ಬೆಳಗಲಿ ,16: ಸನ್ ೨೦೨೩-೨೪ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನದಡಿ ಎಸ್.ಸಿ.ಎಸ್.ಪಿ. (೧೭.೧೫%) ಅಡಿ ವೈಯಕ್ತಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ., ಪಿ.ಯು.ಸಿ./ಐ.ಟಿ.ಐ./ಪ್ಯಾರಾ ಮೆಡಿಕಲ್ ಕೋರ್ಸ್/ಡಿಪ್ಲೋಮಾ/ಡಿ.ಇ.ಡಿ./ಸಿ.ಪಿ.ಇ.ಡಿ. ಇತರೆ ತಾಂತ್ರಿಕ/ವೃತ್ತಿಪರ ಕೋರ್ಸ್ ಹಾಗೂ
ಬಿ.ಎ./ಬಿ.ಎಸ್.ಸಿ./ಬಿ.ಕಾಂ./ಬಿ.ಬಿ.ಎ./ಬಿ.ಬಿ.ಎಂ./ಬಿ.ಸಿ.ಎ./ಬಿ.ಎಡ್/ಬಿ.ಪಿ.ಎಡ್ ಇತರೆ ಪಧವಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ
ಪ್ರೋತ್ಸಾಹ ಧನಕ್ಕಾಗಿ ದಿನಾಂಕ:೧೬/೦೧/೨೦೨೪ರಂದು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಆದರೆ ನಿಗದಿತ ಅರ್ಜಿಗಳು ಸ್ವೀಕೃತವಾಗದ ಕಾರಣ ಪುನಃ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:೧೦/೦೩/೨೦೨೪ ಸಾಯಂಕಾಲ ೫-೦೦ಗಂಟೆ. ಅವಧಿ ಮೀರಿ ಬಂದ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ರಜೆ ದಿನಗಳನ್ನು ಹೊರತುಪಡಿಸಿ ಸಂಬಂಧಿಸಿದ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ. ಸಹಿ/-ಮುಖ್ಯಾಧಿಕಾರಿಗಳು ಸಹಿ/- ಆಡಳಿತಾಧಿಕಾರಿಗಳು ಪಟ್ಟಣ ಪಂಚಾಯತ ಬೆಳಗಲಿ ಪಟ್ಟಣ ಪಂಚಾಯತ ಬೆಳಗಲಿ