ಬೆಂಗಳೂರು,13: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಡುಗು, ಮೋಡ, ಕ್ರಾಸ್‌ವಿಂಡ್‌ಉಂಟಾದ ಪರಿಣಾಮ ಬೆಂಗಳೂರಿಗೆ ಬರಬೇಕಾಗಿದ್ದ 11 ವಿಮಾನಗಳು ಭಾನುವಾರ ರಾತ್ರಿ ಚೆನ್ನೈಗೆ ತಲುಪಿವೆ. ಅವುಗಳಲ್ಲಿ ನಾಲ್ಕು ಅಂತರಾಷ್ಟ್ರೀಯ ವಿಮಾನಗಳಾಗಿವೆ.
ವಿಮಾನ ನಿಲ್ದಾಣದಲ್ಲಿ ಗುಡುಗು ಸಹಿತ ಮೋಡಗಳಿಂದಾಗಿ ಏರ್ ಟ್ರಾಫಿಕ್ ನಿಯಂತ್ರಣದ ಮೇಲೆ ಪರಿಣಾಮ ಉಂಟುಮಾಡಿದವು. ಇದರಿಂದಾಗಿ ಕ್ರಾಸ್ ವಿಂಡ್ ಉಂಟಾಯಿತು. ಇದು ಗಂಟೆಗೆ 20 ರಿಂದ 25 ಕಿ.ಮೀ ವೇಗ ಹೊಂದಿತ್ತು. ಉತ್ತರ ಮತ್ತು ದಕ್ಷಿಣದ ಎರಡೂ ರನ್‌ವೇಗಳು ಏರ್ ಟ್ರಾಫಿಕ್ ಕಂಟ್ರೋಲ್ ಸಮೀಪದಲ್ಲಿವೆ, ಆ ಅವಧಿಯಲ್ಲಿ ಟೈಲ್‌ವಿಂಡ್‌ಗಳ ಕಾರಣದಿಂದಾಗಿ ವಿಮಾನಗಳು ಇಳಿಯುವುದು ಅಥವಾ ಟೇಕ್ ಆಫ್ ಮಾಡುವುದು ಖಂಡಿತವಾಗಿಯೂ ಸುರಕ್ಷಿತವಲ್ಲ ಎಂದು ಏರೋಡ್ರಮ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಭಾರೀ ಹವಾಮಾನ ಮತ್ತು ಮಿಂಚಿನ ಕಾರಣದಿಂದ ರಾತ್ರಿ 11.18 ರಿಂದ 11.54 ರವರೆಗೆ ಲ್ಯಾಂಡಿಂಗ್ ನಿಲ್ಲಿಸಲಾಗಿತ್ತು. ಪ್ರತಿಕೂಲ ಹವಾಮಾನ 11 ವಿಮಾನಗಳ ಮೇಲೆ ಪರಿಣಾಮ ಬೀರಿತು. ಅವುಗಳಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನಗಳಾಗಿವೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವಕ್ತಾರರು ತಿಳಿಸಿದ್ದಾರೆ. ಮಾರ್ಗ ಬದಲಾವಣೆಯಿಂದಾಗಿ ವಿಮಾನಗಳು ತಮ್ಮ ಗಮ್ಯಸ್ಥಾನ ತಲುಪುವಲ್ಲಿ ಎರಡೂವರೆ ಗಂಟೆಯಿಂದ ಮೂರೂವರೆ ಗಂಟೆಗಳ ವಿಳಂಬವಾಯಿತು. ಬ್ಯಾಂಕಾಕ್‌ನಿಂದ ಥಾಯ್ ವಿಮಾನ (TG 325), ಬ್ಯಾಂಕಾಕ್‌ನಿಂದ ಥಾಯ್ ಲಯನ್ ಏರ್ (SL 216) ಪ್ಯಾರಿಸ್‌ನಿಂದ ಏರ್ ಫ್ರಾನ್ಸ್ (AF 194) ಮತ್ತು ಆಮ್‌ಸ್ಟರ್‌ಡ್ಯಾಮ್‌ನಿಂದ KLM ವಿಮಾನ (KL 879) ಗಳು ಸೇರಿವೆ.