ಸಿಬಿಎಸ್‌ಸಿ 10, 12ನೇ ತರಗತಿ ವಿದ್ಯಾರ್ಥಿಗಳಿಗೆ 6 ಡಿಜಿಟ್ ಡಿಜಿಲಾಕರ್ ಕೋಡ್‌: ಶೀಘ್ರದಲ್ಲೇ ಫಲಿತಾಂಶ!

Ravi Talawar
ಸಿಬಿಎಸ್‌ಸಿ 10, 12ನೇ ತರಗತಿ ವಿದ್ಯಾರ್ಥಿಗಳಿಗೆ 6 ಡಿಜಿಟ್ ಡಿಜಿಲಾಕರ್ ಕೋಡ್‌: ಶೀಘ್ರದಲ್ಲೇ ಫಲಿತಾಂಶ!
WhatsApp Group Join Now
Telegram Group Join Now

ನವದೆಹಲಿ,08: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್) 10ನೇ ಹಾಗು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ 6 ಡಿಜಿಟ್ ಡಿಜಿಲಾಕರ್ ಪ್ರವೇಶ ಕೋಡ್​ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಶಾಲೆಗಳು ತಮ್ಮ ಸ್ವಂತ ಡಿಜಿಲಾಕರ್ ಖಾತೆಗಳಿಂದ 6 ಡಿಜಿಟ್ ಡಿಜಿಲಾಕರ್ ಪ್ರವೇಶ ಕೋಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.

ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ 6 ಸಂಖ್ಯೆಯ ಪ್ರವೇಶ ಕೋಡ್ ಪಡೆಯಬೇಕಿದೆ. ಸಿಬಿಎಸ್​ಸಿ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಡಿಜಿಲಾಕರ್‌ನಲ್ಲಿ ಲಾಗಿನ್​ ಆಗಿ ತಮ್ಮ ಫಲಿತಾಂಶ ಮತ್ತು ಇತರ ಅಧಿಕೃತ ದಾಖಲೆಗಳನ್ನು ನೋಡಬಹುದು.

ಫಲಿತಾಂಶದ ದಿನ, ನಿಮ್ಮ ಡಿಜಿಲಾಕರ್ ಖಾತೆಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಮಾರ್ಕ್‌ಶೀಟ್‌ಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಬಹುದು. CBSE 10ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15ರಿಂದ ಮಾರ್ಚ್ 13ರವರೆಗೆ ನಡೆದಿವೆ. ಆದರೆ, 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ರಿಂದ ಏಪ್ರಿಲ್ 2ರವರೆಗೆ ಜರುಗಿದ್ದವು.

CBSE 10ನೇ, 12ನೇ ಫಲಿತಾಂಶ 2024: ಅಧಿಕೃತ ವೆಬ್‌ಸೈಟ್‌ಗಳ ಪಟ್ಟಿ

  • cbse.nic.in
  • cbse.gov.in
  • cbseresults.nic.in
  • results.cbse.nic.in
  • digilocker.gov.in
  • results.gov.in

 

WhatsApp Group Join Now
Telegram Group Join Now
Share This Article