ಅನಗತ್ಯವಾಗಿ ಉಲ್ಲೇಖಿಸಿ ನಾಮಪತ್ರ ತಿರಸ್ಕಾರ: ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ವಿರುದ್ಧ ಆರೋಪ

Ravi Talawar
ಅನಗತ್ಯವಾಗಿ ಉಲ್ಲೇಖಿಸಿ ನಾಮಪತ್ರ ತಿರಸ್ಕಾರ: ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ವಿರುದ್ಧ ಆರೋಪ
WhatsApp Group Join Now
Telegram Group Join Now

ಬೆಂಗಳೂರು, ಮೇ 17: ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳಿಗೆ ಜೂ.3ಕ್ಕೆ ಚುನಾವಣೆ ನಿಗದಿಯಾಗಿದೆ. ಈ ಮಧ್ಯೆ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಸ್ಕ್ರೂಟಿನಿ ವೇಳೆ ಅನಗತ್ಯವಾಗಿ ನಾಮಪತ್ರ ತಿರಸ್ಕಾರ ಆರೋಪ ಕೇಳಿಬಂದಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೊರತುಪಡಿಸಿ ಉಳಿದ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ವಿರುದ್ಧ ಆರೋಪ ಮಾಡಲಾಗಿದೆ.

ನಾಮಪತ್ರದ ಕೆಲ ಅಂಶ ಅನಗತ್ಯವಾಗಿ ಉಲ್ಲೇಖಿಸಿ ತಿರಸ್ಕಾರ ಆರೋಪ ಮಾಡಿದ್ದು, ದಾಖಲಾತಿಗಳನ್ನೂ ಕೂಡ ತೋರಿಸುತ್ತಿಲ್ಲ ಎಂದು ಕೆಲ ಅಭ್ಯರ್ಥಿಗಳ ಕಿಡಿ ಕಾರಿದ್ದಾರೆ. ಸದ್ಯ ನಾಮಪತ್ರ ತಿರಸ್ಕಾರಗೊಂಡ ಅಭ್ಯರ್ಥಿಗಳಿಂದ ಆಕ್ರೋಶ ಹೊರಹಾಕಲಾಗಿದೆ. ಹೀಗಾಗಿ ಶಾಂತಿನಗರ ಕಚೇರಿಯಲ್ಲಿ ಸ್ಕ್ರೂಟಿನಿ ವೇಳೆ ಕೆಲಕಾಲ ಗೊಂದಲ ಉಂಟಾಗಿತ್ತು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ನಾಯಕರಲ್ಲಿ ಗೊಂದಲ ವಿಚಾರ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಂದ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬಿಜೆಪಿ ಘೋಷಿತ ಅಭ್ಯರ್ಥಿ ನಿಂಗರಾಜೇಗೌಡ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಮೈತ್ರಿ ಅಭ್ಯರ್ಥಿ ವಿವೇಕಾನಂದಗೆ ನಿಂಗರಾಜೇಗೌಡ ಬೆಂಬಲ ಸೂಚಿಸಿದ್ದಾರೆ.

ಈ ವೇಳೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕ ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿವೇಕಾನಂದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು.

WhatsApp Group Join Now
Telegram Group Join Now
Share This Article