ಸಮಾನತೆ ಸಾರಿದ ಕೀರ್ತಿ ಶ್ರೀ ಬಸವೇಶ್ವರರಿಗೆ ಸಲ್ಲುತ್ತದೆ. ಪ್ರಿಯಾಂಕಾ ಜಾರಕಿಹೊಳಿ 

Ravi Talawar
ಸಮಾನತೆ ಸಾರಿದ ಕೀರ್ತಿ ಶ್ರೀ ಬಸವೇಶ್ವರರಿಗೆ ಸಲ್ಲುತ್ತದೆ. ಪ್ರಿಯಾಂಕಾ ಜಾರಕಿಹೊಳಿ 
WhatsApp Group Join Now
Telegram Group Join Now
ಬೆಳಗಾವಿ,11: “ಅಸಮಾನತೆಯಲ್ಲಿ ತೊಳಲಾಡುತ್ತಿದ್ದ ಸಮಾಜದಲ್ಲಿ ಸಮಾನತೆಯನ್ನು 12ನೇ ಶತಮಾನದಲ್ಲಿಯೇ ಸಾರಿದ ಕೀರ್ತಿ ಜಗಜ್ಯೋತಿ ಬಸವೇಶ್ವರರಿಗೆ ಸಲ್ಲುತ್ತದೆ. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ, ಮಹಿಳಾ ಸಮಾನತೆ ಪ್ರತಿಪಾದಿಸಿದ ಜಗತ್ತಿನ ಮೊದಲ ವ್ಯಕ್ತಿ ಎನಿಸಿದ್ದಾರೆ” ಎಂದು ಯುವ ನಾಯಕಿ ಪ್ರಿಯಾಂಕ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವ ಜಯಂತಿಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಬಸವ ಜಯಂತಿ ಕಾರ್ಯಕ್ರಮವನ್ನು  ಯುವ ನಾಯಕಿ   ಪ್ರಿಯಾಂಕ ಜಾರಕಿಹೊಳಿ   ಉದ್ಘಾಟಿಸಿ  ಮಾತನಾಡಿದರು.
ಶ್ರೇಷ್ಠ ವಚನಗಳ ಮೂಲಕ ಮಾನವ ಕುಲಕ್ಕೆ ದಾರಿ ತೋರಿದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರ ಜಯಂತಿಯ  ಭಕ್ತಿಪೂರ್ವಕ ನಮನಗಳು ಎಂದರು.
ಬಸವಣ್ಣ ಅವರು ಜಾತಿ, ಮತ ಭೇದ ತೊಡೆದು ಹಾಕಿ ಎಲ್ಲಾ ಜನಾಂಗವನ್ನು ಒಂದುಗೂಡಿಸುವಲ್ಲಿ ಮಹಾನ್ ಪಾತ್ರ ವಹಿಸಿದ ಧೀಮಂತ ಪುರುಷ. ಮಾನವ ಕುಲಕ್ಕೆ ಅವರು ಮಾನವತಾ ಸಂದೇಶ ನೀಡಿ ಹೋದರು. ದಲಿತರಿಗೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಲು ಅವರು ಪ್ರೇರಣೆಯಾದರು. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ನೀಡಿ ಅವರ ಏಳಿಗೆಗೆ ಶ್ರಮಿಸಿದ ವಿಶ್ವ ಗುರು ಬಸವಣ್ಣ  ಎಂದು ಹೇಳಿದರು.
ಜಗಜ್ಯೋತಿ ಬಸವಣ್ಣನವರು ನೀಡಿದ ಪ್ರತಿಯೊಂದು ಆಚಾರ, ವಿಚಾರ, ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ವೇಳೆ  ರಾಷ್ಟ್ರೀಯ ಬಸವ ದಳ ವತಿಯಿಂದ 50 ಸಾವಿರ ಲೀಟರ್ ಜ್ಯೂಸ್ ನ್ನು ಸಾರ್ವಜನಿಕರಿಗೆ ವಿತರಿಸಲಾಯಿತು . ಈ ಸಂದರ್ಭದಲ್ಲಿ ಮೇಯರ್ ಸವಿತಾ ಕಾಂಬಳೆ , ರಾಜಶೇಖರ್ ಡೋಣಿ , ಬೆಂಡಿಗೇರಿ ,ಆನಂದ ಗುಡಸ್, ಸಂತೋಷ್ ಗುಡಸ್ , ಬಸವರಾಜ ಶಿಗ್ಗಾಂವಿ  ಇತತರು ಇದ್ದರು.
WhatsApp Group Join Now
Telegram Group Join Now
Share This Article