ಲೋಂಡಾ ಬಳಿ ರೈಲಿನಲ್ಲಿ ಚಾಕು ಇರಿತ ಪ್ರಕರಣ: ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡಗಳ ರಚನೆ

Ravi Talawar
ಲೋಂಡಾ ಬಳಿ ರೈಲಿನಲ್ಲಿ ಚಾಕು ಇರಿತ ಪ್ರಕರಣ: ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡಗಳ ರಚನೆ
WhatsApp Group Join Now
Telegram Group Join Now

ಬೆಳಗಾವಿ,17: ಖಾನಾಪುರ ತಾಲೂಕಿನ ಲೋಂಡಾ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಮುಸುಕುಧಾರಿ ವ್ಯಕ್ತಿಯಿಂದ ಹಲ್ಲೆಗೊಳಗಾದ ಗಾಯಾಳುಗಳ ಆರೋಗ್ಯವನ್ನು ರೈಲ್ವೆ ಡಿಐಜಿ ಶರಣಪ್ಪ ವಿಚಾರಿಸಿದರು. ಬೆಳಗಾವಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟಿ.ಟಿ ಸೇರಿ ನಾಲ್ವರು ಗಾಯಾಳುಗಳನ್ನು ಡಿಐಜಿ ಮಾತನಾಡಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಐಜಿ, ಐಪಿಸಿ ಸೆಕ್ಷನ್ 302, 307, 332, 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪುದುಚೇರಿ ದಾದರ್ ಎಕ್ಸ್​ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಅನಾಮಿಕ ಪ್ರಯಾಣಿಕ ಟಿಕೆಟ್ ವಿಚಾರಕ್ಕೆ ಟಿಟಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅವರ ಸಹಾಯಕ್ಕೆ ಬಂದ ಕೋಚ್ ಹೆಲ್ಪಿಂಗ್ ಸ್ಟಾಫ್​​ ಮೇಲೆಯೂ ಹಲ್ಲೆ ಆಗಿದೆ. ಆ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದರು.

ಈಗಾಗಲೇ ರೈಲ್ವೆ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಮೃತನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆ. ದೇವರ್ಷಿ ವರ್ಮಾ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದ ಡಿಐಜಿ ಶರಣಪ್ಪ, ಹಲ್ಲೆ ಮಾಡಿದ ಆರೋಪಿ ಪತ್ತೆಗೆ ಆರ್​ಪಿಎಫ್, ಜಿಆರ್​ಪಿ ಮತ್ತು ಸ್ಥಳೀಯ ಪೊಲೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ನಾಲ್ಕು ವಿಶೇಷ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರೈಲಿನಲ್ಲಿ ಭದ್ರತಾ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿ.ಆರ್.ಪಿ ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾರೆ. ಅದನ್ನು ಹೆಚ್ಚಿಸಲು ಕ್ರಮ ಕೈಗೊಳುತ್ತೇವೆ. ಆರೋಪಿಯು ಚಲಿಸುವ ಟ್ರೈನ್​ನಿಂದ ಇಳಿದಿರುವ ಮಾಹಿತಿ ಇದೆ. ಆರ್​ಪಿಎಫ್ ಪೊಲೀಸರು ಘಟನೆ ನಡೆದಾಗ ಸ್ಥಳದಲ್ಲಿ ಇರಲಿಲ್ಲ. ನಮ್ಮ ರಾಜ್ಯದಲ್ಲಿ ದಿನಕ್ಕೆ 1,400 ರೈಲುಗಳು ಓಡಾಡುತ್ತವೆ. ಆದರೆ, ನಮ್ಮ ಸಿಬ್ಬಂದಿ ಇರೋದು ಕೇವಲ 830 ಮಾತ್ರ. ಒಂದ ಟ್ರೇನ್‌ಗೆ ಒಬ್ಬ ಸಿಬ್ಬಂದಿಯನ್ನೂ ಹಾಕಲು ಆಗದ ಪರಿಸ್ಥಿತಿ ಇದೆ. ಹಾಗಾಗಿ, ಕ್ರೈಂ ಹಾಗೂ ಸೂಕ್ಷ್ಮ ಪ್ರದೇಶಗಳ ಆಧಾರದ ಮೇಲೆ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತಿದ್ದೇವೆ ಎಂದು ತಮ್ಮ ಅಸಹಾಯಕತೆ ಹೊರ ಹಾಕಿದರು. ಡಿಐಜಿ ಶರಣಪ್ಪ ಅವರೊಂದಿಗೆ ರೈಲ್ವೆ ಎಸ್ಪಿ ಸೌಮ್ಯಲತಾ ಸೇರಿ ಮತ್ತಿತರೆ ಪೊಲೀಸ್ ಅಧಿಕಾರಿಗಳು ಇದ್ದರು.

WhatsApp Group Join Now
Telegram Group Join Now
Share This Article