ಗದಗ,11 : ವಿದ್ಯೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅದು ಯಾರೊಬ್ಬರ ಸ್ವತ್ತಲ್ಲ ಹಾಗೂ ಯಾವ ಜಾತಿಗೂ ಸೀಮಿತ ಅಲ್ಲ ಎಂದು ವಿಧಾನ ರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರು ಹೇಳಿದರು.
ಇತ್ತೀಚೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ೬೨೫ ಕ್ಕೆ ೬೨೨ ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದ ಕುಮಾರಿ ಸಮೃದ್ಧಿ ಶ್ರೀಧರ್ ದ್ಲಿಂಗ್ ಇವರ ಹೆಲ್ತ್ಕ್ಯಾಂಪ್ ನಿವಾಸಕ್ಕೆ ಭೇಟಿ ನೀಡಿ ಶಾಲು ಹೊದಿಸಿ ಸಂತೋಷವನ್ನು ವ್ಯಕ್ತಪಡಿಸಿ ಮಾತನಾಡಿದರು.
ಕುಮಾರಿ ಸಮೃದ್ಧಿ ಸಿದ್ಲಿಂಗ್ ವಿದ್ಯಾರ್ಥಿನಿ ತನ್ನ ಯಶಸ್ಸಿಗೆ ಕಾರಣೀಕರ್ತರಾದ ಲೋಯಲಾ ಪ್ರೌಢಶಾಲೆ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಧನ್ಯವಾದಗಳನ್ನು ಹೇಳಿ ಪ್ರಾಮಾಣಿಕ ಪ್ರಯತ್ನ ಹಾಗೂ ಪರಿಶ್ರಮದಿಂದ ಈ ರೀತಿಯ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದಳು.
ಮುಂಬರುವ ದಿನಗಳಲ್ಲಿ ನಾನು ಕಾನೂನು ಶಿಕ್ಷಣ ಅಭ್ಯಾಸ ಮಾಡಿ ಉಚ್ಚ ನ್ಯಾಯಾಲಯ ನ್ಯಾಯಾಧೀಶೆ ಆಗುವ ಗುರಿಯನ್ನು ಹೊಂದಿರುವುದಾಗಿ ಹೇಳಿದಳು. ಜಿಲ್ಲಾ ಉಪನಿರ್ದೇಶಕರಾದ ಎಂ.ಎ. ರೆಡ್ಡೇರ ಅವರು ಮಾತನಾಡಿ ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿ ೨೫ನೇ ಸ್ಥಾನದಲ್ಲಿ ಇತ್ತು ಈ ಬಾರಿ ೧೭ನೇ ಸ್ಥಾನಕ್ಕೆ ಬಂದಿರುವುದು ಸಂತೋಷದ ಸಂಗತಿ ಎಂದು ಹೇಳಿ ಈ ಸಾಧನೆಗೆ ಕಾರಣಿಕರ್ತರಾದ ಜಿಲ್ಲೆಯ ಎಲ್ಲಾ ಸಹಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರನ್ನು ಅಭಿನಂದಿಸಿದರು.
ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯನ್ನು ಹತ್ತನೇ ಸ್ಥಾನಕ್ಕೆ ತರುವಲ್ಲಿ ಈಗಿನಿಂದಲೇ ಯೋಜನೆಯನ್ನು ರೂಪಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್. ಬುರುಡಿ, ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಪಿ.ಎಚ್. ಕಡಿವಾಳ, ತಾಲೂಕ ಅಧ್ಯಕ್ಷರಾದ ಬಿ.ಎಫ್. ಪೂಜಾರ ಅವರು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಕೊನೆಗೆ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ.ನಡವಿನಮನಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು, ಹೆಲ್ತಕ್ಯಾಂಪ್ ನಿವಾಸಿಯಾದ ಅರವಿಂದ ಹುಲ್ಲೂರ ಹಾಗೂ ಓಣಿಯ ಹಿರಿಯರು ಉಪಸ್ಥಿತರಿದ್ದರು. ಫೋಟೊ ಕ್ಯಾಪ್ಶನ್ : ಕುಮಾರಿ ಸಮೃದ್ಧಿ, ಅವಳ ತಾಯಿ ಶಿಲ್ಪಾ ಶ್ರೀಧರ ಸಿದ್ಲಿಂಗ್ ಹಾಗೂ ಲೊಯೋಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿಯರಾದ ಸಿಸ್ಟರ್ ರೇನಿಟಾ ಅವರನ್ನು ಸನ್ಮಾನಿಸಿದರು.