ಸಂಕೇಶ್ವರ,11: ಗಡಿ ಪಟ್ಟಣ ಸಂಕೇಶ್ವರದಲ್ಲಿ ಶ್ರದ್ದೆ ಮತ್ತು ಭಕ್ತಿಯಿಂದ ಬಸವ ಜಯಂತಿಯನ್ನು ವಿಭ್ರಂಜನೆಯಿಂದ ಆಚರಿಸಲಾಯಿತು.
ಘಟ್ಟಗಿ ಬಸವಣ್ಣ ದೇವರ ಗುಡಿಯಿಂದ ತರಲಾದ ಬಸವ ಜ್ಯೋತಿಯನ್ನು ನಿಡಸೋಸಿ ಮಠ, ಸಂಕೇಶ್ವರ ಪುರಸಭೆಯ ಕಾಯರ್ಾಲಯದಲ್ಲಿ ಸ್ವಾಗತಿಸಲಾಯಿತು.
ತದ ನಂತರ ಬಸವಣ್ಣ ದೇವಾಲಯಕ್ಕೆ ಕೊಂಡೊಯ್ದ ಅಲ್ಲಿ ಜ್ಯೋತಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ ಸ್.ಎಸ್.ಶಿರಕೋಳಿ,
ಪುರಸಭೆಯ ಸದಸ್ಯರಾದ ಸುನೀಲ ಪರ್ವತರಾವ್, ಸಂಜಯ ಶಿರಕೋಳಿ, ಸಮಾಜದ ಧುರೀಣರಾದ ಬಸವರಾಜ ಬಾಗಲಕೋಟೆ,ಪ್ರಕಾಶ ಫಡಿ, ಅಪ್ಪು ಹೆದ್ದೂರಶೆಟ್ಟಿ, ಸಂಜಯ ಪಚಂಡಿ,
ಚೈಭವ ಗಡ್ಡಿ, ಪ್ರತೀಕ ಜರಳಿ ಮುಂತಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಬಸವ ದಳದಿಂದಲೂ ಬಸವ ಜಯಂತಿಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಬಸವ ಮಂಟಪದಿಂದ ಆರಂಭವಾದ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ
ಸಂಚರಿಸಿ ರಾಜ್ಯ ರಸ್ತೆ ಸಾರಿಗೆಯ ಸಂಕೇಶ್ವರ ಘಟಕಕ್ಕೆ ಬಂದಿತು.
ಅಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶರಣೆ ಸುವಣರ್ಾ ಪಾಟೀಲ ಅವರು, 12 ಶತಮಾನದಲ್ಲಿ ಬಸವೇಶ್ವರ ಮತ್ತು ಅವರ ಸಂಗಡಿಗರು ಜನಸಮಾನ್ಯರಿಗೆ ಅರ್ಥವಾಗುವ ಹಾಗೆ
ಸರಳ ಕನ್ನಡದಲ್ಲಿ ಬದುಕಿಗೆ ಸಮೀಪ ವಾವಚನಗಳನ್ನು ಬರೆದಿದ್ದಾರೆ. ಅವುಗಳ ಸಾರವನ್ನು ನಾವು ಅಥರ್ೈಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಕೇಶ್ವರ ಘಟಕದ ವ್ಯವಸ್ಥಾಪಕ ವಿಜಯ ಕಾಗವಾಡೆ, ಬಿ.ಎಲ್.ಪಾಟೀಲ,ಕಾಡಪ್ಪಾ ಬಸ್ತವಾಡೆ,
ಮಲ್ಲಿಕಾಜರ್ುನ,ದಯಾನಂದ ಲಠ್ಠಿ, ಕಾಡೇಶ ಬಸ್ತವಾಡಿ, ಗಿರೀಶ ಗಡ್ಡಿ ಮುಂತಾದವರು ಉಪಸ್ಥಿತರಿದ್ದರು.