ಹುಕ್ಕೇರಿ,03: ಮೋದಿಯವರು ಈ ದೇಶಕ್ಕೆ ಅಂಟಿದ್ದ ಭಯೋತ್ಪಾದನೆ ನಿರ್ಮೂಲನೆ ಮಾಡಿದರು. ಕರ್ನಾಟಕದ ಕಾಂಗ್ರೇಸ್ ಸರ್ಕಾರ ಎಸ್ಡಿಪಿಐ ಸಮರ್ಥನೆ ಮಾಡಿಕೊಳ್ತಿದೆ. ಎಸ್ಡಿಪಿಐ ಸಹಕಾರ ಪಡೆದು ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಟೋಟಗೊಂಡ್ರೆ. ಗ್ಯಾಸ್ ಸಿಲಿಂಡರ್ ಸ್ಪೋಟ ಅಂತಾ ವಾದಿಸಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಎನ್ಐಎ ತಂಡ ಬಂದು ಎಸ್ಡಿಪಿಐ ಅವರೇ ಬ್ಲಾಸ್ಟ್ ಮಾಡಿದ್ದು ಅಂತಾ ಹೊರ ಹಾಕಿದೆ. ನೀವು ಚಿಂತೆ ಮಾಡಬೇಡಿ ಕಾಂಗ್ರೆಸ್ ಸರ್ಕಾರ ಎನೇ ಮಾಡಲಿ. ನೀವು ಅಣ್ಣಾಸಾಹೇಬ್ ಜೊಲ್ಲೆಗೆ ಮತ ನೀಡಿ ಅವರನ್ನು ಗೆಲ್ಲಿಸಿ.ಮತ್ತೊಮ್ಮೆ ಮೋದಿಯನ್ನ ಪ್ರಧಾನಿ ಮಾಡಿ, ಮೋದಿಯವರು ಕರ್ನಾಟಕವನ್ನ ರಕ್ಷಣೆ ಮಾಡುತ್ತಾರೆ. ನೇಹಾ ಹತ್ಯೆಯನ್ನು ಭಾಷಣದಲ್ಲಿ ಉಲ್ಲೇಖಿಸಿದ ಶಾ. ನೇಹಾ ಹಿರೇಮಠ ಕೇಸ್ ವೈಯಕ್ತಿಕ ವಿಚಾರ ಅಂತಾ ಕಾಂಗ್ರೆಸ್ ನವರು ಹೇಳಿದ್ದರು. ಎಂದು ಹೇಳಿದರು.
ಇದು ವೈಯಕ್ತಿಕ ಅಲ್ಲಾ ಮತಾಂತರ ಆಗಲು ನೇಹಾ ಒಪ್ಪದಿದ್ದಕ್ಕೆ ಹತ್ಯೆಯಾಗಿದೆ. ಈ ಪ್ರಕರಣಕ್ಕೆ ಸರಿಯಾಗಿ ನ್ಯಾಯ ಸಿಗಬೇಕು ಅಂದ್ರೆ ಸಿಬಿಐಗೆ ವಹಿಸಬೇಕು. ಆಗ ಅನ್ಯಾಯ ಮಾಡಿದವರಿಗೆ ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ. ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಯ ತಂದೆ ಅನಧಿಕೃತವಾಗಿ ಗಣಿಗಾರಿಕೆ ಮಾಡ್ತಾರೆ. ಅವರ ಕುಟುಂಬಸ್ಥರು ಗುಡ್ಡ ಕಟಾವು ಮಾಡಿ ಜಾಗ ಕಬ್ಜಾ ಮಾಡಿದ್ದಾರೆ. ಹಿಂದೂ ಸಂಸ್ಕೃತಿ ಹಾಗೂ ಹಿಂದೂ ಮಹಾನ್ ನಾಯಕರ ಅಪಮಾನಿಸುತ್ತಾರೆ. ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ. ಕಳ್ಳಬಟ್ಟಿ ಸಾರಾಯಿ ತಯಾರಿಸುವವರು ಇವರ ಜೊತೆಗೆ ಇದ್ದಾರೆ. ಸಾವಿರಾರು ಎಕರೆ ಜಮೀನುಗಳನ್ನ ಕಬಳಿಸಿದ್ದಾರೆ. ಕಮಿಷನ್ ಪಡೆಯಲು ಅವರ ಏಜೆಂಟರು ನಿರತರಾಗಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ವಿರುದ್ಧವೇ ಗಂಭೀರ ಆರೋಪ ಮಾಡಿದರು.
ನನ್ನ ಆತ್ಮೀಯ ಗೆಳೆಯ ಅಣ್ಣಾಸಾಹೇಬ್ ಜೊಲ್ಲೆ ಎಂದು ಹೇಳ್ತಾ ಭಾಷಣ ಆರಂಭಿಸಿದ ಶಾ. ಬಿರು ಬಿಸಿಲಿನಲ್ಲಿ ನಿಂತ ನಿಮಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳ್ತೆನಿ. ಹೊಳೆಮ್ಮಾ ದೇವಿ, ಯಲ್ಲಮ್ಮ ದೇವಿ ನೆನೆದ ಅಮಿತ್ ಶಾ. ಹಿಂದೂ ಧರ್ಮ ಸ್ಥಾಪಿಸಿದ ಶಿವಾಜಿ ಮಹಾರಾಜರನ್ನ ನೆನೆದು ಭಾಷಣ ಶುರು ಮಾಡುತ್ತೇನೆ. ಕುಟುಂಬವಾದಿ ಕಾಂಗ್ರೆಸ್ ಬೇಕಾ ಅಥವಾ ಬಿಜೆಪಿ ಪಕ್ಷ ಬೇಕೊ. ಹತ್ತು ವರ್ಷ ಮೋದಿ ಹತ್ತು ವರ್ಷ ಆಡಳಿತ ನಡೆಸಿದ್ದು. ಇದಕ್ಕೆ ಚಿಕ್ಕೋಡಿ, ಕರ್ನಾಟಕದ ಜನರ ಪಾತ್ರವೂ ಇದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕಿತ್ತಾ ಇಲ್ವಾ. ಕಾಂಗ್ರೆಸ್ ಪಕ್ಷ 70 ವರ್ಷದಿಂದ ರಾಮ ಮಂದಿರ ವಿಚಾರ ಮುಂದಿಟ್ಟುಕೊಂಡು ಬಂದಿದ್ದರು.
ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ಕೊಟ್ರೂ ಖರ್ಗೆ, ರಾಹುಲ್ ಬಾಬಾ ಬರಲಿಲ್ಲ. ಅವರ ವೋಟ್ ಬ್ಯಾಂಕ್ ಸಲುವಾಗಿ ಅಯೋಧ್ಯೆಗೆ ಬರಲಿಲ್ಲ. ನಮಗೆ ವೋಟ್ ಬ್ಯಾಂಕ್ ಚಿಂತೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕಿತ್ತು ಮಾಡಿದವೇವು. ಕಾಶಿ ವಿಶ್ವನಾಥ್, ಸೋಮನಾಥ ದೇವಸ್ಥಾನ, ಕೇದಾರನಾಥ ಬದರಿನಾಥ, ಪುನರುತ್ಥಾನ ಮಾಡ್ತಿದ್ದೇವೆ. ಇಂತಹ ಅನೇಕ ವಿಚಾರಗಳನ್ನ ಕಾಂಗ್ರೆಸ್ ಎನೂ ಮಾಡದೇ ಹಾಗೇ ಇಟ್ಟುಕೊಂಡು ಬಂದಿದ್ದರು. ಕಾಶ್ಮೀರ ನಮ್ಮದು ಅಲ್ವೋ ಅಂತಾ ನೀವು ಹೇಳಿ. ಕಾಶ್ಮೀರ ವಿಚಾರದಲ್ಲಿ ಚಿಕ್ಕೋಡಿ ಯುವಕರು ಜೀವ ಕೊಡಲು ಸಿದ್ದರಿದ್ದಾರೆ. ಖರ್ಗೆಯವರು ಕಾಶ್ಮೀರ ತಗೊಂಡು ಎನೂ ಮಾಡ್ತಿರಿ ಅಂತಾರೆ. ಕರ್ನಾಟಕ ಮತ್ತು ರಾಜಸ್ಥಾನಕ್ಕೆ ಎನೂ ಕೊಟ್ಟಿದೀರಿ ಎಂದು ಕೇಳ್ತಾರೆ. ಭಾಷಣ ಮಧ್ಯೆ ಪೊಲೀಸರಿಗೆ ಗದರಿದ ಅಮಿತ್ ಶಾ. ಜನರನ್ನ ಕಳುಹಿಸುತ್ತಿದ್ದನ್ನ ತಡೆದು ನಿಲ್ಲಲು ಹೇಳಿದ ಶಾ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಸಮಯದಲ್ಲಿ 10 ಸಾವಿರ ಹಣವನ್ನು ರೈತರಿಗೆ ಕೊಡ್ತಿದ್ದೆವು. ಆದರೆ ಅದನ್ನ ಈ ಸರ್ಕಾರ ಬಂದ್ ಮಾಡಿದೆ.ರೈತರ ಪರವಾಗಿ ಇದ್ದೇವೆ ಅನ್ನೋ ಈ ಸರ್ಕಾರ ಯಾಕೆ ರೈತರ ನಾಲ್ಕು ಸಾವಿರ ಬಂದ್ ಮಾಡಿದ್ರಿ. ಸಿಎಂ ಅವರು ಇದಕ್ಕೆ ಉತ್ತರ ಕೊಡಬೇಕು ಯಾಕೆ ಬಂದ್ ಮಾಡಿದರು ಎಂದು. ಹತ್ತು ತಿಂಗಳಲ್ಲಿ ಕರ್ನಾಟಕವನ್ನ ಬರ್ಬಾದ್ ಮಾಡಲಾಗಿದೆ.
ವೋಟ್ ಹಾಕದಿದ್ದರೆ ಕರೆಂಟ್ ಕಟ್ ಮಾಡ್ತೇವಿ ಅಂತ ಹೇಳ್ತಿದ್ದಾರೆ ರಾಹುಲ್ ಬಾಬಾ ಆ್ಯಂಡ್ ಕಂಪನಿ ಈ ದೇಶ ಸುರಕ್ಷತೆಯಿಂದ ಇಡಲ್ಲ.ಕೇವಲ ಮೋದಿಯವರು ಮಾತ್ರ ದೇಶವನ್ನು ಸುರಕ್ಷಿತವಾಗಿ ಇಡಬಲ್ಲರು. ಊರಿ ಮತ್ತು ಫುಲ್ವಾಮಾದಲ್ಲಿ ಘಟನೆ ನಡೆದಾಗ ಭಾರತದಲ್ಲಿ ಮನಮೋಹನ್ ಸಿಂಗ್ ಅಧಿಕಾರ ಇರಲಿಲ್ಲ. ಬದಲಾಗಿ ಮೋದಿ ಸರ್ಕಾರ ಇತ್ತು ಹೀಗಾಗಿ ಪಾಕಿಸ್ತಾನ ಒಳಹೊಕ್ಕು ಸರ್ಜಿಕಲ್ಸಟ್ರೈಕ್ ಮಾಡಲಾಯ್ತು. ಹತ್ತು ವರ್ಷದಲ್ಲಿ ಆರ್ಥಿಕ ಸ್ಥಿತಿಯನ್ನು 11 ನೇ ಸ್ಥಾನದಿಂದ 5 ನೇ ಸ್ಥಾನಕ್ಕೇರಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾದ್ರೇ ದೇಶದ ಆರ್ಥಿಕ ಸ್ಥಿತಿಯಲ್ಲು ಮೂರನೇ ಸ್ಥಾನಕ್ಕೇರಲಿದೆ. ಚಂದ್ರಯಾನಕ್ಕೆ 20ಸಲ ಸೋನಿಯಾ ಗಾಂಧಿ ಪ್ರಯತ್ನಿಸಿದ್ರೂ ಸಫಲ ಆಗಲಿಲ್ಲ. ಆದರೆ ಮೋದಿಯವರು ಒಂದೇ ಬಾರಿಯಲ್ಲಿ ಚಂದ್ರಯಾನ ಸಕ್ಸಸ್ ಮಾಡಿದರು.
ರಾಯಬರೇಲಿಯಿಂದ ರಾಹುಲ್ ಬಾಬಾ ಸ್ಪರ್ಧೆ ಮಾಡುತ್ತಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿಯ ದಿನೇಶ್ ಪ್ರತಾಪ್ ಎದುರು ಸೋಲುವುದು ಖಚಿತ. ರಾಹುಲ್ ಸೋಲ್ತಾರೆ ಇದನ್ನ ಬರೆದಿಡಿ ಎಂದ ಅಮಿತ್ ಶಾ. ಕೊವಿಡ್ ಸಂದರ್ಭದಲ್ಲಿ ರಾಹುಲ್ ಬಾಬಾ ವ್ಯಾಕ್ಸಿನ್ ತಗೋಬೇಡಿ ಅದು ಮೋದಿ ಲಸಿಕೆ ಎಂದು ಅಪಪ್ರಚಾರ ಮಾಡಿದರು.
ಆದ್ರೇ ರಾಹುಲ್ ಗಾಂಧಿ ತಮ್ಮ ಸಹೋದರಿಯೊಂದಿಗೆ ರಾತೋರಾತ್ರಿ ವ್ಯಾಕ್ಸಿನ್ ತೆಗೆದುಕೊಂಡರು. 10 ವರ್ಷಗಳಲ್ಲಿ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪ ಬಂದಿಲ್ಲ. ಮೂರು ತಿಂಗಳಿಗೊಮ್ಮೆ ವಿದೇಶ ಪ್ರಯಾಣ ಮಾಡೋ ರಾಹುಲ್ ಬಾಬಾ ಬೇಕಾ. ಅಥವಾ ರಜೆ ಪಡೆಯದೇ ಕೆಲಸ ಮಾಡೋ ಮೋದಿ ಬೇಕಾ ಎಂದ ಶಾ.
ಮೂರನೇ ಬಾರಿಗೆ ಮೋದಿಯನ್ನು ಪ್ರಧಾನಿ ಮಾಡಿ ಅಣ್ಣಾಸಾಹೇಬ್ ರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದರು.
ಈ ವೇಳೆಯಲ್ಲಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ್ ಕತ್ತಿ, ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಹಾಗೂ ಜಿಲ್ಲಾ ಬಿಜೆಪಿ ಮುಖಂಡರು, ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.