ನವದೆಹಲಿ,14: ಎಲ್ಗಾರ್ ಪರಿಷತ್– ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವಲ್ಲಿ ಉಚ್ಚ ನ್ಯಾಯಾಲಯದ ಆದೇಶವು ವಿವರವಾದ ಕಾರಣ ನೀಡಿರುವುದರಿಂದ ತಡೆಯಾಜ್ಞೆಯನ್ನು ವಿಸ್ತರಿಸದಿರಲು ನಾವು ಒಲವು ತೋರುತ್ತೇವೆ. ಪ್ರಕರಣದಲ್ಲಿ ವಿಚಾರಣೆ ಪೂರ್ಣಗೊಳ್ಳಲು ವರ್ಷಗಳೇ ತೆಗೆದುಕೊಳ್ಳುತ್ತದೆ. ಹೀಗಾಗಿ, ವಿವಾದಗಳನ್ನು ಆಳವಾಗಿ ಪರಿಶೀಲಿಸದೆ, ನಾವು ತಡೆಯಾಜ್ಞೆಯನ್ನು ವಿಸ್ತರಿಸುವುದಿಲ್ಲ. 20 ಲಕ್ಷ ರೂ.ಗಳನ್ನು ಆದಷ್ಟು ಬೇಗ ಎದುರು ಪಕ್ಷಕ್ಕೆ ಪಾವತಿಸಬೇಕು ಎಂದು ಪೀಠ ಹೇಳಿದೆ.