ಬಳ್ಳಾರಿ,ಮೇ.3: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಆಗುತ್ತೆ ಎಂದು ಕಾಂಗ್ರೆಸ್ ನವರು ಸುಳ್ಳು ಅಸ್ತ್ರವನ್ನು ಈ ಚುನಾವಣೆಯಲ್ಲಿ ಬಿಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎಂದು ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಬಿಜೆಪಿ ಮುಖಂಡ ಎನ್.ಮಹೇಶ್ ಹೇಳಿದರು. ನಗರದ ಮೋಕಾ ರಸ್ತೆಯ ವಾಜಪೇಯಿ ಬಡಾವಣೆಯಲ್ಲಿರುವ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ದೇಶದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ದೇಶ ಅಭಿವೃದ್ಧಿಯಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ. ದೇಶ ಕಾಂಗ್ರೆಸ್ ಆಡಳಿತದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಆದರೆ ಮೋದಿಯವರು
ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕವಾಗಿ ಐದನೇ ಸ್ಥಾನದಲ್ಲಿದೆ. ಹಾಗಾಗಿ ಕಾಂಗ್ರೆಸ್ ಈ ಸಾರಿ ಚುನಾವಣೆ ಎದುರಿಸಲು ಅವರ ಬಳಿ ಯಾವುದೇ ಅಜೆಂಡಾ ಇಲ್ಲ. ಹಾಗಾಗಿ ಕಾಂಗ್ರೆಸ್ ನವರು ಎರಡು ಸುಳ್ಳುಗಳನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಮೊದಲನೇಯಿದ್ದು ಮೀಸಲಾತಿ ಹಾಗೂ ಸಂವಿಧಾನ ಬದಲಾವಣೆ ಇವೆರಡೂ ವಿಷಯಗಳನ್ನು ಜನರಿಗೆ ತಪ್ಪು ಮಾಹಿತಿಯನ್ನು ನೀಡಿ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಮೋದಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಾನು ಬದುಕಿರುವವರೆಗೂ ಸಂವಿಧಾನ ಬದಲಾವಣೆಯ ಪ್ರಶ್ನೆಯೇ ಇಲ್ಲ. ಹರಿ ಬ್ರಹ್ಮ ಬಂದರು ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮೀಸಲಾತಿ ರದ್ದು ಕುರಿತು ಸುಳ್ಳು ಸುದ್ದಿಯನ್ನು ಕಾಂಗ್ರೆಸ್ನವರು ಪ್ರಚಾರ ಮಾಡ್ತೀದ್ದಾರೆ ಎಂದು ಅವರು ಹೇಳಿದರು.
ದೇಶದ ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರ ನಂತರದಲ್ಲಿ ಮೀಸಲಾತಿ ವಿರೋಧಿಸಿದ್ದು ಕಾಂಗ್ರೆಸ್ನವರು ವಿನಃ ಬಿಜೆಪಿಯಲ್ಲ. 1962 ರಲ್ಲೇ ರಾಹುಲ್ ಗಾಂಧಿಯವರ ತಾತ ನೆಹರು ಅವರು ಮೀಸಲಾತಿಯ ಕುರಿತು ವಿರೋಧಿಸಿದ್ದನ್ನು ಈ ದೇಶದ ಮರೆಯುವಂತಿಲ್ಲ. ಬಿಜೆಪಿಯವರನ್ನು ಆರ್ ಎಸ್ ಎಸ್ ನಿಯಂತ್ರಣ ಮಾಡುತ್ತೆ ಅಂತ ಆರೋಪಿಸುವ ಕಾಂಗ್ರೆಸ್ ಆರ್.ಎಸ್.ಎಸ್. ನ ಮುಖ್ಯಸ್ಥರಾದ ಮೋಹನ್ ಭಗವತ್ರವರು ದೇಶದಲ್ಲಿ ಜಾತಿ ಪದ್ಧತಿ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ಮೀಸಲಾತಿ ಇರುತ್ತೆ ಎಂದು ಹೇಳಿದ್ದಾರೆ. ಅಲ್ಲದೇ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನ ಬದಲಾವಣೆಯ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿರುವುದನ್ನು ಪಕ್ಷ ಸಹಿಕೊಳ್ಳದೆ, ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಕೆಲಸ ಮಾಡಿದ ನಂತರ ಈ ಚುನಾವಣೆಯಲ್ಲಿ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಇಂತಹ ಸಂವಿಧಾನ ವಿರೋಧಿ ಹೇಳಿಕೆಗಳಿಗೆ ಪಕ್ಷ ಒಪ್ಪುವುದಿಲ್ಲ ಎಂದು ಸಾಬೀತು ಪಡಿಸಿದೆ ಎಂದರು.
ಕಾಂಗ್ರೆಸ್ನವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಯ ಹಣ, ಶೈಕ್ಷಣಿಕ ಅಭಿವೃದ್ಧಿಯ ಹಣ, ಅರ್ಥಿಕ ಅಭಿವೃದ್ಧಿಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದಗಳಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಈ ದೇಶದಲ್ಲಿ ಏನೂ ಮಾಡಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಅದನ್ನು ಮೇಲೆತ್ತಿದ್ದು ಮೋದಿಯವರು ಅನ್ನೊದನ್ನು ಯಾರು ಮೆರೆಯುವಂತಿಲ್ಲ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ, ದಲಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಆಗಿದ್ದು ಬಿಜೆಪಿ ಸರಕಾರದ ಅವಧಿಯಲ್ಲಿ ವಿನಃ ಕಾಂಗ್ರೆಸ್ನ ಅವಧಿಯಲ್ಲಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಹಾಗಾಗಿ ಈ ಸಾರಿ ನಮ್ಮ ಸಮುದಾಯದ ಜನ ಬಿಜೆಪಿ ಬೆಂಬಲಿಸಲಿ ಶ್ರೀರಾಮುಲುರವರನ್ನು ಗೆಲ್ಲಿಸಿ. ಮೋದಿಯವರ ಕೈ ಬಲಪಡಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮುರಹರಿಗೌಡ, ದಾಸರಿ ಗೋವಿಂದ, ಹೆಚ್.ಹನುಮಂತಪ್ಪ, ಐನಾಥ ರೆಡ್ಡಿ, ರಾಮಚಂದ್ರ, ರಾಜೇಶ್, ಬಿ.ಇ, ತಿಪ್ಪೇಸ್ವಾಮಿ, ಶಿವಶಂಕರ, ಅರುಣಾ ಚಲಂ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.