ಕಾಂಗ್ರೆಸ್‌ನ ಬೆನ್ನೆಲುಬು ಪಂಚಮಸಾಲಿ ಸಮಾಜದವರು: ಸಚಿವ ಎಚ್.ಕೆ. ಪಾಟೀಲ

Ravi Talawar
ಕಾಂಗ್ರೆಸ್‌ನ ಬೆನ್ನೆಲುಬು ಪಂಚಮಸಾಲಿ ಸಮಾಜದವರು: ಸಚಿವ ಎಚ್.ಕೆ. ಪಾಟೀಲ
WhatsApp Group Join Now
Telegram Group Join Now

ಗದಗ: ಗದಗ: ನಾವು, ನೀವೆಲ್ಲ ರೈತಾಪಿ ಕುಟುಂಬದವರು. ಕೆ.ಎಚ್. ಪಾಟಿಲ ಅವರ ಕಾಲದಿಂದಲೂ ನಮ್ಮ ಕುಟುಂಬಕ್ಕೆ ರಾಜಕೀಯ ಬೆನೆಲುಬಾಗಿ ನಿಂತವರು  ಪಂಚಮಸಾಲಿ ಸಮಾಜದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಅದೇ ರೀತಿ ಈ ಬಾರಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯವರೇ ಆದ ಆನಂದಸ್ವಾಮಿ ಗಡ್ಡದೇವರಮಠ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರನ್ನೂ ಕೂಡ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ನಗರದ ಎಪಿಎಂಸಿ ಆವರಣದಲ್ಲಿನ ಬಸಪ್ಪ ಬಡ್ನಿ ಅವರಿಗೆ ಸೇರಿ ಜಾಗದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಪಂಚಮಸಾಲಿ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.

ಯಾವ ಹಳ್ಳಿಗಳಿಗೆ ಹೊದರೂ ನಮ್ಮ ಬೆನ್ನೆಲುಬಾಗಿ ನಿಂತವರು ಪಂಚಮಸಾಲಿ ಸಮಾಜದವರು. ಸಮಾಜ ಇತ್ತೀಚಿನ ದಿನಗಳಲ್ಲಿ ಜಾಗೃತವಾಗಿದೆ. 1990ಕ್ಕೂ ಮುಂದೆ ರಾಜಕೀಯವಾಗಿರುವ ಸ್ಥಾನಮಾನಗಳು ಸಿಗುತ್ತಿರಲಿಲ್ಲ. 1990ರ ನಂತರ ನಮ್ಮ ತಂದೆ ಕೆ.ಎಚ್. ಪಾಟೀಲರು ರಾಮದುರ್ಗದಲ್ಲಿ ಎಂ.ಬಿ. ಪಾಟೀಲರಿಗೆ ಟಿಕೆಟ್ ಕೊಡಿಸುವುದರಿಂದ, ಬೆಳಗಾವಿಯ ಜಿಲ್ಲೆಯಲ್ಲಿ ನಿಮ್ಮ ಸಮಾಜಕ್ಕೆ ಸರಿಯಾದ ಹಂಚಿಕೆ, ಧಾರವಾಡ ಜಿಲ್ಲೆಯಲ್ಲಿ ನಿಮ್ಮ ಸಮುದಾಯಕ್ಕೆ ಸ್ಥಾನಮಾನ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಾವು ನಿಮ್ಮ ಸಮುದಾಯದವರಲ್ಲ. ಆದರೆ, ನಾವು ನೀವು ರೈತರು ಎಂಬ ಕಾರಣಕ್ಕೆ ಸದಾವಕಾಲ ಎಪಿಎಂಸಿಯಲ್ಲಿ ಒಂದಾಗಿ ಎಪಿಎಂಸಿ ಗಟ್ಟಿಯಾಗಿ ರೈತರ ಬಳಿ ಉಳಿಯಲು ಡಿ.ಆರ್. ಪಾಟೀಲ ಅವರ ಬೆಂಬಲಕ್ಕೆ ನಿಂತಿರುವುಕ್ಕೆ ಎಲ್ಲವೂ ಸಾಧ್ಯವಾಯಿತು ಎಂದು ಹೇಳಿದರು.

ನುಡಿದಂತೆ ನಡೆದಿದ್ದೇವೆ ನಾವು, ರೈತ ಪರ ನಿಲ್ಲುವವರು ನಾವು, ರೈತರಿಗೆ ಸಾಲ ಮನ್ನಾ ಮಾಡಬೇಕು ಎಂದು ಹೋರಾಟ ಮಾಡಿದವರು ನಾವು. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಬಂದರೆ, ನಮ್ಮ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಆಶೀರ್ವಾದ ಮಾಡಿ ಎಂಪಿ ಮಾಡಿದರೆ, ಕೇಂದ್ರದಲ್ಲಿ ನಮಗೆ ಸಿಗುವ ಅಧಿಕಾರದ ಮೂಲಕ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ಯಾವುದೇ ರಾಜಕೀಯ ಪಕ್ಷ ಇಲ್ಲಿಯವರೆಗೆ ಇಂತಹ ದೊಡ್ಡ ಆಶ್ವಾಸನೆಯನ್ನು ಚುನಾವನೆ ಭರವಸೆಯನ್ನಾಗಿ ಕೊಟ್ಟಿರಲೇ ಇಲ್ಲ ಎಂದು ಹೇಳಿದರು.

ದೇಶದಲ್ಲಿ 3 ಲಕ್ಷ ಕೋಟಿ ರೂ. ನಮ್ಮ ರೈತರ ಸಾಲವಿದೆ. ರೈತರ ಸಾಲವನ್ನು ಮನ್ನಾ ಮಾಡುವುದು ದೊಡ್ಡ ಕೆಲಸವೇ ಆಗಿದೆ. ಆದರೆ, ಇದನ್ನು ನಾವು ಮಾಡಿ ತೋರಿಸುತ್ತೇವೆ ಎನ್ನುವ ಛಲವನ್ನು ನಮ್ಮ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ವ್ಯಕ್ತಪಡಿಸಿದ್ದಾರೆ. ಅದಲ್ಲದೇ, ನಿರುದ್ಯೋಗಿ ಯುವಕರಿಗೆ 1 ಲಕ್ಷ ರೂ., 25 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ, ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಹಾಗೂ ಜಾತಿ ಜನಗಣತಿ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜದ ಶಾಂತಗಿರಿ ವಕೀಲರು ನಗರಸಭೆಯ ಮೊದಲ ಸದಸ್ಯರು. ನಿಮ್ಮ ಸಮಾಜದ ಕೆ.ಎಚ್. ಪಾಟೀಲ ಅವರಿಗೆ ಬೆಂಬಲ ನೀಡಿದ್ದರಿಂದಲೇ ಅವರು ಎತ್ತರಕ್ಕೆ ಏರಿದರು. ನಮಗೆ ಸ್ಥಾನ ಮಾನ ಕೊಡಿಸಿದವರೇ ನೀವು. ನಿಮ್ಮ ಉಪಕಾರ ನಮ್ಮ ಮೇಲಿದೆ. ಮುಂದಿನ ಜನ್ಮದಲ್ಲೂ ಇದೇ ಋಣಾನುಬಂಧ ಮುಂದುವರಿಯುತ್ತದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅನಿಲ ಪಾಟೀಲ ಮಾತನಾಡಿ, ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯ ಭವನಕ್ಕೆ ಜಾಗ ನೀಡುವುದಾಗಿ ಹೇಳಿದ್ದ ಸಚಿವ ಎಚ್.ಕೆ. ಪಾಟೀಲ ಅವರು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಿನಲ್ಲಿ ಕಳಸಾಪೂರ ರಸ್ತೆಯಲ್ಲಿ ಒಂದು ಎಕರೆ ಸಿಎ ಸೈಟ್ ನೀಡಿ, ಒಂದು ಕೋಟಿ ರೂ. ಮೀಸಲಿಟ್ಟಿದ್ದಾರೆ. ನಾವು ಕೆ.ಎಚ್. ಪಾಟೀಲ ಅವರ ಕಾಲದಿಂದಲೂ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತ ಬಂದಿದ್ದು, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದರು.

ಮುಖಂಡರಾದ ಬಾಲಚಂದ್ರ ಭರಮಗೌಡ್ರ, ಅಜ್ಜನಗೌಡ ಪಾಟೀಲ, ಸಿ.ಕೆ. ಮಾಳಶೆಟ್ಟಿ, ಎಸ್.ಪಿ. ಬಳಿಗಾರ, ಕಲ್ಲಣ್ಣ ಮನಗುಂಡಿ, ಚನ್ನಪ್ಪಣ್ಣ ಜಗಲಿ, ಹಾಲಪ್ಪ ಅಮರಗೋಳ, ಬಸವರಾಜ ದೇಸಾಯಿ, ನಾಗರಾಜ ಹೊಂಬಳಗಟ್ಟಿ, ಮಹಾದೇವಪ್ಪ, ರುದ್ರಮ್ಮ ಕೆರಕಲಮಟ್ಟಿ, ನೀಲಮ್ಮ ಬೋಳನವರ, ಮೀನಾಕ್ಷಿ ಬೆನಕಣ್ಣವರ, ಲಲಿತಾ ಗೊಳಗೊಳಕಿ, ಜಾನಕಿ ಮಲ್ಲಾಪೂರ, ದ್ರಾಕ್ಷಾಯಿಣಿ ಕರಿಬಿಷ್ಠಿ, ವಿ.ಕೆ. ಮಟ್ಟಿ. ಚನ್ನವೀರಪ್ಪ ಮಳಗಿ, ಬಾಲಚಂದ್ರ ಭರಮಗೌಡ, ಶರಣು ಗೊಳಗೊಳಕಿ ಸೇರಿ ಪಂಚಮಸಾಲಿ ಸಮಾಜದ ಮುಖಂಡರು ಹಾಜರಿದ್ದರು.

WhatsApp Group Join Now
Telegram Group Join Now
Share This Article