ಸಂಡೂರು:ಮೇ: 14: ಪ್ರತಿವರ್ಷದಂತೆ ಈ ವರ್ಷವೂ ಸಹ ನಿರಂತರ ಶಿಕ್ಷಕರ , ಪಾಲಕರ ಹಾಗೂ ವಿದ್ಯಾರ್ಥಿಗಳ ನಿರಂತರ ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ ಎಲ್ಲರಿಗೂ ಅಭಿನಂದಿಸುತ್ತಾ ಈ ಸಾಧನೆ ಮಾಡಿದ 9 ವಿದ್ಯಾರ್ಥಿಗಳಿಗೆ ಅಭಿನಂದಿಸಲು ಹೆಮ್ಮೆ ಎನಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್. ಅಕ್ಕಿ ತಿಳಿಸಿದರು.
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ 2020ನೇ ಸಾಲಿನಲ್ಲಿ ಕರೋನ ಕರಿನೆರಳು, ನಂತರ ಜುಲೈ 7 ರಂದು ಅಧಿಕಾರ ವಹಿಸಿಕೊಂಡ ನಂತರ ನಿರಂತರ ಶ್ರಮವಹಿಸಿ 15 ದಿನಕ್ಕೊಮ್ಮೆ ಪ್ರತಿಬಿಂಬ ಪರೀಕ್ಷೆಯ ಮೂಲಕ ಪಾಠ ಭೋಧನೆ ಮಾಡಿದ ಫಲ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು,
ಡಾ.ಆಕಾಶ್ ರವರು ಬುಲೆಟ್ ಪತ್ರಿಕೆ ನೀಡಿ ಸಹಕರಿಸಿದರು. ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ನಮ್ಮ ಮಾರ್ಗದರ್ಶನವನ್ನು ಎಲ್ಲಾ ಹಿರಿಯರೊಡನೆ ಚರ್ಚಿಸಿ ಮಕ್ಕಳಿಗೆ ಉತ್ತಮ ಭರವಣೆಗೆಗೆ ಸಹಕಾರಿಯಾಗಿದೆ, ಪರೀಕ್ಷೆಯನ್ನು ಹಬ್ಬವಾಗಿ ಬರೆಸುವ ಮೂಲಕ ಅವರಿಗೆ ಅರ್ಥಪೂರ್ಣವಾಗಿ ಅರ್ಥಮಾಡಿಸಿ ಪರೀಕ್ಷೆಯ ಭಯವನ್ನು ಹೋಗಲಾಡಿಸಿದ ಶ್ರಮ ಇದಾಗಿದೆ, ನಮ್ಮ ಮಕ್ಕಳು 612 ಅಂಕ ಪಡೆದಿದ್ದಾರೆ, ಸಿ.ಈ.ಓ ಅವರು 15 ದಿನಗಳಿಗೆ ಒಮ್ಮೆ ಪರೀಶಿಲಿಸಿ ಪ್ರೋತ್ಸಾಹಿಸಿದ್ದು, ಸಮಯದ ಪ್ರಜ್ಞೆ ಹೀಗೆ ಹಲವು ರೀತಿಯ ಸಹಕಾರದಿಂದ ಇದು ಸಾಧ್ಯವಾಗಿದ್ದು ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತಿ ಅಗತ್ಯವಾಗಿತ್ತು ಎಂದರು.
ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ ಗುಣಮಟ್ಟದ ಶಿಕ್ಷಣಕ್ಕೆ , ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ನಿಮ್ಮ ಜೀವನದಲ್ಲಿ ಎರಡು ಪ್ರಮುಖ ಹಂತಗಳು ಅದರಲ್ಲಿ ಎಸ್.ಎಸ್.ಎಲ್.ಸಿಯೂ ಅಗಿದೆ, ಅದ್ದರಿಂದ ನಿರಂತರ ತಾಪತ್ರಯಗಳು ಬರುತ್ತಿರುತ್ತವೆ ಅವುಗಳನ್ನು ಮೆಟ್ಟಿ ನಿಂತು ಉತ್ತಮ ಕೆಲಸ ಮಾಡುವ ಮೂಲಕ ನಿಮ್ಮನ್ನು ಸ್ಪರ್ಧಾ ಜಗತ್ತಿಗೆ ಕಾಲಿರುಸುವಂತೆ ಶಿಕ್ಷಕರು, ಅಧಿಕಾರಿಗಳು, ಪಾಲಕರು ನಿರಂತರ ಶ್ರಮವಹಿಸಿದ್ದಾರೆ, ಅ ಶ್ರಮದ ಫಲ ನಿಮಗೆ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ, ಮುಂದಿನ ದಿನಗಳಲ್ಲಿಯೂ ಸಹ ತಂದೆ, ತಾಯಿ, ಗುರು ಹಿರಿಯರ ಮಾತುಗಳನ್ನು ಕಏಳವು ಮೂಲಕ ಉತ್ತಮವಾದ ಕನಸ್ಸಿನೊಂದಿಗೆ ಹೆಜ್ಜೆ ಹಾಕಿದರೆ ಸಾಧನೆ ನಿಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಅದರ್ಶ ವಿದ್ಯಾಲಯ ಕೃಷ್ಣಾನಗರ ಶಾಲೆಯ ವಿದ್ಯಾರ್ಥಿ ಸುದೀಪ್.ಹೆಚ್.,98% , ಶ್ರೀ ವಿದ್ಯಾಮಂದಿರ ಶಾಲೆಯ ಓ.ಅರ್. ಪ್ರಜ್ವಲ 96% , ಮುರಾರ್ಜಿ ದೇಸಾಯಿ ವಸತಿ ಶಾಲೆ ಚೋರನೂರು ವಿದ್ಯಾರ್ಥಿ ಅಖಿಲ ಕುಮಾರ್ ಜಿ.ಎಸ್. 96% , ಈ ಮೂರು ವಿದ್ಯಾರ್ಥಿಗಳು ಅಂಗ್ಲ ಮಾದ್ಯಮದಲ್ಲಿ , ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಪ್ರೌಢಶಾಲೆ ತಾಳೂರು ಶಾಲೆಯ ವಿದ್ಯಾರ್ಥಿನಿ ಶಶಿಕಲಾ 94%, ಸರ್ಕಾರಿ ಪ್ರೌಢಶಾಲೆ ಬೊಮ್ಮಘಟ್ಟೆಯ ವಿಧ್ಯಾರ್ಥಿನಿ ಅನು 93%, ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಪ್ರೌಢಶಾಲೆ ಚೋರನೂರು ವಿದ್ಯಾರ್ಥಿನಿ ಲಕ್ಷ್ಮೀ.ಎಂ. 92%, ಹಾಗೂ ಉರ್ದು ಮಾಧ್ಯಮದಲ್ಲಿ ಸರ್ಕಾರಿ ಪ್ರೌಢಶಾಲೆ, ಅನ್ನೂಸ್ ಸಾಬ್.ಬಿ.86%, ಆಫ್ರೀನ್ ಅಲಂ ಸರ್ಕಾರಿ ಉರ್ದು ಪ್ರೌಢಶಾಲೆ 67%, ಉಮ್ಮೀ ಕಲಸುಂ 64% ಸಂಡೂರು ಇವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಶಶಿಕಲಾ, ತಾಳೂರು, ಸುದೀಪ್ ಆದರ್ಶ ವಿದ್ಯಾಲಯ, ಐನೂಸ್ ಸಬಾ, ಪ್ರಜ್ವಲ್ ಇತರರು ಉಪಸ್ಥಿತರಿದ್ದರು.