ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಎಸ್ಐಟಿ ಪ್ರಶ್ನೆಗೆ ಸಹಕರಿಸದ ರೇವಣ್ಣ!

Ravi Talawar
ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಎಸ್ಐಟಿ ಪ್ರಶ್ನೆಗೆ ಸಹಕರಿಸದ ರೇವಣ್ಣ!
WhatsApp Group Join Now
Telegram Group Join Now

ಬೆಂಗಳೂರು, ಮೇ 05: ಅತ್ಯಾಚಾರ ಆರೋಪ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೆಚ್​ಡಿ ರೇವಣ್ಣರನ್ನು ನಿನ್ನೆ ಎಸ್​ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ನಿರೀಕ್ಷಣಾ ಜಾಮೀನಿ ಅರ್ಜಿ ವಜಾ ಬೆನ್ನಲ್ಲೇ ಬಂಧಿಸಲಾಗಿದೆ. ಇಂದು ಸಂಜೆಯೊಳಗೆ ನ್ಯಾಯಾಧೀಶರ ಮುಂದೆ ರೇವಣ್ಣರನ್ನು SIT ಹಾಜರುಪಡಿಸಲಿದೆ.

ಮಧ್ಯೆ ರಾತ್ರಿ ಎಸ್​​ಐಟಿ ಅಧಿಕಾರಿಗಳು ಹೆಚ್​ಡಿ ರೇವಣ್ಣ ಬಳಿ ಮಾಹಿತಿ ಪಡೆದುಕೊಂಡಿದ್ದು, ಆದರೆ ಎಸ್​ಐಟಿ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿಲ್ಲ ಎನ್ನಲಾಗುತ್ತಿದೆ.

ಎಸ್​​ಐಟಿ ಅಧಿಕಾರಿಗಳು ಹೆಚ್​ಡಿ ರೇವಣ್ಣರನ್ನು ವಿಚಾರಣೆ ಮಾಡಿದ್ದು,ಕಿಡ್ನ್ಯಾಪ್​ಗೂ ನನಗೂ ಸಂಬಂಧವಿಲ್ಲ. ತಾನು ಯಾರಿಗೂ ಕಿಡ್ನ್ಯಾಪ್ ಮಾಡಿ ಎಂದು ಹೇಳಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ರಾತ್ರಿ ಮಲಗಲು ಸಿಐಡಿ ಸೆಲ್​ನಲ್ಲಿ ಇರಿಸದೇ ಎಸ್​ಐಟಿ ತನ್ನ ಕಛೇರಿಯಲ್ಲಿ ವ್ಯವಸ್ಥೆ ಮಾಡಿದ್ದು, ಹೀಗಾಗಿ ರಾತ್ರಿ ರೇವಣ್ಣರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಲ್ಲ. ಇಂದು ಕೆಲ ಪ್ರಶ್ನೆಗಳನ್ನು ಮಾಡಲಿರುವ ಎಸ್​ಐಟಿ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ತೀರ್ಮಾನಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೂರು ನೀಡಬಾರದು ಎಂದು ಆಕೆಯನ್ನು ಅಪಹರಣ ಮಾಡಿದ ಗಂಭೀರ ಆರೋಪ ಈಗ ಹೆಚ್​​ಡಿ ರೇವಣ್ಣ ಮೇಲಿದೆ. ಅತ್ಯಾಚಾರ ವಿಚಾರ ರೇವಣ್ಣರಿಗೆ ಗೊತ್ತಿತ್ತಾ? ವಿಚಾರ ಗೊತ್ತಿದ್ದು ಅತ್ಯಾಚಾರ ಮಾಡಿದ್ದ ಆರೋಪಿ ಪ್ರಜ್ವಲ್ ರೇವಣ್ಣರಿಗೆ ಸಹಾಯ ಮಾಡುವ ಉದ್ದೇಶದಿಂದ ಕಿಡ್ನ್ಯಾಪ್ ಮಾಡಿಸಿದರಾ? ದೂರು ಕೊಟ್ಟಲ್ಲಿ ನಿನಗೆ ಏನಾದರೂ ಮಾಡುತ್ತೇವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆಯೇ? ಹೀಗೆ ಹಲವಾರು ಆಯಾಮದಲ್ಲಿ ಎಸ್​ಐಟಿ ವಿಚಾರಣೆ ನಡೆಸಲಿದೆ.

ಇತ್ತ ಕಿಡ್ನ್ಯಾಪ್ ಆಗಿರುವ ಮಹಿಳೆ ನಿನ್ನೆ ಎಸ್​ಐಟಿಗೆ ಸಿಕ್ಕಿದ್ದಾರೆ. ಹೀಗಾಗಿ ಮಹಿಳೆಯ ಹೇಳಿಕೆ ಬಹುಮುಖ್ಯವಾಗಿದೆ. ಇಂದು ರೇವಣ್ಣ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಮೊದಲೇ ಎಸ್​ಐಟಿ ಮಹಿಳೆಯಿಂದ ಮಾಹಿತಿ ಮತ್ತು ಹೇಳಿಕೆಯ ಮಾಡಿಕೊಳ್ಳಲಿದೆ.

WhatsApp Group Join Now
Telegram Group Join Now
Share This Article