ದೇಶದ ಅಭಿವೃದ್ಧಿಗೆ ಚಾರ್ಟರ್ಡ್ ಅಕೌಂಟೆಂಟ್ ಪಾತ್ರ ಬಹಳ ಮುಖ್ಯ: ಜಗದೀಶ್ ಶೆಟ್ಟರ್

Ravi Talawar
ದೇಶದ ಅಭಿವೃದ್ಧಿಗೆ ಚಾರ್ಟರ್ಡ್ ಅಕೌಂಟೆಂಟ್ ಪಾತ್ರ ಬಹಳ ಮುಖ್ಯ: ಜಗದೀಶ್ ಶೆಟ್ಟರ್
WhatsApp Group Join Now
Telegram Group Join Now
ಬಳಗಾವಿ03: ದೇಶದ ಅಭಿವೃದ್ಧಿಗೆ ಚಾರ್ಟರ್ಡ್ ಅಕೌಂಟೆಂಟ್ ಪಾತ್ರ ಬಹಳ ಮುಖ್ಯವಾಗಿದೆ.  ಚಾರ್ಟರ್ಡ್ ಅಕೌಂಟೆಂಟ್ ಸರಿಯಾದ ಸಂದರ್ಭದಲ್ಲಿ ಔದ್ಯೋಗಿಗಳಿಗೆ ಆರ್ಥಿಕವಾಗಿ ಸಲಹೆ ನೀಡುವುದರಿಂದ ದೇಶದ ಅರ್ಥಿಕತೆ ಹೆಚ್ಚು ಪ್ರಗತಿ ಕಾಣುತ್ತದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ.‌
ಗುರುವಾರ ರಾತ್ರಿ ಚುನಾವಣಾ ಪ್ರಚಾರದ ನಿಮಿತ್ಯ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್, ಕಂಪನಿಯ ಸೆಕ್ರೆಟರಿ ಹಾಗೂ ಟ್ಯಾಕ್ಸ್ ಪ್ರ್ಯಾಕ್ಟೀಸನರ್ ಜೊತೆ ಸಂವಾದ ನಡೆಸಿ ಮಾತನಾಡಿದ ಅವರು,  ಸರಿಯಾದ ಸಂದರ್ಭದಲ್ಲಿ ಟ್ಯಾಕ್ಸ್ ಗೆ ಸಂಭಂದಿಸಿದ ಮಾಹಿತಿ ಉದ್ಯೋಗಪತಿಗಳಿಗೆ ನೀಡುವ ಕೆಲಸ  ಚಾರ್ಟರ್ಡ್ ಅಕೌಂಟೆಂಟ್ಸ್ ಮಾಡುತ್ತಾರೆ. ದೇಶದಲ್ಲಿ ಒಂದೆ ತೇರಿಗೆ ನೀತಿ ಮೋದಿಯವರು ಜಾರಿಗೆ  ತಂದಿದ್ದಾರೆ ಜಿಎಸ್ ಟಿ ಜಾರಿಗೆ ತಂದಿದ್ದರಿಂದ ದೇಶದ ಅರ್ಥಿಕತೆ ಬೆಳವಣಿಗೆಗೆ ಸಹಕಾರ ಆಗಿದೆ.‌ ಜಿಎಸ್ ಟಿ ಜಾರಿಗೆ ತಂದಿದ್ದರಿಂದ ವ್ಯಾಪಾರಸ್ಥರಿಗೆ ಅನೂಕುಲ ಆಗಿದೆ‌. ಮೋದಿಯವರ ಆರ್ಥಿಕ ನೀತಿಯಿಂದ ದೇಶ ಗಟ್ಟಿ ಆಗಿದೆ.‌ 10-15 ವರ್ಷದಲ್ಲಿ ಭಾರತ ಸೂಪರ್ ಪಾವರ್ ಆಗುವ ಮೂಲಕ ನವಂಬರ್ ಒನ್ ಆಗಲಿದೆ‌ ಎಂದು ತಿಳಿಸಿದರು.‌
ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಲು ಹಿರಿಯರು ಆಶಿರ್ವಾದ ಮಾಡಿದ್ದರಿಂದ ಮೋದಿಯವರ ಪ್ರತಿನಿಧಿಯಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಇಡೀ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಜನರು ಬೆಂಬಲ ಸೂಚನೆ ನೀಡುತ್ತಿದ್ದಾರೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಿ ನಮ್ಮ ಯುವಕರು ಬೆಂಗಳೂರು, ಪುಣೆ ಹೊಗುವದನ್ನು ತಪ್ಪಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ಅವರು ತಿಳಿಸಿದರು.‌
ಈ ವೇಳೆ ರಾಜ್ಯ ಬಿಜೆಪಿ ಉಪದ್ಯಕ್ಷ ಅನಿಲ ಬೆನಕೆ, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ ಜಿರಳಿ, ಜಿತೇಶ ಗಬ್ಬುರ, ವಿಲಾಸ್ ಹಾಲಬಾವಿ, ದಿಪ್ತಿ ಅಡಕೆ, ಅರವಿಂದ ದೇಶಪಾಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article