ಇಸ್ರೇಲ್18: ಪಾಲೆಸ್ತೇನಿಯನ್ ಇಸ್ಲಾಮಿಕ್ ಜಿಹಾದ್ ನಾಯಕನನ್ನು ವೈಮಾನಿಕ ದಾಳಿಯಲ್ಲಿ ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಪಾಲೇಸ್ತೇನಿಯನ್ ಇಸ್ಲಾಮಿಕ್ ಜಿಹಾದ್ನ ಜೆನಿನ್ ಬ್ರಿಗೇಡ್‌ನ ಕಮಾಂಡರ್ ಅಸ್ಲಾಂ ಹಮೈಸಾ ಎಂದು ಪತ್ತೆ ಮಾಡಲಾಗಿದೆ. ಶಿನ್ ಬೆಟ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಅವರು ಇಸ್ಲಾಮಿಕ್ ಜಿಹಾದ್ ನಾಯಕ, ಕಟ್ಟಡದಲ್ಲಿ ಅವಿತು ಕುಳಿತಿದ್ದಾಗ ಆತನ ಮೇಲೆ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ತಿಳಿಸಿದೆ.
ವೆಸ್ಟ್ ಬ್ಯಾಂಕ್‌ನ ಹರ್ಮೆಶ್ ವಸಾಹತು ಪ್ರದೇಶದಲ್ಲಿ ಯಹೂದಿಗಳ ಹತ್ಯೆಯ ದಾಳಿಯ ಪ್ರಮುಖ ಕಾರಣ ಪಾಲೆಸ್ತೇನಿಯನ್ ಇಸ್ಲಾಮಿಕ್ ಜಿಹಾದ್ ನಾಯಕನಾಗಿದ್ದ ಎಂದು ಐಡಿಎಫ್ ಮಾಹಿತಿ ನೀಡಿದೆ.
ಅಸ್ಲಾಂ ಹಮೈಸಾ ಹತ್ಯೆಯನ್ನು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಶುಕ್ರವಾರ ರಾತ್ರಿ ಜೆನಿನ್‌ನಲ್ಲಿರುವ ಕಟ್ಟಡವೊಂದರ ಮೇಲೆ ಇಸ್ರೇಲ್ ವಾಯುಪಡೆ ನಡೆಸಿದ ದಾಳಿಯಲ್ಲಿ ಅಸ್ಲಾಂ ಹಮೈಸಾ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮಾತನಾಡಿ, ನಮ್ಮ ದೇಶವು ಲೆಬನಾನಿನ ಸಶಸ್ತ್ರ ಗುಂಪು ಹೆಜ್ಬೊಲ್ಲಾ ಜೊತೆ ಕಠಿಣ ಯುದ್ಧವನ್ನು ನಡೆಸದಂತೆ ಇರಲು ಆದ್ಯತೆ ನೀಡಿರುವುದಾಗಿ ತಿಳಿಸಿದೆ.