ಗದಗ,02: ದೇಶಕ್ಕಾಗಿ ನರೇಂದ್ರ ಮೋದಿ-ಕ್ಷೇತ್ರದ ಅಬಿವೃದ್ದಿಗಾಗಿ ಬಸವರಾಜ ಬೋಮ್ಮಾಯಿ ಬೆಟಗೇರಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದಾಗ ನೇಕಾರರಿಗಾಗಿ
ಪ್ರೋತ್ಸಾಹ ಧನ, ರೈತರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು, ಇನ್ನೂ ಬಸವರಾಜ ಬೋಮ್ಮಾಯಿ ಮುಖ್ಯಮಂತ್ರಿಯಾಗಿದ ೩ ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಅನೇಕ ಜನಪ್ರವಾದ, ಬಡವರ ಪರವಾದ, ನೇಕಾರರಿಗಾಗಿ ಮಕ್ಕಳಿಗಾಗಿ ವಿದ್ಯಾ ನಿಧಿ, ರೈತರು, ಕಲಿ ಕಾರ್ಮಿಕರು, ಶೋಷಿತರ ಅಭಿವೃದ್ಧಿಯ ಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದ ಅದರಲ್ಲಿಯು ಮೀಸಲಾತಿ ಹೆಚ್ಚಳದಂತಹ ಕೆಲಸವನ್ನು ಮಾಡುವದರೊಂದಿಗೆ ರಾಜ್ಯದ ಪ್ರತಿಯೊಬ್ಬ ಜಾತಿ, ಜನಾಂಗಕ್ಕೂ ಸಮಾಜಿಕ ನ್ಯಾಯ ಕಲ್ಪಿಸುವ ಕೆಲಸಗಳಲ್ಲಿ ರೈತರ ವಿದ್ಯಾನಿಧಿಯನ್ನು ಜಾರಿಗೋಳಿಸಿದ ಮಾಜಿ ಮುಖ್ಯಮಂತ್ರಿ ಇಂದು ಹಾವೇರಿ ಗದಗ ಲೋಕಸಭಾ ಅಭ್ಯರ್ಥಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲರೂ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ವಿಶ್ವ ನಾಯಕ ನರೇಂದ್ರ ಮೋದಿ ಸರಕಾರಕ್ಕೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕು ಇದು ದೇಶ, ನಮ್ಮ ನಿಮ್ಮೇಲ್ಲರ ಸುರಕ್ಷತೆ ಅಖಂಡತೆ ವಿಷಯ ಕಾರಣ ನಿಮ್ಮ ಮತ ಬಿಜೆಪಿಗೆ ನೀಡಬೇಕು ಎಂದು ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ ಮಾತನಾಡಿದರು.
ಅವರು ಹಾವೇರಿ ಗದಗ ಲೋಕಸಭಾ ಅಭ್ಯರ್ಥಿಗಳಾದ ಬಸವರಾಜ ಬೊಮ್ಮಾಯಿ ಚುನಾವಣೆ ಪ್ರಚಾರಕ್ಕಾ ಬೆಟಗೇರಿಯ ನೇಕಾರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
ಒಂದು ರಾಜ್ಯ ಮತ್ತು ದೇಶ ಸುಭದ್ರವಾಗಿರಬೇಕಾದರೇ ಜನತೆಗೆ ಸಮೃದ್ಧ ಜೀವನ ನಡೆಸುವ ವಾತಾವರಣ ನಿರ್ಮಾಣ ಮಾಡುವ ಕೆಲಸವಾಗಬೇಕು ಅದು ಕೇವಲ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ ಅದಕ್ಕೆ ಈ ೧೦ ವರ್ಷಗಲ್ಲಿ ದೇಶವನ್ನು ಆರ್ಥಿಕವಾಗಿ ೧೨ನೇ ದಿಂದ ೫ನೇ ಸ್ಥಾನಕ್ಕೆ ತರುವುದಲ್ಲದೇ ವಿದೇಶಿ ಕಂಪನಿಗಳು ಇಂದು ಮೇಡ್ ಇನ್
ಇಂಡಿಯಾ ಯೋಜನೆಯಲ್ಲಿ ಕಂಪನಿಗಳನ್ನು ಸ್ಥಾಪಿಸುತ್ತಿದ್ದಾರೆ ಇದರ ಪ್ರತಿಫಲ ಇಂದು ಜಗತ್ತಿನ ಮೋಬೈಲ್ ಉತ್ಪಾದನೆಯಲ್ಲಿ ನಂಬರ ೧, ಸಕ್ಕರೆ ಉತ್ಪದಣೆಯಲ್ಲಿ ನಂಬರ ೧, ಗ್ರೀನ್ ಎನರ್ಜಿ ಬಳಕೆಯಲ್ಲಿ ನಂಬರ ೧, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ನಂಬರ ೨, ಮೀನುಗಾರಿಕೆಯಲ್ಲಿ ನಂಬರ ೨, ಸ್ಟೀಲ್ ಉತ್ಪಾದನೆಯಲ್ಲಿ ನಂಬರ ೨. ವಿದ್ಯತ್ ಉತ್ಪಾದನೆಯಲ್ಲಿ ನಂಬರ ೩, ಆಟೋಮೊಬೈಲ್ ಮಾರುಕಟ್ಟೆ ನಂಬರ ೪ ಸ್ಥಾನಗಳ್ಲಿ ಮುಂದುವರೆಯುತ್ತಿದೇವೆ ಇದಕ್ಕೆ ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿ ಅವರ ದೇಶದ ಭವಿಷ್ಯಕ್ಕೆ ಪೂರಕವಾಗಿ ಯೋಜನೆಗಳು ನಿರ್ಮಿಸಿ ಅವುಗಳನ್ನು ೧೦೦ಕ್ಕೆ ೧೦೦ ರಷ್ಟು ಲಾಭ ಕಟ್ಟಕಡೆಯ ವ್ಯಕ್ತಿಗೆ ಸಿಗುವಂತೆ ಮಾಡಿದ್ದರೆ ಕಾರಣ ಈ ಬಾರಿ ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿಯನ್ನು ಗೆಲ್ಲಿಸಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸುವ ಮೂಲಕ ದೇಶದ ಅಭಿವೃದ್ದಿಗೆ ನಮ್ಮ ಸಹಯೋಗ ನೀಡಬೇಕಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ನಗರಸಭೆ ಸದಸ್ಯರು ರಾಘವೆಂದ್ರ ಯಳವತ್ತಿ, ಪ್ರೇಮಾ ಬಣದ, ಅನಿಲ ಗಡ್ಡಿ, ದಶರಥರಾಜ ಕೊಳ್ಳಿ, ಎಂ.ಜಿ. ಹೊನ್ನಳಿ, ಅನಿಲ ಅಬ್ಬಿಗೇರಿ, ಬಸವರಾಜ ಇಟಗಿ ಅಧ್ಯಕ್ಷರು ಬಿಜೆಪಿ ರೈತ ಮೋರ್ಚಾ, ಆಶೋಕ ಕರೂರ ಕಾರ್ಯದರ್ಶಿ, ಜಿಲ್ಲಾ ವಕ್ತಾರರು ಎಂ.ಎಂ. ಹಿರೇಮಠ, ಆರ್.ಕೆ. ಚನ್ವಾಣ, ವೀರಣ್ಣ ಅಂಗಡಿ, ಪಕ್ಕಿರೇಶ ರಟ್ಟಿಹಳ್ಳಿ, ಮಾದ್ಯಮ ಸಂಚಾಲಕ ರಾಜೇಂದ್ರಪ್ರಸಾದ ಹೊನ್ನಗಲ್, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರು ಕೆ.ಪಿ. ಕೋಟಿಗೌಡರ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು.