್ನು ನೀಡಲಾಯಿತು.
ಈ ಏಳು ದಿನಗಳ ಕಾಲ ಮಕ್ಕಳು ಅತಿ ಉತ್ಸಾಹದಿಂದ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಭ್ರಮಿಸಿ ಬೇಸಿಗೆ ರಜೆಯನ್ನು ಸದುಪಯೋಗ ಪಡಿಸಿಕೊಂಡರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಸಿ.ಇ.ಓ.ಡಾ: ಬಿ.ಕೆ.ಎಚ್. ಪಾಟೀಲ, ಹಾಗೂ ಅತಿಥಿಗಳಾದ ಜಿ. ಎ. ಪತ್ತಾರ ಮತ್ತು ಪ್ರಾಂಶುಪಾಲರಾದ ಡಾ: ಜೆ.ಕೆ. ಶರ್ಮಾ ಅವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಹಾಗೆಯೇ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಕೊನೆಯ ದಿನ ಅಂದರೆ ಶನಿವಾರದಂದು ಶಂಕರ ಕುರಣಗ್ಗೆ ಶ್ರೀ ಸರಸ್ವತಿ ಸ್ಕೂಲ ಮತ್ತು ಸ್ವರ್ಧಾತ್ಮಕ ತರಬೇತಿ ಕೇಂದ್ರ ಘಟಪ್ರಭಾ ಮತ್ತು ಸಂಸ್ಥೆಯ ಸಿ.ಇ.ಓ. ರಾದ ಡಾ: ಬಿ.ಕೆ.ಎಚ್. ಪಾಟೀಲ ಅವರ ಉಪಸ್ಥಿತಿಯಲ್ಲಿ ಹಾಗೂ ಡಾ: ಜಿ. ಕೆ. ಶ್ರೀನಿವಾಸ, ಡಾ: ಲಿಂಗರಾಜ ತೆಗ್ಗಿ, ಬಾಲರೋಗ ಮತ್ತು ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯೊಂದಿಗೆ ನೆರವೇರಿಸಿದರು.
ಚಿಣ್ಣರಿಗೆ ಆಯೋಜಿಸಿದ್ದ ಹಲವಾರು ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಕೊಡಲಾಯಿತು. ಪೋಷಕರು ಅತಿ ಸಂತೋಷದಿಂದ ಮಕ್ಕಳೊಂದಿಗೆ ವಿದಾಯವನ್ನು ಕೋರಿದರು.