ದೆಹಲಿ,17: 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ನನ್ನ ಕಾರಿನ ಮೇಲೆ ಗುಂಡಿನ ದಾಳಿಗೆ ಯತ್ನಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇದು ನಾನು ಕಾಂಗ್ರೆಸ್ ಮೇಲೆ ಮಾಡುತ್ತಿರುವ ಆರೋಪ ಎಂದು ಭಾವಿಸಬೇಡಿ, ಪತ್ರಕರ್ತರಿಗೂ ಈ ವಿಷಯ ತಿಳಿದಿದೆ, ಗಾಂಧಿ ಕುಟುಂಬದ ಭಯ ಮತದಾರರಿಗೆ ಮಾತ್ರವಲ್ಲ ಪತ್ರಕರ್ತರಿಗೂ ಇತ್ತು ಎಂದರು.
ಈ ಹಿಂದೆ ಅಮೇಥಿಯಲ್ಲಿ ಬೂತ್ ವಶಪಡಿಸಿಕೊಳ್ಳುವಿಕೆ ಹಾಗೂ ರಾಜಕೀಯ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಈ ಘಟನೆಗಳು ವರದಿಯಾಗದಂತೆ ಗಾಂಧಿ ಕುಟುಂಬ ನೋಡಿಕೊಂಡಿದೆ. ಬಿಜೆಪಿ ಸಂಸದೆ ಮೇನಕಾ ಗಾಂಧಿ ಮೇಲೂ ಕಾಂಗ್ರೆಸ್ ಗೂಂಡಾಗಳು ಹಲ್ಲೆ ನಡೆಸಿದ್ದರು.
ರಾಜೀವ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸುಲಭವಾಗಿರಲಿಲ್ಲ, ಕಾಂಗ್ರೆಸ್ನಿಂದ ಹಲ್ಲೆಗೊಳಗಾಗಿದ್ದರು.
ಗ್ಲಾಮರ್ ಪ್ರಪಂಚದಿಂದ ರಾಜಕೀಯಕ್ಕೆ ಪ್ರವೇಶಿಸಲು ತಾನು ನಡೆಸಿದ ಹೋರಾಟದ ಬಗ್ಗೆ ಮಾತನಾಡುತ್ತಾ, ರಾಹುಲ್ ಗಾಂಧಿ ರೀತಿಯ ಹಿನ್ನೆಲೆ ಹೊಂದಿಲ್ಲ ಎಂದರು. ಮುಲಾಯಂ ಸಿಂಗ್ ಯಾದವ್ ಅವರ ನೆರವಿನಿಂದ 2014ರಲ್ಲೂ ರಾಹುಲ್ ಕೇವಲ 1.07 ಲಕ್ಷ ಮತಗಳಿಂದ ಗೆದ್ದಿದ್ದರು ಎಂದು ಹೇಳಿದರು.