ದಾವಣಗೆರೆ01: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಮಾಡುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಜ್ವಲ್ ರೇವಣ್ಣಪ್ರಕರಣವನ್ನು ಮುಚ್ಚಿಹಾಕಲು ಹೊಂದಾಣಿಕೆ ರಾಜಕಾರಣಿಗಳಿಂದ ವ್ಯವಸ್ಥಿತ ಸಂಚುನಡೆದಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಆದೇಶಿಸಿದ ತನಿಖೆಗಳು ಯಾವತ್ತೂ ಪೂರ್ಣಗೊಳ್ಳಲ್ಲ, ಪಿಎಸ್ಐ ಅ ನೇಮಕಾತಿ ಹಗರಣ ನೆನೆಗುದಿಗೆ ಬಿದ್ದಿದೆ, ಇನ್ನೆರಡು ಪೊಕ್ಸೋ ಪ್ರಕರಣಗಳ ತನಿಖೆಯಾಗುತ್ತಿಲ್ಲ, ಎಸ್ ಐಟಿಯಲ್ಲಿ ಸರ್ಕಾರದ ಅಧಿಕಾರಿಗಳೇ ಇರೋದ್ರಿಂದ ತನಿಖೆ ಸರಿಯಾಗಿ ಆಗಲ್ಲ, ಹಾಗಾಗೇ ತಾನು ಪ್ರಕರಣನ್ನು ಸಿಬಿಐ ವಹಿಸಬೇಕೆಂದು ಆಗ್ರಹಿಸಿರುವೆ ಎಂದು ಯತ್ನಾಳ್ ಹೇಳಿದರು.
ರಾಜ್ಯದಲ್ಲಿ ಎರಡು ಸಿಡಿಗಳನ್ನು ತಯಾರಿಸುವ ಫ್ಯಾಕ್ಟರಿಗಳಿವೆ, ಒಂದರ ಹೆಸರನ್ನು ಕುಮಾರಸ್ವಾಮಿಯವರು ಹೇಳಿದ್ದಾರೆ, ಮತ್ತೊಂದು ಫ್ಯಾಕ್ಟರಿಯ ಹೆಸರನ್ನು ತಾನು 8 ನೇ ತಾರೀಖು ಬಹಿರಂಗಪಡಿಸುವುದಾಗಿ ಶಾಸಕ ಹೇಳಿದರು. ಈ ಎರಡು ಕುಟುಂಬಗಳು ಸೇರಿ ರಾಜ್ಯದ ರಾಜಕಾರಣವನ್ನು ಹೊಲಸೆಬ್ಬಿಸಿವೆ ಎಂದು ಅವರು ಹೇಳಿದರು. ಮೇ7 ರಂದು ರಾಜ್ಯದಲ್ಲಿ ಎರಡನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ, ಅದು ಕೊನೆಗೊಳ್ಳಲಿ ಅಂತ ಪ್ರಾಯಶಃ ಬಸನಗೌಡ ಯತ್ನಾಳ್ ಕಾಯುತ್ತಿರಬಹುದು.