ಪ್ರಜ್ವಲ್ ರೇವಣ್ಣ  ಪೆನ್​ಡ್ರೈವ್​ ಹಂಚಿಕೆ ಪ್ರಕರಣದ ಆರೋಪಿಗಳ ಜಾಮೀನು ವಜಾ

Ravi Talawar
ಪ್ರಜ್ವಲ್ ರೇವಣ್ಣ  ಪೆನ್​ಡ್ರೈವ್​ ಹಂಚಿಕೆ ಪ್ರಕರಣದ ಆರೋಪಿಗಳ ಜಾಮೀನು ವಜಾ
WhatsApp Group Join Now
Telegram Group Join Now

ಹಾಸನ, ಮೇ 14: ಹಾಸನ ಸಂಸದ ಪ್ರಜ್ವಲ್​ ರೇವಣ್ಣ  ಪೆನ್​ಡ್ರೈವ್​ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಲಿಖಿತ್​ ಗೌಡ, ಚೇತನ್ ಜಾಮೀನುಅರ್ಜಿ ವಜಾಗೊಂಡಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಲಿಖಿತ್​, ಚೇತನ್​​​​ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು (ಇಂದು (ಮೇ 14) ಹಾಸನದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ವಜಾ ಮಾಡಿ ಆದೇಶ ಹೊರಡಿಸಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಹಂಚಿಕೆ ಪ್ರಕರಣ ಸಂಬಂಧ ಮಾಜಿ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಆಪ್ತರು ಎನ್ನಲಾದ ಲಿಖಿತ್​ ಗೌಡ, ಚೇತನ್ ಅವರನ್ನು ಎಸ್​ಐಟಿ ಅಧಿಕಾರಿಗಳು ಮೇ 12ರಂದು ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೀಗ ಆರೋಪಿಗಳ ಜಾಮೀನು ಅರ್ಜಿ ಸಹ ವಜಾಗೊಂಡಿದೆ.

ಮತ್ತೊಂದೆಡೆ ಸಂತ್ರಸ್ತೆಯನ್ನು ಅಪಹರಣ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಜೈಲು ಸೇರಿದ್ದ ಜೆಡಿಎಸ್​ ಶಾಸಕ ಎಚ್​ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​ ನಿನ್ನೆ(ಮೇ 13) ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಆದ್ರೆ, ನಿನ್ನೆ ಸಮಯ ಆಗಿದ್ದರಿಂದ ಇಂದು (ಮೇ 14) ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಇದರಿಂದ ಜೆಡಿಎಸ್​ ಮುಖಂಡರು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸದ್ಯ ರೇವಣ್ಣ ಅವರು ಜೈಲಿನಿಂದ ನೇರವಾಗಿ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ ಅವರ  ನಿವಾಸಕ್ಕೆ ತೆರಳಿದ್ದಾರೆ.

 

 

WhatsApp Group Join Now
Telegram Group Join Now
Share This Article