ರನ್ನ ಬೆಳಗಲಿ,09: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ನಿವಾಸಿಯಾದ ಕುಮಾರಿ ಅಂಕಿತ ಬಸಪ್ಪ ಕೊಣ್ಣೂರ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳಿಸುವುದರ ಜೊತೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ.
ರನ್ನ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ತಾಲೂಕಿನ ಮಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಯಾದ ಅಂಕಿತಾಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಹಾಗೂ ಅಬಕಾರಿ ಸಚಿವರಾದ ಆರ್.ಬಿ. ತಿಮ್ಮಾಪುರ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಜಿಲ್ಲಾ ಅಧಿಕಾರಿಗಳಾದ ಜಾನಕಿ ಕೆ .ಎಂ. ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾದ ಬಿ.ಕೆ ನಂದನೂರ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕರಾದ ಶಶಿಧರ ಕುರಿಯರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಂದಾ ಹನಮರೆಟ್ಟಿ, ಮುಧೋಳ ಕ್ಷೇತ್ರಾಧಿಕಾರಿಗಳಾದ ಎಸ್. ಎಂ. ಮುಲ್ಲಾ, ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮೋಹನ ಕೋರಡ್ಡಿ, ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ಸಿದ್ದು ನ್ಯಾಮಗೌಡ, ಕ್ಷೆತ್ರ ಸಮನ್ವಯ ಅಧಿಕಾರಿಗಳಾದ ಎ.ಆರ್.ಛಬ್ಬಿ ಸಾಧಕ ವಿದ್ಯಾರ್ಥಿನಿಗೆ ಹಾಗೂ ವಿದ್ಯಾರ್ಥಿಯ ವಸತಿ ಶಾಲೆಯ ಪ್ರಾಚಾರ್ಯರಾದ ವಿಜಯಕುಮಾರ ಜಮಖಂಡಿ, ಶಿಕ್ಷಕರಾದ ಎಂ.ಆರ್. ಕಾರಭಾರಿ,ವಿ.ಎಲ್ ಮಂಟೂರ. ಕೊಬ್ರಿ ಮೇಡಂ,ಅರುಣ ಮುತ್ತಗಿ.ಜಿ.ವಿ.ಘಟ್ಟದ,ಆರ್.ಕೆ ಕಾಂಬ್ಳೆ ,ವಿ.ಎಸ್.ಕೊಡಬಾಗಿ, ಎಂ. ಎಲ್.ಹೂಗಾರ,ಜಗದೀಶ ತೊಂಡಿಹಾಳ ಈ ಎಲ್ಲಾ ಶಿಕ್ಷಕ ವೃಂದಕ್ಕೆ ಅಭಿನಂದಿಸಿದರು.
ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಆನಂದ ಪೂಜಾರಿ ಅಧ್ಯಕ್ಷರು ಕ.ಸಾ.ಪ ಮುಧೋಳ, ರಮೇಶ್ ಅರಿಕೇರಿ ಅಧ್ಯಕ್ಷರು ಕ.ಜಾ.ಪ ಮುಧೋಳ, ಮಹೇಶ್ .ಎಸ್. ದಿವಾನ, ಸಂಗಮೇಶ ನೀಲಗುಂದ, ಗುರುನಾಥ ಬೇವಿನಗಿಡ, ಬಸವರಾಜ ಹುಣಚಿಗಿ, ಪಿ.ಬಿ.ಹಿರೇಮಠ, ರಾಘವೇಂದ್ರ ನೀಲಣ್ಣವರ ಮುಂತಾದವರು ವಿದ್ಯಾರ್ಥಿನಿಗೆ ಗ್ರಂಥಗಳನ್ನು ನೀಡಿ ಗೌರವಿಸಿ ಸನ್ಮಾನಿಸಿದರು.