ತಮಿಳುನಾಡಿನ ಕಲ್ಲಿನ ಕ್ವಾರಿಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರ ಸಾವು

Ravi Talawar
ತಮಿಳುನಾಡಿನ ಕಲ್ಲಿನ ಕ್ವಾರಿಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರ ಸಾವು
WhatsApp Group Join Now
Telegram Group Join Now

ವಿರುದುನಗರ,01: ತಮಿಳುನಾಡು ವಿರುದುನಗರ ಜಿಲ್ಲೆಯ ಕರಿಯಾಪಟ್ಟಿ ಬಳಿಯ ಕಲ್ಲಿನ ಕ್ವಾರಿಯಲ್ಲಿ ಇಂದು (ಬುಧವಾರ) ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಾರ್ಮಿಕ ದಿನದಂದೇ ನಾಲ್ವರು ಮೃತಪಟ್ಟಿರುವುದು ದುರ್ದೈವದ ಸಂಗತಿಯಾಗಿದೆ.

ಕರಿಯಾಪಟ್ಟಿ ಸಮೀಪದ ಅವಿಯೂರು – ಕೀಲುಪ್ಪಲಿಕುಂಡು ರಸ್ತೆಯಲ್ಲಿ ಖಾಸಗಿ ಕಲ್ಲಿನ ಕ್ವಾರಿಯಲ್ಲಿ ಕಲ್ಲುಬಂಡೆಗಳಿಂದ ಜಲ್ಲಿ, ಎಂ ಸ್ಯಾಂಡ್ ಮೊದಲಾದ ಸಾಮಗ್ರಿಗಳನ್ನು ಸಿದ್ಧಪಡಿಸಲು ಬಂಡೆಗಳನ್ನು ಒಡೆಯುವ ಕಾರ್ಯ ನಡೆಯುತ್ತಿರುತ್ತದೆ. ಆದರೆ, ಕಲ್ಲಿನ ಕ್ವಾರಿ ಬಂಡೆಗಳನ್ನು ಒಡೆಯಲು ಸ್ಫೋಟಕಗಳನ್ನು ಬಳಸುತ್ತದೆ. ಇಂದು (ಬುಧವಾರ) ಆ ಕ್ವಾರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಬಂಡೆಗಳನ್ನು ಒಡೆಯಲು ತಂದಿದ್ದ ಸ್ಫೋಟಕಗಳನ್ನು ವಾಹನದಿಂದ ಕಟ್ಟಡಕ್ಕೆ ಸಾಗಿಸುವ ವೇಳೆಯಲ್ಲಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಈ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಲ್ಲದೇ ಕಟ್ಟಡದ ಬಳಿ ಸ್ಫೋಟಕಗಳಿದ್ದ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಈ ವೇಳೆ, ಸ್ಥಳದಲ್ಲಿ ಸ್ಫೋಟಕಗಳಿದ್ದು, ಇದರಿಂದಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆ ಪ್ರದೇಶದ ಸಮೀಪ ಹೋಗಲು ಸಾಧ್ಯವಾಗುತ್ತಿಲ್ಲ. ಈ ಸ್ಫೋಟದ ಸಮಯದಲ್ಲಿ, ಪ್ರದೇಶದ ಸುತ್ತ ಸುಮಾರು 20 ಕಿಲೋ ಮೀಟರ್ ದೂರದವರೆಗೆ ಕಂಪನಗಳಿಂದ ಮನೆಗಳಿಗೆ ಹಾನಿಯಾಗಿದೆ. ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳನ್ನೂ ಬಿಡುಗಡೆ ಮಾಡಲಾಗಿದೆ.

WhatsApp Group Join Now
Telegram Group Join Now
Share This Article