ಗದಗ,17 : ಹಿರಿಯ ರಂಗಕರ್ಮಿ ಫಣೀಂದ್ರಚಾರ್ಯ ದ್ಯಾಮೇನಹಳ್ಳಿ ಅವರ ಭಕ್ತಿರಸ ಉಕ್ಕಿಸುವ ಸಂಭಾಷಣೆ ಹಾಗೂ ಗಟ್ಟಿ ನಿದರ್ಶನ ಮತ್ತು ಇಂಪಾದ ಹಾಡುಗಳೊಂದಿಗೆ ಪ್ರಯೋಗಗೊಂಡು ಜನಮನ ಸೂರೆಗೊಂಡ ಗದಗ ಕಲಾವಿದರ ‘ದಶರಥ ನಂದನ ಶ್ರೀರಾಮ’ ನಾಟಕ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಶ್ರೀ ಶಂಕರಾಚಾರ್ಯ ಸೇವಾ ಸಮೀತಿಯವರ ಆಶ್ರಯದಲ್ಲಿ ಪ್ರಯೋಗಗೊಳ್ಳಲಿದೆ.
ಆದಿಗುರು ಶಂಕರಾಚಾರ್ಯರ ಉತ್ಸವ ಅಂಗವಾಗಿ ದಿನಾಂಕ 18-05-2024 ರ ಶನಿವಾರ ಸಂಜೆ 6 ಗಂಟೆಗೆ ಪ್ರಯೋಗಗೊಳ್ಳುವ ಈ ನಾಟಕ(ಸಂಗೀತ ರೂಪಕ)ದಲ್ಲಿ ರಂಗಕಲಾವಿದರಾದ ಮೌನೇಶ್ ಸಿ. ಬಡಿಗೇರ್(ನರೇಗಲ್ಲ)- ಶ್ರೀರಾಮನಾಗಿ, ಲಕ್ಷ್ಮಣ- ಉಜ್ವಲ್ ಕಬಾಡಿ, ಭರತ – ಶ್ವೇತಾ ಸುರೇಬಾನ, ಸೀತೆ- ಕೀರ್ತಿ ಗುಮಾಸ್ತೆ , ದಶರಥ- ಅಂದಾನಪ್ಪ ವಿಭೂತಿ, ವಿಶ್ವಾಮಿತ್ರ- ಮುರಲೀಧರ ಸಂಕನೂರ, ಕೈಕೇಯಿ- ಅನ್ವಿತಾ ಹುಯಿಲಗೋಳ, ಮಂಥರೆ- ರಕ್ಷಿತಾ ಕುಲಕರ್ಣಿ, ಅಹಲ್ಯೆ- ರಂಜಿತಾ ಕುಲಕರ್ಣಿ, ಶೂರ್ಪನಖಿ- ಅನಘಾ ಕುಲಕರ್ಣಿ, ರಾವಣ- ವಿಶ್ವನಾಥ್ ಬೇಂದ್ರೆ, ಶಬರಿ- ಸುರಭಿ ಮಹಾಶಬ್ದಿ, ವೇದವತಿ- ರಂಜಿತಾ ಕುಲಕರ್ಣಿ, ಅಗ್ನಿದೇವ- ಶ್ವೇತಾ ಸುರೇಬಾನ, ವಿಭೀಷಣ- ಅಮರೇಶ ರಾಮ್ ಪುರ, ಮಾರೀಚ- ಅನನ್ಯ ದೇಶಪಾಂಡೆ, ಬಾಲರಾಮ- ದೇವಾಂಸ್, ಬಾಲ ಲಕ್ಷ್ಮಣ – ಪ್ರಭು ಗೌಡ,ಲವ ಕುಶ- ಆರಾಧ್ಯ.ಅನನ್ಯಾ, ಹನುಮಂತ- ಅವನಿ ಕುಲಕರ್ಣಿ ಅಭಿನಯಿಸಲಿದ್ದಾರೆ. ರಂಗಾಸಕ್ತರು ವೀಕ್ಷಿಸಲು ಶಂಕರಾಚಾರ್ಯ ಸೇವಾ ಸಮೀತಿಯವರು ವಿನಂತಿಸಿದ್ದಾರೆ.