ಪಂಚಕಲ್ಯಾಣ ಮಹಾ ಮಹೋತ್ಸವ ಮೇ 3 ರಿಂದ ಮೇ 6ರವರೆಗೆ: ಬಿ.ಎ.ಪಾಟೀಲ

Ravi Talawar
ಪಂಚಕಲ್ಯಾಣ ಮಹಾ ಮಹೋತ್ಸವ ಮೇ 3 ರಿಂದ ಮೇ  6ರವರೆಗೆ: ಬಿ.ಎ.ಪಾಟೀಲ
WhatsApp Group Join Now
Telegram Group Join Now

ಹುಬ್ಬಳ್ಳಿ01: ಇಲ್ಲಿನ ನವನಗರದ ಪಂಚಾಕ್ಷರಿ ನಗರದ ಮುನಿಸುವೃತ ತೀರ್ಥಂಕರರ ಜೈನ ಮಂದಿರದ ಮಾನಸ್ಥಂಭೋಪರಿ ಚತುರ್ಮುಖ ಜಿನಬಿಂಬ ಪ್ತತಿಷ್ಠಾಪನಾ ಪಂಚಕಲ್ಯಾಣ ಮಹಾ ಮಹೋತ್ಸವ ಮೇ 3 ರಿಂದ ಮೇ  6ರವರೆಗೆ ನಡೆಯಲಿದೆ ಎಂದು ಉತ್ತರ ಕರ್ನಾಟಕ ಜೈನ ಮಹಾಸಂಘದ ಅಧ್ಯಕ್ಷ ಬಿ.ಎ.ಪಾಟೀಲ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂಚಕಲ್ಯಾಣ ಮಹೋತ್ಸವದ ಸಾನ್ನಿಧ್ಯವನ್ನು 108 ಪುಣ್ಯಸಾಗರ ಮುನಿಮಹಾರಾಜರು ವಹಿಸಲಿದ್ದು, ಸೋಂದಾದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮತ್ತು ವರೂರಿನ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಉಪಸ್ಥಿತರಿರುವರು ಎಂದು ಹೇಳಿದರು.

ಮೇ.6 ರಂದು ರಾಜ್ಯ ಜೈನ್ ಯುವಕ – ಯುವತಿಯರ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದ್ದು, ಇದನ್ನು ಡಾ.ಅಭಿಷೇಕ ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ. ಜೆಎಸ್ಎಸ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಅಜಿತ್ ಪ್ರಸಾದ್ ಅವರು ಜೈನ್ ಪ್ರತಿಭಾ ಪುರಸ್ಕಾರ ಯುವ ಕೈಪಿಡಿ ಪುಸ್ತಕ ಬಿಡುಗಡೆಗೊಳಿಸುವರು. ಈ ಸಮಾರಂಭದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕ ಪ್ರಜ್ವಲ್ ಗೋವನಕೊಪ್ಪ, ವೈಶಾಲಿ ಚಂದ್ರಪ್ರಭು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ 57ಜೈನ್ ಯುವಕ – ಯುವತಿಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಧರಣೇಂದ್ರ ಜವಳಿ, ಶಾಂತರಾಜ ಮಲ್ಲಸಮುದ್ರ, ಮಹಾವೀರ ದೊಂಗಡಿ ಇದ್ದರು.

WhatsApp Group Join Now
Telegram Group Join Now
Share This Article