ರನ್ನ ಬೆಳಗಲಿ: ಪಟ್ಟಣದ ಸ್ಥಳೀಯ ನಗರವಾದ ಮಹಾಲಿಂಗಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೫೮೭ ಅಂಕಗಳಿಸಿ ಶೇ ೯೩.೯೨% ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಮಲ್ಲೇಶ ತುಕ್ಕಾನಟ್ಟಿಯ ರಾಯಬಾಗ ತಾಲೂಕಿನ
ಕಪ್ಪಲಗುದ್ದಿ ಗ್ರಾಮದ ವಿದ್ಯಾರ್ಥಿಯ ಸ್ವಹಗ್ರಹಕ್ಕೆ ಭೇಟಿಕೊಟ್ಟು ಸಾಧಕ ವಿದ್ಯಾರ್ಥಿಯ ತಂದೆ ಕೃಷ್ಣಪ್ಪ ತುಕ್ಕಾನಟ್ಟಿ ಹಾಗೂ ತಾಯಿ ಬಂದವ್ವ ತುಕ್ಕಾನಟ್ಟಿ ಜೊತೆಗೆ ಗೌರವಿಸಿ ಸತ್ಕರಿಸಿದ ಮಹಾಲಿಂಗಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಎ. ಸಿ. ಹೂಗಾರ ಅವರು ಸಾಧಕ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲೆಂದು ಶುಭ ಹಾರೈಸಿ, ಶಿಕ್ಷಣಕ್ಕೆ ಯಾವ ಬಡತನವು ಅಡ್ಡಿಯಾಗಲಾರದು. ಶ್ರದ್ಧೆಯಿಂದ ಶಿಕ್ಷಣವನ್ನು ಕಲಿತು ಉತ್ತಮ ಸಾಧನೆ ಗೈದರೆ, ಸರಕಾರದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸುವುದರ ಜೊತೆಗೆ,ಕ್ಷೇತ್ರದ ಆರಾಧ್ಯ ದೈವನಾದ ಜಗದ್ಗುರು ಶ್ರೀ ಮಹಾಲಿಂಗೇಶ್ವರರ ಭಾವಚಿತ್ರ ನೀಡಿ ಸತ್ಕರಿಸಿದರು. ಶಿಕ್ಷಕರಾದ ಎಸ್.ಎಸ್. ಪಾಟೀಲ (ನಿಲಯ ಪಾಲಕರು), ಎಮ್. ಏನ್. ಸುವರ್ಣಖಂಡಿ, ರಮೇಶ ಹೊಸಟ್ಟಿ,ಅಶೋಕ ಬಕರೆ, ಗೋವಿಂದ ಕಳ್ಳೆನ್ನವರ,ಬಿ. ಎಲ್. ಮನ್ನಿಕೇರಿ,ಪರಮಾನಂದ ಭೋಶಿ, ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.