ಬಸವೇಶ್ವರ ಜಯಂತಿ ನಿಮಿತ್ತ 5 ರಂದು ಬೃಹತ್ ಬೈಕ್ ರ‍್ಯಾಲಿ

Hasiru Kranti
ಬಸವೇಶ್ವರ ಜಯಂತಿ ನಿಮಿತ್ತ 5 ರಂದು ಬೃಹತ್ ಬೈಕ್ ರ‍್ಯಾಲಿ
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 0; AI_Scene: (-1, -1); aec_lux: 75.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 50;
WhatsApp Group Join Now
Telegram Group Join Now

* 8 ರಿಂದ 10 ವರೆಗೆ ಬಸವ ಜಯಂತಿ

* ಮೂರು ದಿನ ಬಸವ ಜಯಂತಿ ಉತ್ಸವ, ವಿವಿಧ ಕಾರ್ಯಕ್ರಮ: ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ

 

ಬೆಳಗಾವಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತವಾಗಿ ಮೇ.5 ರಂದು ಬೃಹತ್ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ಸಹಸ್ರಾರು ಬಸವಾಭಿಮಾನಿಗಳು ಬೈಕ್‌ ರ‍್ಯಾಲಿಯಲ್ಲಿ ಪಾಲ್ಗೊಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಸಭನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾನುವಾರ ಮೇ.5 ರಂದು ಶಿವಬಸವ ನಗರ ಲಿಂಗಾಯತ‌ ಭವನದಿಂದ ಆರಂಭವಾಗುವ ಬೈಕ್ ರ‍್ಯಾಲಿಯ ಬಸವ ಪೂಜೆಯನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ. ಉದ್ಘಾಟನೆಯನ್ನು ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ವಹಿಸಲಿದ್ದಾರೆ.

ಬೈಕ್ ರ‍್ಯಾಲಿ ಲಿಂಗಾಯತ ಭವನದಿಂದ ಆರಂಭವಾಗಿ ನಾಗನೂರು ಮಠ, ರಾಮದೇವ ಹೋಟೆಲ್, ಚನ್ನಮ್ಮ ವೃತ್ತ, ಗಣಪತಿ ಗಲ್ಲಿ, ಟಿಳಕಚೌಕ, ಕಪೀಲೇಶ್ವರ ಮೇಲಸೇತುವೆ ಶಿವಾಜಿ ಮಹಾರಾಜ ಉಧ್ಯಾನವನ ಶಹಾಪೂರ, ಬಸವೇಶ್ವರ ಸರ್ಕಲ್‌ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ನಡೆಯಲಿದೆ ಎಂದು ಹೇಳಿದರು.

8 ರಿಂದ 10 ವರೆಗೆ ಬಸವ ಜಯಂತಿ ವಿವಿಧ ಕಾರ್ಯಕ್ರಮ:
ಇದೇ ಬುಧವಾರ 8 ರಿಂದ 10 ರವಗೂ 3 ದಿನಗಳ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶ್ರೀ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಶ್ರೀ ಬಸವೇಶ್ವರ ( ಗೋವಾವೇಸ್‌) ವೃತ್ತದಲ್ಲಿ ಬುಧವಾರ 8 ರಂದು ಬೆಳಿಗ್ಗೆ 10 ಗಂಟೆಗೆ ಷಟಸ್ಥಲ ಧ್ವಜಾರೋಹಣ ಮತ್ತು ಬಸವೇಶ್ವರ ಮೂರ್ತಿ ಪೂಜೆ, ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಕಾರಂಜಿಮಠ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಶ್ರೀ ಮಲ್ಲಿಕಾರ್ಜುನ ವಿದ್ಯಾಪೀಠ ಅಧ್ಯಕ್ಷರಾದ ಗುರನಗೌಡ ಎಮ್‌ ಪಾಟೀಲ ಸೇರಿದಂತೆ ಇತರರು, ಅಧಕ್ಷತೆಯನ್ನು ಶರಣ ಗುರದೇವ ನಿಂ. ಪಾಟೀಲ ವಹಿಸಲಿದ್ದಾರೆ. ಅಕ್ಕನ ಬಳಗ ಶಹಾಪೂರ ಹಾಗೂ ಉಮಾ ನಿಜಗುಲಿ ಇವರಿಂದ ಸಂಗೀತ ಕಾರ್ಯಕ್ರಮ, ಹಾಗೂ ಪ್ರಬಂದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ವಿಜೇತರಿಗೆ 25 ಸಾವಿರ ನಗದು ಬಹುಮಾನ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಅಂದೇ ಸಂಜೆ ಮಾಸಿಕ ಅಮವಾಸ್ಯೆ ಅನುಭಾವ ಗೋಷ್ಠಿ ಪ್ರಯುಕ್ತ ಸತ್ಯಂಗ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಗುರುವಾರ 9 ರಂದು ಲಿಂಗಾಯತ ಭವನದಲ್ಲಿ ಬೆಳಿಗ್ಗೆ 10.30 ಕ್ಕೆ ವಚನ ನೃತ್ಯ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಯಶೀಲಾ ಬ್ಯಾಕೋಡ್‌ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ರಕ್ಷಾ ದೇಗಿನಾಳ ವಹಿಸಲಿದ್ದಾರೆ. ಬಸವಣ್ಣ ; ಶರಣೆಯರು ಕಂಡಂತೆ ವಿಷಯದ ಮೇಲೆ ಸಂಜೆ 4.30 ಕ್ಕೆ ಮಹಿಳಾ ಗೋಷ್ಠಿ ನಡೆಯಲಿದೆ. ಡಾ.ಗುರುದೇವಿ ಹುಲೆಪ್ಪನವರಮಠ ಗೌರವ ಅತಿಥಿಗಳಾಗಿ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶುಕ್ರವಾರ 10 ರಂದು ಸಂಜೆ 4 ಗಂಟೆಗೆ ರಾಣಿ ಚನ್ನಮ್ಮ ವೃತ್ತದಿಂದ ಭವ್ಯ ಮೆರವಣಿಗೆ ಜರುಗಲಿದ್ದು, ಬಸವ ಪೂಜೆಯನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ. ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಅಧ್ಯಕ್ಷ ಗುರುದೇವ ಪಾಟೀಲ, ಕೋಶಾಧ್ಯಕ್ಷರು ಬಾಲಚಂದ್ರ ಬಾಗಿ, ಉಪಾಧ್ಯಕ್ಷರಾದ ಪ್ರಸಾದ ಹಿರೇಮಠ, ವೀಣಾ ನಾಗಮೋತಿ, ರಕ್ಷಾ ದೇಗಿನಾಳ, ಸುಜೀತ ಮುಳಗುಂದ, ಕಾರ್ಯದರ್ಶಿ ವಿರೇಶ ಅಪ್ಪಯ್ಯನವರಮಠ ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article